ಮೈಸೂರು ದಸರಾ: ಇಲ್ಲಿದೆ ಕಾರ್ಯಕ್ರಮದ ಪಟ್ಟಿ

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 13 : ಸಾಂಸ್ಕೃತಿಕ ನಗರಿ ಮೈಸೂರು ದಸರಾ ಸಂಭ್ರಮಕ್ಕೆ ಮಧುವಣಗಿತ್ತಿಯಂತೆ ಶೃಂಗಾರಗೊಳ್ಲುತ್ತಿದ್ದರೆ, ವಿಶ್ವವಿಖ್ಯಾತಿಯ ಅರಮನೆಯಲ್ಲಿ ಶರನ್ನವರಾತ್ರಿಯ ಪೂಜಾ ಮಹೋತ್ಸವಕ್ಕೆ ಭರದ ಸಿದ್ಧತೆ ಕೈಗೊಳ್ಳಗುತ್ತಿದೆ,

ಮೈಸೂರು ಯುವ ಸಂಭ್ರಮಕ್ಕೆ ನಿರೂಪಕರು ಬೇಕಾಗಿದ್ದಾರೆ!

ಸೆ. 15ರಂದು ಬೆಳಿಗ್ಗೆ 7.45 ರಿಂದ 8.45ರವರೆಗೆ ನವಗ್ರಹ ಹೋಮ, ಇತರ ಶಾಂತಿ ಪೂಜೆಯೊಂದಿಗೆ ನವರಾತ್ರಿಯಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದ್ದು, 9.45 ರಿಂದ 10.15ರವರೆಗೆ ಅಂಬಾವಿಲಾಸದಲ್ಲಿ ಸಿಂಹಾಸನ ಜೋಡಣೆಗೆ ಚಾಲನೆ ದೊರೆಯಲಿದೆ. ಈ ವೇಳೆ ಪಟ್ಟದ ಆನೆ, ಹಸು, ಕುದುರೆ ಪಾಲ್ಗೊಳ್ಳಲಿವೆ.

Dasara 2017: Here is list of the programmes which starts form Sep 15th

ಸೆ. 21ರಂದು ಬೆಳಿಗ್ಗೆ 7.55ರಿಂದ 8.15ರವರೆಗೆ ಸಿಂಹಾಸನಕ್ಕೆ ಸಿಂಹ ಜೋಡಣೆ ಕಾರ್ಯ ನಡೆಯಲಿದ್ದು, 8.20 ರಿಂದ 9.10 ಗಂಟೆಯವರೆಗೆ ಚಾಮುಂಡಿ ತೊಟ್ಟಿಯಲ್ಲಿ ಕಂಕಣಧಾರಣ ಮಹೋತ್ಸವ ನಡೆಯಲಿದೆ. 11.15ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಸವಾರ ತೊಟ್ಟಿ ಬಳಿ ಆಗಮಿಸಲಿದ್ದು, ಮಧ್ಯಾಹ್ನ 12 ಗಂಟೆಗೆ ಕಳಸ ಪೂಜಾ ಹಾಗೂ ಇತರ ಧಾರ್ಮಿಕ ವಿಧಿ -ವಿಧಾನಗಳು ನೇರವೇರಲಿದ್ದು, ನಂತರ ಸಿಂಹಾಸನಾರೋಹಣ ಕಾರ್ಯಕ್ರಮ ನಡೆಯಲಿದೆ.

ಭಾರತೀಯ ಪರಂಪರೆಯ ಹೆಮ್ಮೆಯ ಪ್ರತೀಕ ಈ 'ಮೈಸೂರು ಪೇಟ'

ಮಧ್ಯಾಹ್ನ 12.45ರಿಂದ 12.55ರವರೆಗೆ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಡೆಯರ್ ಸಿಂಹಾಸನಾರೂಢರಾಗಿಲಿದ್ದಾರೆ. ನಂತರ 1.35ರಿಂದ 1.45ರವರೆಗೆ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಬಿಜಯಂಗೈಯಲಾಗುವುದು. ಸೆ.27ರಂದು ಬೆಳಿಗ್ಗೆ 9.15 ರಿಂದ 9.45 ರವರೆಗೆ ಸರಸ್ವತಿ ಪೂಜೆ ಆರಂಭಗೊಳ್ಳಲಿದೆ. ನಂತರ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ ನೆರವೇರಲಿದೆ.

ಸೆ. 29ರಂದು ಬೆಳಿಗ್ಗೆ 6.15 ಕ್ಕೆ ಚಂಡೀ ಹೋಮ ರಂಭಗೊಳ್ಳಲಿದ್ದು, 6.45ರ ವೇಳೆಗೆ ಆನೆ ಬಾಗಿಲು ಒಳಗೆ ಪಟ್ಟದ ಆನೆ, ಕುದುರೆ, ಹಸು ಆಗಮಿಸಲಿವೆ. ಬೆಳಿಗ್ಗೆ 7.25ರ ವೇಳೆಗೆ ಆನೆ ಬಾಗಿಲು ಮೂಲಕ ಯುಧಗಳನ್ನು ಶ್ರೀ ಕೋಡಿ ಸೋಮೇಶ್ವರಸ್ವಾಮಿ ದೇಗುಲಕ್ಕೆ ಕೊಂಡೊಯ್ಯಲಾಗುವುದು. ಅಲ್ಲಿ ಪೂಜಾ ಕಾರ್ಯಗಳನ್ನು ಮುಗಿಸಿದ ಬಳಿಕ 8.20 ರಿಂದ 8.40ರ ವೇಳೆಗೆ ಆಯುಧಗಳನ್ನು ದೇವಸ್ಥಾನದಿಂದ ಕ್ಲಯಾಣ ಮಂಟಪಕ್ಕೆ ತರಲಾಗುವುದು. ನಂತರ 8.45 ರಿಂದ 9 ಗಂಟೆಯ ವೇಳೆಗೆ ಚಂಡೀ ಹೋಮದ ಪೂರ್ಣಾಹುತಿ ನೆರವೇರಲಿದೆ.

ಯುವ ಸಂಭ್ರಮಕ್ಕೆ ಚಾಲನೆ ನೀಡಿದ ನಟಿ ಕಾರುಣ್ಯ ರಾಮ್

ಮಧ್ಯಾಹ್ನ 12.15 ಕ್ಕೆ ಆಯುಧ ಪೂಜಾ ವಿಧಾನಗಳು ಆರಂಭಗೊಳ್ಳಿದೆ. ರಾತ್ರಿ 7 ಗಂಟೆಗೆ ಅಂಬಾ ವಿಲಾಸ ದರ್ಬಾರ್ ಹಾಲ್ ನಲ್ಲಿ ಯುವರಾಜರ ದರ್ಬಾರ್ ನಡೆಯಲಿದ್ದು. ನಂತರ ಸಿಂಹಾಸನದ ಸಿಂಹ ವಿಸರ್ಜನೆ ನಡೆಯಲಿದೆ. ತದ ನಂತರ ದೇವರ ಮನೆಯಲ್ಲಿ ಕಂಕಣವನ್ನು ವಿಸರ್ಜಿಸಲಾಗುವುದು.

ಸೆ. 30ರಂದು ಬೆಳಿಗ್ಗೆ 11ಕ್ಕೆ ಆನೆ ಬಾಗಿಲು ಬಳಿ ಪಟ್ಟದಾನೆ, ಹಸು, ಕುದುರೆ ಆಗಮಿಸಲಿದ್ದು, 12.10ಕ್ಕೆ ಆಯುಧಗಳನ್ನು ಉತ್ತರ ಪೂಜೆ ನಂತರ ಶ್ರೀ ಭುವನೇಶ್ವರಿ ದೇವಸ್ಥಾನಕ್ಕೆ ಕೊಂಡೊಯ್ಯಲಾಗುವುದು. ಈ ವೇಳೆ ವಿಜಯಯಾತ್ರೆ ಶಮೀ ವೃಕ್ಷದ ಶಮೀ ಪೂಜೆ ನಡೆಯಲಿದೆ. ವಿಜಯಯಾತ್ರೆ ನಂತರ ಶ್ರೀ ಚಾಮುಂಡೇಶ್ವರಿ ಅಮ್ಮನವರನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿ ಯೊಟ್ಟಿಯಲ್ಲಿ ಬಿಜಯಂಗೈಸಲಾಗುವುದು. ಅಕ್ಟೋಬರ್ 14 ರಂದು ಬೆಳಿಗ್ಗೆ 10.45ರಿಂದ 11.45ರವರೆಗೆ ಸಿಂಹಾಸನದ ವಿಸರ್ಜನೆ ನೆರವೇರಿಸಿ ಕೊಠಡಿಯಲ್ಲಿ ಭದ್ರಪಡಿಸಲಾಗುವುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As Dasara 2017 is just a few days away, the royal family is making preparations for the annual rituals. Along with Jamboo Savari, the private darbar of the King holds a historic value in Dasara festivities. Preparations for the private darbar is going on under the guidance of Pramoda Devi Wadiyar. Yaduveer Krishnadatta Chamaraja Wadiyar will ascend the throne and hold private darbar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ