ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗಸದಿಂದ ಸವಿಯಿರಿ ದಸರೆಯ ವೈಭವ : ನಾಳೆಯಿಂದ ಆರಂಭವಾಗಲಿದೆ ಹೆಲಿರೈಡ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 15:- ದಸರಾ ಮಹೋತ್ಸವ ಅಂಗವಾಗಿ ವಿಶೇಷ ಪ್ರವಾಸಿ ಚಟುವಟಿಕೆಯಾಗಿ ಹೆಲಿರೈಡ್ಸ್ ಸೇವೆಯನ್ನು ಸೆ.16ರಿಂದ ಅ.5ರವರೆಗೆ ಲಲಿತ್ ಮಹಲ್ ಹೆಲಿಪ್ಯಾಡ್ ನಲ್ಲಿ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಂದಿಪ್ ತಿಳಿಸಿದರು.

ಮೈಸೂರು ದಸರೆ ವೀಕ್ಷಣೆಗೆ ಚಾಮುಂಡಿ ಬೆಟ್ಟದಲ್ಲಿ ಬೈನಾಕ್ಯುಲರ್!ಮೈಸೂರು ದಸರೆ ವೀಕ್ಷಣೆಗೆ ಚಾಮುಂಡಿ ಬೆಟ್ಟದಲ್ಲಿ ಬೈನಾಕ್ಯುಲರ್!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ರೈಡ್ ನಲ್ಲಿ 6 ಜನರನ್ನು ಕರೆದೊಯ್ಯಬಹುದಾಗಿದೆ. 10ನಿಮಿಷಗಳ ಮೈಸೂರು ನಗರದ ವಿಹಂಗಮ ನೋಟದೊಂದಿಗೆ ಏರಿಯಲ್ ರೈಡ್ ಮಾಡಿಸಲಾಗುವುದು. ಲಲಿತ್ ಮಹಲ್ ಹೆಲಿಪ್ಯಾಡ್ ನಿಂದ ಬೆಳಿಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ಒಬ್ಬರಿಗೆ ರೂ.2300, ವಿಶೇಷಚೇತನರಿಗೆ ಹಾಗೂ 6 ವರ್ಷದೊಳಗಿನ ಮಕ್ಕಳಿಗೆ 2,200ರೂ ನಿಗದಿಪಡಿಸಲಾಗಿದೆ ಎಂದರು.

Dasara fest: Enjoy aerial view of Mysuru on choppers from tomorrow

ಇನ್ನು ಟಿಕೆಟ್ ಗಳು ಪವನ್ ಹನ್ಸ್ ಲಿಮಿಟೆಡ್, ಲಲಿತ್ ಮಹಲ್ ಹೆಲಿಪ್ಯಾಡ್ ಬುಕ್ಕಿಂಗ್ ಕೌಂಟರ್, ಆನ್ ಲೈನ್ ಬುಕ್ಕಿಂಗ್ ಗಾಗಿ -www.pawanhans.co.in, ಮೊ.ಸಂ.8828122245, 8828122260, ಹಾಗೂ ಚಿಪ್ಸನ್ ಏವಿಯೇಷನ್ ಲಿಮಿಟೆಡ್ ಲಲಿತ ಮಹಲ್ ಹೆಲಿಪ್ಯಾಡ್ ಬುಕ್ಕಿಂಗ್ ಕೌಂಟರ್, ಆನ್ ಲೈನ್ ಬುಕಿಂಗ್ ಗಾಗಿ www.bookmyshow.com ಅಥವಾ ಮೊ.ಸಂ. 8375914948 ಸಂಪರ್ಕಿಸಬಹುದು. ದಸರಾ ವೆಬ್ ಸೈಟ್ ನಿಂದಲೂ ಸಹ ಲಿಂಕ್ ನೀಡಲಾಗುತ್ತಿದೆ. www.mysoredasara.gov.in ನೋಡಬಹುದು ಎಂದು ತಿಳಿಸಿದರು.

English summary
With just a week left for the famed Mysuru Dasara festivities, there is good news for all Mysureans and tourists visiting the city. On receiving a huge response for ‘Helicopter ride’ last year, the Dasara Committee is now all set to launch the ‘Joy ride’ on helicopter from Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X