ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಲಕುಪ್ಪೆ ಬೌದ್ಧ ವಿಶ್ವವಿದ್ಯಾಲಯ ಲೋಕಾರ್ಪಣೆಗೆ ದಲೈ ಲಾಮಾ

By ಲತೀಶ್ ಪೂಜಾರಿ
|
Google Oneindia Kannada News

ಮೈಸೂರು, ಡಿಸೆಂಬರ್ 07 : ಟಿಬೇಟಿಯನ್ನರ ಧಾರ್ಮಿಕ ಗುರು ದಲೈ ಲಾಮಾ ಅವರು ಡಿಸೆಂಬರ್ 13ರಿಂದ ಜನವರಿ 4ರ ತನಕ ಬೈಲಕುಪ್ಪೆಯ ಟಿಬೇಟಿಯನ್ ನಿರಾಶ್ರಿತ ಶಿಬಿರದಲ್ಲಿ ವಾಸ್ತವ್ಯ ಹೂಡಲಿದ್ದು, ಬೈಲಕುಪ್ಪೆಯ ಟಿಬೇಟಿಯನ್ ಶಿಬಿರದಲ್ಲಿ ದಲೈ ಲಾಮಾ ಅವರನ್ನು ಸ್ವಾಗತಿಸಲು ಸಕಲ ಸಿದ್ದತೆ ನಡೆಯುತ್ತಿದೆ.

ಬೈಲಕುಪ್ಪೆಯ ತಶಿಲೊಂಪೋ ಬಳಿ ನಿರ್ಮಾಣವಾಗಿರುವ ಬೃಹತ್ ಬೌದ್ಧ ಧಾರ್ಮಿಕ ವಿಶ್ವವಿದ್ಯಾಲಯವನ್ನು ದಲೈ ಲಾಮಾ ಲೋಕಾರ್ಪಣೆಗೊಳಿಸಲಿದ್ದಾರೆ. ಬೈಲಕುಪ್ಪೆಯ ಸೆರಾಮೆ ಬೌದ್ಧ ವಿಹಾರ ಕೇಂದ್ರದಲ್ಲಿ ಕೆಲ ದಿನಗಳ ಕಾಲ ತಂಗಲಿರುವ ದಲೈ ಲಾಮಾ, ವಿಶ್ವಶಾಂತಿಗಾಗಿ ಧಾರ್ಮಿಕ ಪೂಜೆ ಮತ್ತು ಪ್ರವಚನಗಳನ್ನು ನಡೆಸಲಿದ್ದಾರೆ. [ಭಾರತೀಯರೇ ನನ್ನ ಗುರು ಎಂದ ದಲೈ ಲಾಮಾ]

Dalai Lama to visit Bylakuppe Tibetan settlement

ಈಗಾಗಲೆ ವಿಶ್ವದಾದ್ಯಂತ ನೆಲೆಸಿರುವ ಅವರ ಅನುಯಾಯಿಗಳು ಬೈಲಕುಪ್ಪೆ ಶಿಬಿರಕ್ಕೆ ಆಗಮಿಸಿದ್ದು, ವಿವಿಧ ರಾಷ್ಟ್ರಗಳಿಂದ ವಿದೇಶಿ ಮಾಧ್ಯಮ ತಂಡ ಕೂಡ ಬೈಲಕುಪ್ಪೆ ಶಿಬಿರಕ್ಕೆ ಬರಲಿದ್ದಾರೆ. ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಮುಗಿಸಿ 2016ರ ಹೊಸ ವರುಷದ ಜನವರಿ 4ರಂದು ಬೈಲಕುಪ್ಪೆ ಶಿಬಿರದಿಂದ ದಲೈ ಲಾಮಾ ಹಿಂತಿರುಗಲಿದ್ದಾರೆ.

ಡಿಸೆಂಬರ್ 9ರಂದು ಹುಣಸೂರು ಸಮೀಪದ ಗುರುಪುರ ಟಿಬೇಟಿಯನ್ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ 12ರ ತನಕ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.

English summary
Tibetan religious leader Dalai Lama will be visiting Bylakuppe to inaugurate buddhist university for higher studies. He will be staying in Bylakuppe from December 13 to January 4 in Bylakuppe. Leter he will be visiting Gurupura tibet camp near Hunsur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X