ಮೈಸೂರು : ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಪ್ರವೇಶಕ್ಕೆ ಆಹ್ವಾನ

Posted By:
Subscribe to Oneindia Kannada

ಮೈಸೂರು, ಮೇ 12 : ಮೈಸೂರು ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2016-17 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. 2016ರ ಮೇ 30ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಆಸಕ್ತ ವಿದ್ಯಾರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಉಳಿತಾಯ ಖಾತೆ ಚಲನ್ ಪಡೆದು, ಕಾರ್ಯ ನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ಉಳಿತಾಯ ಖಾತೆ ಸಂಖ್ಯೆ ED-KEA-DCET-2016 64097386381 ಕ್ಕೆ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. [ಸಿಪಿಸಿ ಪಾಲಿಟೆಕ್ನಿಕ್ ವಿಳಾಸ]

cpc polytechnic

ಸಾಮಾನ್ಯ ಅಭ್ಯರ್ಥಿಗಳು 100 ರೂ. ಹಾಗೂ ಎಸ್‌ಸಿ/ಎಸ್‌ಟಿ/ಪ್ರವರ್ಗ -1ರ ಅಭ್ಯರ್ಥಿಗಳು 50 ರೂ. ಶುಲ್ಕವನ್ನು ಪಾವತಿ ಮಾಡಬೇಕು. ಚಲನ್ ಪ್ರತಿಯನ್ನು ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಮೈಸೂರು ಸಂಸ್ಧೆ ಇವರಿಗೆ ಸಲ್ಲಿಸಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಮೇ 30 ರೊಳಗೆ ಸಲ್ಲಿಸಬೇಕು. [ಕರ್ನಾಟಕ ಎಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ದಿನಾಂಕ ಪ್ರಕಟ]

ಅರ್ಜಿ ಪಡೆದ ನಂತರ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ದಾಖಲೆ ಪರಿಶೀಲನೆ, ಆನ್‍ಲೈನ್ ಅರ್ಜಿ ಸಲ್ಲಿಕೆ/ ಆಪ್ಷನ್ ಎಂಟ್ರಿ ಸಹಾಯ ಕೇಂದ್ರ (Document Verification Cum On Line Application Submission Centre/Option Entry Help Centeres) ಇರುತ್ತದೆ.

ಮಾಹಿತಿ ಪುಸ್ತಕದಲ್ಲಿ ನೀಡಿರುವ ಮೂಲ ದಾಖಲಾತಿಗಳು, ಮೂಲ ದಾಖಲಾತಿಗಳ 1 ಜೊತೆ ದೃಢೀಕೃತ ಜೆರಾಕ್ಸ್ ಪ್ರತಿ, ಮೊಬೈಲ್ ಸಂಖ್ಯೆ ಮತ್ತು ಈ ಮೇಲ್ ವಿಳಾಸ ಸಹ ಹೊಂದಿರಬೇಕು. ದಾಖಲೆ ಪರಿಶೀಲನೆ ಹಾಗೂ ಆನ್‍ಲೈನ್ ಅರ್ಜಿ ಸಲ್ಲಿಕೆ/ ಆಪ್ಷನ್ ಎಂಟ್ರಿ ಸಹಾಯ ಕೇಂದ್ರದಲ್ಲಿ ಖುದ್ದು ಹಾಜರಾಗಿ ದಾಖಲಾತಿ ಪರಿಶೀಲಿಸಿಕೊಂಡು ಆನ್‍ಲೈನ್‍ನಲ್ಲಿ ಅಪ್ ಲೋಡ್ ಮಾಡಿಸಿ ಭರ್ತಿ ಮಾಡಿದ ಅರ್ಜಿಗೆ Computer Generated ಪ್ರತಿ ಹಾಗೂ ಸ್ವೀಕೃತಿ ಪಡೆಯುವುದು.

ಹೆಚ್ಚಿನ ಮಾಹಿತಿಗೆ www.dte.kar.nic.in / www.kea.kar.nic.in ಅಥವಾ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಸಂಸ್ಥೆಯನ್ನು ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Government CPC Polytechnic Mysuru, popularly known as CPC Polytechnic has invited applications for admission for the year 2016-17. May 30, 2016 last date for submit application.
Please Wait while comments are loading...