ಮೈಸೂರಿನಲ್ಲಿ ಕಂಡ ಮಂಗಳಮುಖಿ ಅಸಲಿಯೋ ನಕಲಿಯೋ?

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಜನವರಿ 11: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ-ದಿನೇ ಮಂಗಳಮುಖಿಯರ ಕಾಟ ಹೆಚ್ಚಾಗುತ್ತಿದ್ದು, ಅವರ ಎಲ್ಲೆ ಮೀರಿದ ನಡವಳಿಕೆ ಜನಸಾಮಾನ್ಯನಿಗೆ ತಲೆನೋವು ತಂದೊಡ್ಡಿದೆ. ಯಾವುದೇ ಸಿಗ್ನಲ್, ಸರ್ಕಲ್, ಪಾರ್ಕ್‌ಗಳಲ್ಲಿ ನಕಲಿ ಮಂಗಳಮುಖಿಯರ ಹಾವಳಿ ಹೆಚ್ಚಾಗುತ್ತಿದೆ. ಯಾರು ನಕಲಿ ಯಾರು ಅಸಲಿ ಎಂದುದನ್ನು ಪತ್ತೆ ಹಚ್ಚುವುದೇ ಕಷ್ಟವಾಗಿದೆ.

ರೈಲು, ಬಸ್ ನಿಲ್ದಾಣಗಳಲ್ಲಿ ಮಂಗಳ ಮುಖಿಯರ ತಂಡ ಕಂಡು ಬರುತ್ತಿತ್ತು. ಆದರೆ ಈಗ ಸಣ್ಣ ಪುಟ್ಟ ರಸ್ತೆಗಳಲ್ಲೂ ಮಧ್ಯೆ ಗಾಡಿಗಳನ್ನು ಅಡ್ಡ ಹಾಕಿ ಹಣ ಪೀಕಿಸುವ ಕಾಯಕಕ್ಕೆ ಕೈ ಹಾಕಿದ್ದಾರೆ. ಇನ್ನು ಸಣ್ಣಪುಟ್ಟ ಅಂಗಡಿಗಳೆನ್ನದೇ ಮಂಗಳಮುಖಿಯರು ತೆರಳಿ ದುಡ್ಡು ಕೇಳುವ ಪರಿ ನಗರದೆಲ್ಲೆಡೆ ಸಾಮಾನ್ಯವಾಗಿಬಿಟ್ಟಿದೆ ಎನ್ನುತ್ತಾರೆ ವ್ಯಾಪಾರಸ್ಥರು. ಆದರೆ ಮಂಗಳಮುಖಿಯರು ಹೇಳುವ ಮಾತೇ ಬೇರೆ.[ಮಂಗಳಮುಖಿ ಸಾವು, ಲೈಂಗಿಕ ಅಲ್ಪಸಂಖ್ಯಾತರ ಮೌನ ಪ್ರತಿಭಟನೆ]

Cultural city plagued by fake transgender

ಇದೆಲ್ಲಾ ನಕಲಿ ಮಂಗಳಮುಖಿಯರ ಹಾವಳಿಯಾ?

''ಕೆಲವು ಗಂಡಸರು ನಮ್ಮ ರೀತಿ ವೇಷ ಧರಿಸಿಕೊಂಡು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ. ನಮ್ಮ ಸದಸ್ಯರು ಯಾವುದೇ ಕಾರಣಕ್ಕೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವುದಿಲ್ಲ. ಆದರೆ ಈ ವೇಷ ಧರಿಸುವ ನಕಲಿಗಳು ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಅವರನ್ನು ನೋಡಿದರೆ ನಮಗೂ ಕೂಡ ಅವರು ಅಸಲಿಯಾ ಅಥವಾ ನಕಲಿಯಾ ಅನ್ನೋದು ಗೊತ್ತಾಗುವುದಿಲ್ಲ. ಇಂತವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕಾಗಿದೆ ಎನ್ನುತ್ತಾರೆ ನಗರದ ಮಂಗಳಮುಖಿ ಸಂಧ್ಯಾ..[ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಮಂಗಳಮುಖಿಯರ ದಾಂಧಲೆ]

Cultural city plagued by fake transgender

ಮಂಗಳ ಮುಖಿಯರ ರೀತಿ ವೇಷ ಧರಿಸಿ ನಗರದಲ್ಲಿ ಭಿಕ್ಷೆ ಬೇಡುವುದು ಈಗ ಲಾಭದಾಯಕ ದಂಧೆಯಾಗಿ ಪರಿಣಮಿಸಿದೆ. ಹಣ ಕೊಡದ ಸಾರ್ವಜನಿಕರೊಂದಿಗೆ ಅಶ್ಲೀಲ ಭಾವಭಂಗಿ ಪ್ರದರ್ಶಿಸಿ ಸಾರ್ವಜನಿಕವಾಗಿ ಮುಜುಗರ ಅನುಭವಿಸುವಂತೆ ಮಾಡಿ ತೊಂದರೆ ನೀಡುತ್ತಿದ್ದಾರೆ. ಅವರು ಕೇಳಿದಾಗ ಹಣ ಕೊಡದಿದ್ದಲ್ಲಿ ಬಾಯಿಗೆ ಬಂದಂತೆ ಬೈದು ಮರ್ಯಾದೆ ಕಳೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ರಸ್ತೆಗಳಲ್ಲಿ ರಾತ್ರಿ ವೇಳೆ ಸಿಗುವವರನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ ಉದಾಹರಣೆಗಳೂ ಇವೆ.[ಮಂಗಳಮುಖಿಯನ್ನು ಪ್ರೀತಿಸಿ ರೈಲಿಗೆ ತಲೆಕೊಟ್ಟ ಯುವಕ]

ಗಂಡಸರೇ ಮಂಗಳಮುಖಿಯರಾಗಿ ಬದಲಾಗುತ್ತಿದ್ದಾರಂತೆ...!

''ತಮಿಳುನಾಡು ಮತ್ತು ಆಂದ್ರ ಪ್ರದೇಶಗಳಿಂದ ರೈಲಿನಲ್ಲಿ ನಗರಕ್ಕೆ ಬರುವ ವ್ಯಕ್ತಿಗಳು ರೈಲಿನ ಟಾಯ್ಲೆಟ್ಟಿನಲ್ಲೇ ಬಟ್ಟೆ ಬದಲಾಯಿಸಿ ಸೀರೆ ಉಟ್ಟುಕೊಂಡು ಮೇಕಪ್ ಮಾಡಿಕೊಂಡು ನಗರದೊಳಗೆ ಬರುತ್ತಾರೆ. ಇನ್ನು ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರಿಂದ ಬಲವಂತವಾಗಿ ಹಣ ಕೀಳುತ್ತಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಮಂಗಳಮುಖಿ ಸಮುದಾಯದವರ ಮೇಲೆ ಅಪನಂಬಿಕೆ ಹೆಚ್ಚಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಸ್ವೀಕರಿಸುತ್ತಿಲ್ಲ ಎಂಬುದು ಮಂಗಳ ಮುಖಯರ ಮಾತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cultural city plagued by fake transgender. For those who have difficulty detecting who is the fake who is legit.
Please Wait while comments are loading...