ಮೈಸೂರು ಅರಮನೆಯಲ್ಲಿ ಆನೆಗಳಿಗೆ ಅದ್ಧೂರಿ ಸ್ವಾಗತ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಆಗಸ್ಟ್ 27: ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು, ಕಿವಿಗೆ ಇಂಪು ನೀಡಿದ ಪೊಲೀಸ್ ಬ್ಯಾಂಡ್, ಗಂಡಾನೆಗಳು ದಂತಕ್ಕೆ ಸಿಂಗೋವೆ ಮತ್ತು ಹಣೆಪಟ್ಟಿ ತೊಟ್ಟರೆ, ಹೆಣ್ಣಾನೆಗಳು ಹಣೆಗೆ ಸಿರಿ ತೊಟ್ಟು ಸುಂದರ ಅಲಂಕಾರದೊಂದಿಗೆ ಗಾಂಭೀರ್ಯದ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದವು. ಗಜಪಡೆಯ ಈ ಅದ್ಭುತ ದೃಶ್ಯಗಳನ್ನು ನೋಡಲು ಜನ ಮುಗಿಬಿದ್ದರು.

ಈ ದೃಶ್ಯಗಳು ಗೋಚರಿಸಿದ್ದು ಶುಕ್ರವಾರ ಸಂಜೆ ಜಂಬೂಸವಾರಿಯ ಅರ್ಜುನ ನೇತೃತ್ವದ ಗಜಪಡೆ ಅರಮನೆ ಪ್ರವೇಶಿಸಿದ ಸಂದರ್ಭದಲ್ಲಿ. ಅರಮನೆಯ ಜಯ ಮಾರ್ತಾಂಡ ದ್ವಾರಕ್ಕೆ ಆಗಮಿಸಿದ ಗಜಪಡೆಯ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ಕಾವೇರಿ ಮತ್ತು ವಿಜಯಗೆ ಪುಷ್ಪಾರ್ಚನೆ ಮಾಡಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.[ಮೈಸೂರು ದಸರಾ ಗಜಪಡೆಗಳಿಗೆ 32 ಲಕ್ಷ ರುಪಾಯಿ ವಿಮೆ]

Gajapade-2

ಈ ಸಂದರ್ಭದಲ್ಲಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಮತ್ತು ಅರ್ಚಕ ಪ್ರಹ್ಲಾದ್ ರಾವ್ ಪೂಜಾ ಕೈಂಕರ್ಯ ನೆರವೇರಿಸಿದರು. ಸಚಿವ ಮಹದೇವಪ್ರಸಾದ್ ದೃಷ್ಟಿ ತೆಗೆದು ಬೂದುಗುಂಬಳ ಕಾಯಿ ಒಡೆದರು. ಬಳಿಕ ಮಂಗಳ ವಾದ್ಯ ಹಾಗೂ ಪೊಲೀಸ್ ಬ್ಯಾಂಡ್ ನಲ್ಲಿ ಅರಮನೆ ಆವರಣಕ್ಕೆ ಕರೆತರಲಾಯಿತು.[ಮೈಸೂರು ದಸರಾಕ್ಕೆ ಗೋಲ್ಡನ್ ಚಾರಿಯಟ್ ನಲ್ಲಿ ಬನ್ನಿ]

Gaja-pade-4

ಅರಮನೆ ಆನೆಬಾಗಿಲಿನಲ್ಲಿ ನಿಂತ ಗಜಪಡೆಗೆ ಅರಮನೆಯ ಮೇಲ್ಮಹಡಿಯಿಂದ ಪುಷ್ಪವೃಷ್ಟಿಗೈಯ್ಯಲಾಯಿತು. ಜಿಲ್ಲಾಧಿಕಾರಿ ಡಿ.ರಣದೀಪ್, ನಗರ ಪೊಲೀಸ್ ಕಮಿಷನರ್ ದಯಾನಂದ್, ಮೇಯರ್ ಭೈರಪ್ಪ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.
ಅರಮನೆಯ ಸಂಪ್ರದಾಯದಂತೆ ಗಜಪಡೆಗಳಿಗೆ ವಿವಿಧ ವಿಧಿವಿಧಾನಗಳನ್ನು ಮಾಡಿದ ಬಳಿಕ ಅವುಗಳಿಗಾಗಿಯೇ ವ್ಯವಸ್ಥೆ ಮಾಡಿರುವ ಶೆಡ್ ಗೆ ಕರೆದೊಯ್ಯಲಾಗಿದೆ. ಶನಿವಾರದಿಂದ ದಸರಾ ಜಂಬೂಸವಾರಿಗೆ ಅಣಿಗೊಳಿಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru dasara elephants entered palace on Friday evening. Chamundi temple priests worshipped, police band, folklore teams participated in welcome ceremony.
Please Wait while comments are loading...