ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಹುಕ್ಕಾ ಅಡ್ಡ, ಯುವಕರಿಂದ ಶುರುವಾಗಿದೆ ಧಂ ಮಾರೋ ಧಂ…

By ಯಶಸ್ವಿನಿ
|
Google Oneindia Kannada News

ಮೈಸೂರು, ಆಗಸ್ಟ್ 7 : ಅನಧಿಕೃತ ಬ್ಯೂಟಿ ಪಾರ್ಲರ್ ಗಳ ಮೇಲೆ ದಾಳಿ ನಡೆಸುತ್ತಿರುವ ನಗರ ಪಾಲಿಕೆ ಅಧಿಕಾರಿಗಳು ರಹದಾರಿ ಪಡೆಯದೇ ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಹುಕ್ಕಾ ಕೇಂದ್ರಗಳ ಮೇಲೆ ಈಗ ಮುಗಿಬಿದ್ದಿದ್ದಾರೆ.

ನಗರದ ವಿವಿಧೆಡೆ ಇದ್ದ ಹುಕ್ಕಾ ಕೇಂದ್ರಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ, 4 ಕೇಂದ್ರಗಳಿಗೆ ಬೀಗ ಜಡಿದಿದೆ. ಹುಕ್ಕಾ ಕೇಂದ್ರಗಳ ಮೇಲಿನ ದಾಳಿ ವೇಳೆ ಪಾಲಿಕೆ ಅಧಿಕಾರಿಗಳ ತಂಡ ಆಶ್ಚರ್ಯ, ಆಘಾತಕ್ಕೆ ಒಳಗಾಯಿತು. ಏಕೆಂದರೆ, ಅಲ್ಲಿ ಹುಕ್ಕಾ ಸೇದುತ್ತಿದ್ದ ಗ್ರಾಹಕರಲ್ಲಿ ಪಿಯು, ಪದವಿ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದರು.

ಸಿಗರೇಟನ್ನು ನೀವು ಸುಟ್ಟರೆ ಸಿಗರೇಟು ನಿಮ್ಮನ್ನು ಸುಡುತ್ತದೆಸಿಗರೇಟನ್ನು ನೀವು ಸುಟ್ಟರೆ ಸಿಗರೇಟು ನಿಮ್ಮನ್ನು ಸುಡುತ್ತದೆ

ಹೌದು, ಸಾಂಸ್ಕೃತಿಕ ನಗರಿ ಖ್ಯಾತಿಯ ಮೈಸೂರು, ಇತ್ತೀಚಿನ ದಿನಗಳಲ್ಲಿ ಬೇರೆಯದೇ ಕಾರಣಗಳಿಂದಾಗಿ ಕುಖ್ಯಾತಿಗೆ ಒಳಗಾಗುತ್ತಿದೆ. ವೇಶ್ಯಾವಾಟಿಕೆ, ಮಹಿಳೆಯರಿಂದ ನಡೆಸಲಾಗುವ ಮಸಾಜ್ ಕೇಂದ್ರಗಳು, ಡ್ರ್ಯಾಗನ್ ಐಸ್‍ಕ್ರೀಂ... ಹೀಗೆ ಕೆಲ ಅಕ್ರಮ ಚಟುವಟಿಕೆಗಳು ನಗರದಲ್ಲಿ ಆರಂಭಗೊಂಡಿವೆ.

Corporation officers attacked on Hookah centers in Mysuru

ಮೋಜು, ಮಸ್ತಿ ಇಷ್ಟಪಡುವ ಹೊರ ರಾಜ್ಯಗಳ ಪ್ರವಾಸಿಗರಿಗೆ ಯುವಜನರಿಗೆ ಮೈಸೂರು ಆಕರ್ಷಕ ಎನಿಸುತ್ತಿದೆ.

ಖಚಿತ ಮಾಹಿತಿ ಆಧರಿಸಿ ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಅವರ ನೇತೃತ್ವದ ತಂಡ ಹುಕ್ಕಾ ಕೇಂದ್ರಗಳ ಮೇಲೆ ದಾಳಿ ನಡೆಸಿತು. ರಹದಾರಿ ಪಡೆಯದೇ ಇದ್ದ ಹೈವೇ ವೃತ್ತದ ಬಳಿಯ ಹೈವೇ ಕೆಫೆ, ಫ್ಲೇವರ್ ಜೋನ್, ಬೇಸ್ ಕ್ಯಾಂಪ್, ನಾನ್ಸೆನ್ಸ್ ಕೆಫೆ ಕೇಂದ್ರಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಶ್ರೀಮಂತರ ಮನೆಗಳು ಹಾಗೂ ಹೈಟೆಕ್ ಶಾಲಾ-ಕಾಲೇಜುಗಳು ಇರುವ ಸ್ಥಳಗಳಲ್ಲಿಯೇ ಈ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಆಧುನಿಕ ಜೀವಶೈಲಿಗೆ ಜೋತು ಬೀಳುವ ಯುವಜನರು ಹುಕ್ಕಾ ಕೇಂದ್ರಗಳಿಗೆ ಎಡತಾಕುತ್ತಿದ್ದರೆ, ವಿದ್ಯಾರ್ಥಿಗಳು ತರಗತಿಗೆ ಚಕ್ಕರ್ ಹಾಕಿ ಹುಕ್ಕಾ ಸೇವನೆಯ ಹುಚ್ಚಿನಲ್ಲಿ ಮುಳುಗೇಳುತ್ತಿದ್ದಾರೆ.

Corporation officers attacked on Hookah centers in Mysuru

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ತಂಬಾಕು ಉತ್ಪನ್ನಗಳ ಖರೀದಿಗೆ ಅವಕಾಶ ಇಲ್ಲ. ಅಪ್ರಾಪ್ತರಿಗೆ ತಂಬಾಕು ಮಾರುವಂತಿಲ್ಲ ಎಂಬ ನಿಯಮವೂ ಇದೆ. ಹಾಗಿದ್ದರೂ ಕಾಳಿದಾಸ ರಸ್ತೆಯಂತಹ ಜನದಟ್ಟಣೆ ಪ್ರದೇಶದಲ್ಲಿ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲೇ ಇರುವ ಹುಕ್ಕಾ ಕೇಂದ್ರಗಳ ಮೇಲೆ ಪೊಲೀಸರ ಕಣ್ಣು ಬಿದ್ದಿಲ್ಲದೇ ಇರುವುದು ಆಶ್ಚರ್ಯ ತಂದಿದೆ.

ಪಾಲಿಕೆ ಅಧಿಕಾರಿಗಳ ದಾಳಿಗೆ ಪೊಲೀಸರೂ ಕೈಜೋಡಿಸಿದರೆ ಅನಧಿಕೃತ ಹುಕ್ಕಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಬೀಗ ಜಡಿಯುವುದರ ಜೊತೆಗೆ ಅಪ್ರಾಪ್ತರಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಹುಕ್ಕಾ ಕೇಂದಗಳ ಮಾಲೀಕರ ಮೇಲೆ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ.

English summary
Corporation officers attacked on Hookah centers in various parts of the Mysuru city and Locked 4 centers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X