ಗಜಪಡೆಗೆ ಮೈಸೂರು ಅರಮನೆಯಲ್ಲಿ ಭವ್ಯ ಸ್ವಾಗತ

Posted By:
Subscribe to Oneindia Kannada

ಮೈಸೂರು, ಆಗಸ್ಟ್ 17: ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಕ್ಯಾಪ್ಟನ್ ಅರ್ಜುನ ಸೇರಿದಂತೆ ಮೊದಲ ಹಂತದ ಎಂಟು ಆನೆಗಳನ್ನು ಇಂದು ಮೈಸೂರು ಅರಮನೆಗೆ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಇಲವಾಲದ ಅಲೋಕದಲ್ಲಿದ್ದ ಈ ಎಂಟು ಆನೆಗಳಿಗೆ ಸ್ನಾನ ಮಾಡಿಸಿ ಅವುಗಳನ್ನು ಅರಿಶಿಣ, ಕುಂಕುಮ, ಹೂಗಳಿಂದ ಅಲಂಕರಿಸಿ ಅಶೋಕಪುರಂನಲ್ಲಿರುವ ಅರಣ್ಯಭವನಕ್ಕೆ ಲಾರಿಗಳ ಮೂಲಕ ಕರೆತರಲಾಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ಮಾತನಾಡಿ, ಮೊದಲ ತಂಡದ ಆನೆಗಳು ಇಂದಿನಿಂದ ಅರಮನೆಯಲ್ಲಿ ತಂಗಲಿವೆ. ಎಲ್ಲ ಆನೆಗಳು ಆರೋಗ್ಯದಿಂದವೆ ಎಂದು ತಿಳಿಸಿದರು.

 Dasara elephants come to Mysuru palace premise

ನಂತರ ವಿಶೇಷವಾಗಿ ಶೃಂಗರಿಸಿದ ಈ ಗಜನಪಡೆಯನ್ನು ಅಶೋಕಪುರಂನಿಂದ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ಮೂಲಕ ಅರಮನೆ ಬಳಿಗೆ ಕರೆತರಲಾಯಿತು. ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ , ಮೇಯರ್ ರವಿಕುಮಾರ್, ಶಾಸಕರಾದ ಸೋಮಶೇಖರ್, ವಾಸು, ಜಿಲ್ಲಾಧಿಕಾರಿ ರಂದೀಪ್, ಪಾಲಿಕೆ ಆಯುಕ್ತ ಜಗದೀಶ್, ಅರಣ್ಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲ ಸೇರಿದಂತೆ ಇತರೆ ಅಧಿಕಾರಿಗಳು ಪೂಜೆ ಸಲ್ಲಿಸಿ ಗಜಪಡೆಯನ್ನು ಬರಮಾಡಿಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dasara elephants have come to Mysuru palace premise today. The people of Mysuru welcome Dasara elephants with joy. The elephants are preparig for world famous Mysuru Dasara which will be taking place from Sep 21st to 30th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X