ಅದ್ದೂರಿಯಾಗಿ ಮೈಸೂರು ದಸರಾ ಆಚರಣೆ ಇಲ್ಲ

Posted By:
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 19 : ಕಾವೇರಿ ನದಿ ನೀರು ಹಂಚಿಕೆ ವಿವಾದದ ಪ್ರತಿಭಟನೆ, ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಈ ಬಾರಿಯ ದಸರಾವನ್ನು ಮಿತ ಖರ್ಚಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಮೈಸೂರು ದಸರಾ ಅಂಗವಾಗಿ ನಡೆಯುವ ಯಾವ ಕಾರ್ಯಕ್ರಮಗಳನ್ನೂ ರದ್ದುಗೊಳಿಸುವುದಿಲ್ಲ.

ಭಾನುವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಈ ಕುರಿತು ಮಾಹಿತಿ ನೀಡಿದರು. '2016ನೇ ಸಾಲಿನ ದಸರಾವನ್ನು ಅದ್ದೂರಿಯಾಗಿ ಆಚರಣೆ ಮಾಡದೆ, ಮಿತ ಖರ್ಚಿನಲ್ಲಿ ಆಚರಿಸಲಾವುದು' ಎಂದು ಹೇಳಿದರು.[ಚನ್ನವೀರ ಕಣವಿರವರಿಗೆ ಮೈಸೂರು ದಸರಾಗೆ ಆಹ್ವಾನ]

Dasara executive committee decided to cut down the expenses

'ಸುಮಾರು 10 ರಿಂದ 11 ಕೋಟಿ ವೆಚ್ಚದಲ್ಲಿ ದಸರಾ ಆಚರಣೆ ಮಾಡಲಾಗುತ್ತದೆ. ಖರ್ಚು ವೆಚ್ಚಗಳ ನಿಯಂತ್ರಣಕ್ಕೆ ಆಡಿಟರ್ ನೇಮಕ ಮಾಡಲಾಗುತ್ತದೆ. ಉಪ ಸಮಿತಿಗಳ ಕಾರ್ಯಕ್ರಮವನ್ನು ಈ ಬಾರಿ ಜಿಲ್ಲಾಧಿಕಾರಿ ಕಚೇರಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ' ಎಂದರು.[ಸಂಗೀತಗಾರರ ಗಾಡಿ ಎಳೆಯುವ ಅಭಿಮನ್ಯು!]

'ದಸರಾ ಕ್ರೀಡಾಕೂಟ ಉದ್ಘಾಟನೆಗೆ ರಿಯೋ ಒಲಂಪಿಕ್ಸ್ ವಿಜೇತರನ್ನು ಆಹ್ವಾನಿಸುವ ಆಲೋಚನೆ ಕೈ ಬಿಡಲಾಗಿದೆ. ಅಶ್ವಿನಿ ಪೊನ್ನಪ್ಪ, ದೀಪಾ ಮಲ್ಲಿಕ್ ಅವರಿಂದ ಉದ್ಘಾಟಿಸಲಾಗುತ್ತದೆ. ಯುವ ದಸರಾ ಕಾರ್ಯಕ್ರಮದ ಖರ್ಚನ್ನು 1.50 ಕೋಟಿಗೆ ಮಿತಿಗೊಳಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 1 ಕೋಟಿ ಮೀಸಲಿಡಲಾಗಿದೆ' ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.[ದಸರಾ ನಿರೀಕ್ಷೆಯಲ್ಲಿ ಸಿಂಗಾರ-ಬಂಗಾರ ಮೈಸೂರು ಅರಮನೆ]

ಅಕ್ಟೋಬರ್ 1ರಂದು ದಸರಾ ಉದ್ಘಾಟನೆ ನಡೆಯಲಿದ್ದು, ಅಂದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಅಕ್ಟೋಬರ್ 11ರಂದು ಜಂಬೂ ಸವಾರಿ ನಡೆಯಲಿದೆ. ದಸರಾ ಪ್ರಚಾರಕ್ಕಾಗಿ ಮ್ಯಾರಾಥಾನ್ ಹಮ್ಮಿಕೊಂಡಿದ್ದು, ಸರ್ಕಾರಿ ಅಧಿಕಾರಿಗಳು ಅದರಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Deputy Commissioner D.Randeep said that, Mysuru Dasara executive committee decided to cut down the expenses to Rs 11 crore from Rs 14.25 crore, We are planning to celebrate dasara with a social message.
Please Wait while comments are loading...