ದಸರೆಯ ಆನೆಗಳಿಗೆ ಶಿಬಿರಗಳಲ್ಲಿ ನಡೆಯುತ್ತಿದೆ ವಿಶೇಷ ತಯಾರಿ..!

Posted By:
Subscribe to Oneindia Kannada

ಮೈಸೂರು, ಆಗಸ್ಟ್ 1 : ವಿಶ್ವವಿಖ್ಯಾತ ಗತವೈಭವ ಮೈಸೂರು ದಸರಾದಲ್ಲಿ ಕ್ಯಾಪ್ಟನ್ ಅರ್ಜುನ ಸೇರಿದಂತೆ 15 ಗಜಪಡೆಗಳು ಈ ಬಾರಿ ಭಾಗವಹಿಸಲಿವೆ.

ಆ.10ರಂದು ಮೈಸೂರು ದಸರಾ ಗಜಪಡೆ ಸ್ವಾಗತಕ್ಕೆ ಸಕಲ ಸಿದ್ಧತೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು, ಬಳ್ಳೆ, ಕೊಡಗಿನ ದುಬಾರೆ, ಕೆ.ಗುಡಿ ಶಿಬಿರಗಳಲ್ಲಿ ನಮ್ಮ ಆನೆಗಳಿಗೆ ಮಹಾಮಜ್ಜನ, ಭಾರಿ ಭೋಜನ ಹಾಗೂ ಪಾಲ್ಗೊಳ್ಳುವ ಎಲ್ಲ ಆನೆಗಳಿಗೆ ವಿಶೇಷ ತಯಾರಿ ನಡೆಯುತ್ತಿದೆ.

Dasara elephants are in camps special preparation

ಅರ್ಜುನನಿಗೆ 4ನೇ ಬಾರಿ ಅಂಬಾರಿ: ವಿಶ್ವ ವಿಖ್ಯಾತ ದಸರಾದಲ್ಲಿ ಈ ಬಾರಿ 15 ಆನೆಗಳ ತಂಡ ಪಾಲ್ಗೊಳ್ಳುತ್ತಿದ್ದು, ಸತತ ನಾಲ್ಕನೇ ಬಾರಿಗೆ ಅಂಬಾರಿ ಹೊರಲು ಸಿದ್ದ ನಾಗಿರುವ ಅರ್ಜುನನಿಗೆ (57) ಎಚ್.ಡಿ. ಕೋಟೆ ತಾಲ್ಲೂಕಿನ ಕೇರಳದ ಗಡಿಯಂಚಿನ ಬಳ್ಳೆ ಶಿಬಿರದಲ್ಲೂ, 13 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ (59), ಅಭಿಮನ್ಯು (51), ವರಲಕ್ಷ್ಮಿ(61), ಗೋಪಾಲ ಸ್ವಾಮಿ(35), ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಭೀಮ(17), ಕೃಷ್ಣ (56), ದ್ರೋಣ(35) ಆನೆಗಳು ಮತ್ತಿ ಗೋಡು ಶಿಬಿರದಲ್ಲೂ, ಕಾವೇರಿ(39), ವಿಕ್ರಮ(44), ಗೋಪಿ(35), ಹರ್ಷ (50), ಪಶಾಂತ (61), ್ರ ವಿಜಯ (60) ಕೊಡಗಿನ ದುಬಾರೆ ಕ್ಯಾಂಪಿನಲ್ಲಿ ಹಾಗೂ ಗಜೇಂದ್ರ (62) ಕೆ.ಗುಡಿ ಶಿಬಿರದಲ್ಲಿ ನಿತ್ಯವೂ ವಿಶೇಷ ಗಮನವಹಿಸಲಾಗಿದೆ ಹಾಗೂ ಆ.14ಕ್ಕೆ ವೀರನಹೊಸಳ್ಳಿಯಲ್ಲಿ ಗಜಪಯಣ ನಡೆಯಲಿದ್ದು, ಮೈಸೂರಿಗೆ ಗಜಪಡೆ ತೆರಳಲಿವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಈ ಬಾರಿಯ ಜಂಬೂಸವಾರಿಗೆ ಹೆಚ್ಚುವರಿಯಾಗಿ 4 ಆನೆಗಳು ಸೇರ್ಪಡೆ?

ಗಜಪಡೆಗೆ ಪುಷ್ಕಳ ಭೋಜನ : ಶಿಬಿರದಲ್ಲಿ ಎಂದಿನಂತೆ ನೀಡಲಾಗುವ ರಾಗಿ ಮುದ್ದೆ ಜೊತೆಗೆ ಪೌಷ್ಟಿಕಾಂಶಯುಕ್ತ ಗೋದಿ ಹುಡಿ, ಕುಸಲಕ್ಕಿಯನ್ನು ಬೇಯಿಸಿ, ಉಂಡೆ ಮಾಡಿ ನೀಡಲಾಗುತ್ತಿದೆ. ಅಲ್ಲದೆ ಭತ್ತದ ಕುಸುರೆಯನ್ನೂ ಕೊಡಲಾಗುವುದು. ಪಶುವೈದ್ಯ ಡಾ. ಉಮಾಶಂಕರ್, ಡಾ.ನಾಗ ರಾಜ್ ನಿತ್ಯ ಆರೋಗ್ಯ ಪರೀಕ್ಷೆ ನಡೆಸುತ್ತಿದ್ದಾರೆ. ಬಳ್ಳೆ ಶಿಬಿರದಲ್ಲಿ ಆರ್‍ಎಫ್‍ಒ ವಿನಯ್ ಹಾಗೂ ಮತ್ತಿಗೋಡು ಶಿಬಿರದಲ್ಲಿ ಆರ್‍ಎಫ್‍ಒ ಕಿರಣ್‍ಕುಮಾರ್ ಮಾರ್ಗ ದರ್ಶನದಲ್ಲಿ ಶಿಬಿರದ ಉಸ್ತುವಾರಿ ಡಿಆರ್ ಎಫ್‍ಒ ಜಗದೀಶ ನಾಯ್ಕ, ಅರಣ್ಯ ರಕ್ಷಕಿ ಶಾರದಮ್ಮ ಕಣ್ಗಾವಲಿನಲ್ಲಿ ಆರೈಕೆ ನಡೆಯುತ್ತಿದೆ.

ಹಬ್ಬದ ವಾತಾವರಣ : ಇಡೀ ಶಿಬಿರದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ಮಾವುತರು, ಕಾವಾಡಿಗಳು ದಸರೆಗೆ ತಯಾರಿಯಲ್ಲಿ ನಿರತರಾಗಿ ದ್ದಾರೆ. ನಮಗೂ ಕೂಡ ಸಂತೋಷವಿದೆ ಎನ್ನುತ್ತಾರೆ ಇಲ್ಲಿನ ಮಾವುತರು ಮತ್ತು ಕಾವಾಡಿಗಳು.

Mysuru is all set to welcome Dasara | 4 more Elephants added for Jamboosavari

ಆನೆಗಳಿಗೆ ನಿತ್ಯ ಎರಡು ಬಾರಿ ಸ್ನಾನ ಮಾಡಿಸಿ, ಕಾಡಿಗೆ ಹೋಗುವ ಮೊದಲು ನಂತರದಲ್ಲಿ ಆಹಾರ ನೀಡುತ್ತಿದ್ದೇವೆ. ದಸರಾದಲ್ಲಿ ಭಾಗವಹಿಸುವ ಆನೆಗಳ ಬಗ್ಗೆ ನಿಗಾವಹಿಸಲಾಗಿದೆ. ಈ ಬಾರಿ ಹೊಸದಾಗಿ 3 ಆನೆಗಳು ದಸರಾದಲ್ಲಿ ಭಾಗವಹಿಸಲು ತೆರಳುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ಡಿಆರ್‍ಎಫ್‍ಒ ಜಗದೀಶ್ ನಾಯ್ಕ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
15 yards will be participating, including Captain Arjuna at Mysore Dasara. Special preparation for elephants, grand dinner and all the elephants of Nagarahole National Park Ground, Vellore, Kodagu Dubey and K Gudi camps.
Please Wait while comments are loading...