ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರೆಗೆ ಈ ಬಾರಿಯೂ ಹಳೆಯ ಲೋಗೋ ಮುಂದುವರಿಕೆ

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 30: ನಾಡಹಬ್ಬ ದಸರೆಗೆ ಈ ಹಿಂದೆ ವಿನ್ಯಾಸಗೊಂಡಿದ್ದ ಲೋಗೋ ( ಲಾಂಛನ) ದಲ್ಲಿ ಬದಲಾವಣೆಯಿಲ್ಲ ಎಂದು ದಸರಾ ವಿಶೇಷಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಲೋಗೋ ಬದಲಾಯಿಸುವುದು ಸರಿಯಲ್ಲ, ಶಾಶ್ವತ ಲೋಗೋ ತಯಾರಿಸಿ ದಸರಾ ಕಾರ್ಯಕಾರಿ ಸಮಿತಿಯಲ್ಲಿ ಅಂತಿಮ ಗೊಳಿಸಿರುವುದರಿಂದ ಈ ಬಾರಿ ವಿನ್ಯಾಸ ಬದಲಿಸುವ ಅವಕಾಶವಿಲ್ಲ.

ಈ ಬಾರಿ ಸಾಂಪ್ರದಾಯಿಕ ದಸರಾ, ಉದ್ಘಾಟನೆ ಮಾಡಲಿದ್ದಾರೆ ಸುಧಾಮೂರ್ತಿಈ ಬಾರಿ ಸಾಂಪ್ರದಾಯಿಕ ದಸರಾ, ಉದ್ಘಾಟನೆ ಮಾಡಲಿದ್ದಾರೆ ಸುಧಾಮೂರ್ತಿ

ಈ ಹಿಂದೆ ಅಂಬಾರಿ ಹೊತ್ತ ಆನೆಯ ಚಿತ್ರವುಳ್ಳ ದಸರಾ ಮಹೋತ್ಸವದ ಲಾಂಛನವನ್ನು ಕಳೆದ ಬಾರಿಯ ಮಹೋತ್ಸವ ಸಂದರ್ಭ ಶಾಶ್ವತ ಲೋಗೋವನ್ನಾಗಿ ರೂಪಿಸಲಾಗಿದೆ. ಆ ಲೋಗೋ ನೋಡಿದ ತಕ್ಷಣ ಜನರಲ್ಲಿ ಮೈಸೂರು ದಸರಾ ಪರಿಕಲ್ಪನೆ ಮೂಡಬೇಕೆಂಬುದೇ ಅದರ ಉದ್ದೇಶದಿಂದಾಗಿ ಮುಂದಿನ ದಿನಗಳಲ್ಲೂ ಹೀಗೆ ಇರಲಿದೆ ಎಂದರು.

Dasara festival has an old logo

ಮೈಸೂರು ಅರಮನೆ, ಜಗನ್ಮೋಹನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ದಸರಾ ಇತಿಹಾಸ, ರಾಜ-ಮಹಾರಾಜರ ಪರಂಪರೆ, ಮೈಸೂರಿನ ಭೌಗೋಳಿಕ ಹಿನ್ನೆಲೆ, ಪ್ರವಾಸಿ ತಾಣಗಳು, ಸಾರಿಗೆ ವ್ಯವಸ್ಥೆ, ಮ್ಯೂಸಿಯಂಗಳು, ಪಾರಂಪರಿಕ ಕಟ್ಟಡಗಳು, ಪ್ರಾಚೀನ ದೇವಾಲಯಗಳೂ ಸೇರಿದಂತೆ ಹೋಟೆಲ್ ಉದ್ಯಮ ಕುರಿತಂತೆ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಹೆಚ್ಚು ಮಾಹಿತಿಯನ್ನು ಪ್ರವಾಸಿಗರಿಗೆ ವೆಬ್ ಸೈಟ್ ನಲ್ಲಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳುತಿಳಿಸಿದರು.

 ಈ ಬಾರಿ ಸರಳ ದಸರಾ ಮಹೋತ್ಸವ ಆಯೋಜನೆಗೆ ಚಿಂತನೆ ಈ ಬಾರಿ ಸರಳ ದಸರಾ ಮಹೋತ್ಸವ ಆಯೋಜನೆಗೆ ಚಿಂತನೆ

ಸೆಪ್ಟೆಂಬರ್.3ರ ನಂತರ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇವೆ.

ಈ ಬಾರಿ ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆಯಾದರೂ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ದಸರೆಗೆ ಮಹತ್ವದ ನಿರ್ಧಾರ: ವೀರನಹೊಸಹಳ್ಳಿಯಿಂದ ಹೊರಡಲಿದೆ ಗಜಪಡೆದಸರೆಗೆ ಮಹತ್ವದ ನಿರ್ಧಾರ: ವೀರನಹೊಸಹಳ್ಳಿಯಿಂದ ಹೊರಡಲಿದೆ ಗಜಪಡೆ

ಆದ್ದರಿಂದ ದಸರಾ ವೆಬ್ ಸೈಟ್ ಅನ್ನು ಪ್ರವಾಸಿಗರ ಗಮನದಲ್ಲಿಟ್ಟುಕೊಂಡು ಅಗತ್ಯ ಮಾಹಿತಿಯೊಂದಿಗೆ ಮರು ವಿನ್ಯಾಸ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅಭಿರಾಂ ಜಿ.ಶಂಕರ್ ತಿಳಿಸಿದರು.

English summary
Dasara Special Officer Abhiram G. Shankar said Changing the logo every year is not okay, Permanent logo was prepared and the Dasara Executive Committee was finalized. So this time there is no way to change the design.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X