ಮೈಸೂರಲ್ಲಿ 'ಚಕ್ರವರ್ತಿ'ಗೆ ಭರ್ಜರಿ ಓಪನಿಂಗ್

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 14 : ಬಹುನೀರಿಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾಗೆ ನಗರದ ಮಾಲ್‌ನಲ್ಲಿ ಒಂದೇ ದಿನಕ್ಕೆ 18 ಪ್ರದರ್ಶನದ ವ್ಯವಸ್ಥೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದು, ಮೊದಲ ಬಾರಿಗೆ ಮೈಸೂರಿನಲ್ಲಿ ಮಧ್ಯರಾತ್ರಿ ಪ್ರದರ್ಶನ ಕಂಡ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.

ರಾಜ್ಯಾದ್ಯಂತ ಇಂದಿನಿಂದ ತೆರೆ ಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಚಕ್ರವರ್ತಿ ಸಿನಿಮಾ ಮೈಸೂರಿನ ಡಿಆರ್‌ಸಿ ಚಿತ್ರಮಂದಿದರಲ್ಲಿ ನಾಲ್ಕು ಸ್ಕ್ರೀನ್‌‌ಗಳಲ್ಲಿ ಒಂದೇ ದಿನ 18 ಪ್ರದರ್ಶನ ಕಾಣುತ್ತಿದ್ದು, ಮಧ್ಯರಾತ್ರಿ 12.30ಕ್ಕೆ ಮೊದಲ ಪ್ರದರ್ಶನ ಏರ್ಪಡಿಸಲಾಗಿದೆ. ಅಭಿಮಾನಿಗಳು ರಾತ್ರಿಯಿಂದಲೇ ಟಿಕೆಟ್ ಖರೀದಿಗಾಗಿ ಚಿತ್ರ ನೋಡಲು ಒಂದು ವಾರದ ಹಿಂದಿನಿಂದಲೇ ಟಿಕೆಟ್ ಬುಕ್ ಮಾಡಿದ್ದರು.

Darshan Movie Chakravarthy sets record in Mysore

ಚಕ್ರವರ್ತಿ ಸಿನಿಮಾದ ಮೊದಲ ಪ್ರದರ್ಶನವನ್ನ ಮಧ್ಯರಾತ್ರಿ ವೀಕ್ಷಣೆ ಮಾಡಿದ ಅಭಿಮಾನಿಗಳು ಚಿತ್ರಮಂದಿರದೊಳಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಈ ಚಕ್ರವರ್ತಿ ಸಿನಿಮಾದ ಶೂಟಿಂಗ್ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆರಂಭವಾಗಿ ಚಾಮುಂಡಿ ಬೆಟ್ಟದಲ್ಲಿ ಕುಂಬಳಕಾಯಿ ಒಡೆಯುವ ಮೂಲಕ ಮೈಸೂರಿನಲ್ಲೇ ಮುಕ್ತಾಯವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Challenging star Darshan's new movie 'Chakravarthy' recieves warm response in Mysore as it released on 14th April, 2017. In one of the malls, it has screened 18 times on first day, setting a new record in Mysore.
Please Wait while comments are loading...