ಪೊಲೀಸರಿಗೂ ಐಎಸ್ಐ ಪ್ರಮಾಣಿತ ಹೆಲ್ಮೆಟ್ ಕಡ್ಡಾಯ: ಇಲಾಖೆ ಸುತ್ತೋಲೆ

Posted By:
Subscribe to Oneindia Kannada

ಮೈಸೂರು, ಜನವರಿ 6 : ಪೊಲೀಸ್ ಸಿಬ್ಬಂದಿಯೂ ಸಹ ಕಡ್ಡಾಯವಾಗಿ ಐಎಸ್ ಐ ಪ್ರಮಾಣಿತ ಹೆಲ್ಮೇಟ್ ಧರಿಸಿ ವಾಹನ ಚಾಲನೆ ಮಾಡಬೇಕೆಂದು ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ್ ರಾವ್ ಸುತ್ತೋಲೆ ಹೊರಡಿಸಿದ್ದಾರೆ.

ನಗರದಲ್ಲಿ ಕೆಲವು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕರ್ತವ್ಯಕ್ಕಾಗಿ ವಿತರಿಸಲಾಗಿರುವ ಹೆಲ್ಮೆಟ್ ಧರಿಸಿ ದ್ವಿಚಕ್ರವಾಹಗಳಲ್ಲಿ ಸವಾರಿ ಮಾಡುತ್ತಿರುವುದು ಕಂಡು ಬರುತ್ತಿದೆ. ಇದು ಸಾರ್ವಜನಿಕರ ವಲಯದಲ್ಲಿ ಪೊಲೀಸ್ ಇಲಾಖೆಯನ್ನು ಮುಜುಗರಕ್ಕೆ ಎಡೆ ಮಾಡಿಕೊಡುತ್ತಿದೆ.

ಮೈಸೂರಿನಲ್ಲಿ ಆಪರೇಷನ್ ಹೆಲ್ಮೆಟ್, ಪೊಲೀಸರ ಜತೆ ಜನರ ಜಗಳ

ಮುಜುಗರದಿಂದ ತಪ್ಪಿಸಿಕೊಳ್ಳಲು ನಗರದ ಎಲ್ಲಾ ಘಟಕಗಳ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಕರ್ತವ್ಯದ ಅವಧಿಯಲ್ಲಿ ಮತ್ತು ರಜೆ/ವಿಶ್ರಾಂತಿಯ ಅವಧಿಯಲ್ಲಿ ದ್ವಿಚಕ್ರವಾಹನ ಸವಾರಿ ಅಥವಾ ಹಿಂಬದಿ ಸವಾರಿ ಮಾಡುವಾಗ ಕಡ್ಡಾಯವಾಗಿ ಬಿಐಎಸ್/ಐಎಸ್‍ಐ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು. ಯಾವುದೇ ಕಾರಣಕ್ಕೂ ಕಳಪೆ ಹೆಲ್ಮೆಟ್ ಹಾಗೂ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಗೆ ವಿತರಿಸಲಾದ ಹೆಲ್ಮೆಟ್‍ಗಳನ್ನು ಧರಿಸಬಾರದು ಎಂದು ಸುತ್ತೋಲೆಯಲ್ಲಿ ಹೇಳಿದ್ದಾರೆ. ಈ ಕುರಿತು ಆಯಾ ಠಾಣಾ ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ತಿಳಿವಳಿಕೆ ನೀಡಬೇಕು. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಠಾಣೆ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

CoP Rao Issued order that Cops also wear ISI marked helmet.

ಐಎಸ್‍ಐ ಮಾರ್ಕ್ ಇಲ್ಲದ ಹಾಗೂ ಅರ್ಧ ಹೆಲ್ಮೆಟ್ ಧರಿಸಿದ್ದ ಬೈಕ್ ಸವಾರರಿಂದ ಪೊಲೀಸರು ಹೆಲ್ಮೆಟ್ ವಶಪಡಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಈ ನಡುವೆ ಐಎಸ್‍ಐ ಮಾರ್ಕ್ ಇಲ್ಲದ ಅರ್ಧ ಹೆಲ್ಮೆಟ್ ಹೊಂದಿದ್ದ ಪೇದೆಯ ಕಳಪೆ ಹೆಲ್ಮೆಟನ್ನು ಸಾರ್ವಜನಿಕರೇ ಒಡೆದು ಹಾಕಿದ್ದ ಘಟನೆ ಮೈಸೂರಿನಲ್ಲಿ ನಡೆದಿತ್ತು.

ಕಡ್ಡಾಯವಾಗಿ ISI ಗುರುತಿನ ಹೆಲ್ಮೆಟ್ ಧರಿಸುವಂತೆ ನಿಯಮ

ಮೈಸೂರಿನ ಚೆಲುವಾಂಬ ಪಾರ್ಕ್ ಬಳಿ ನಡೆದಿದ್ದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೆಲ್ಮೆಟ್ ಒಡೆದು ಹಾಕಿದ್ದ ಸಾರ್ವಜನಿಕರು, ನಮಗೊಂದು ನ್ಯಾಯ ಪೊಲೀಸರಿಗೊಂದು ನ್ಯಾಯವಾ ಎಂದು ಸಾರ್ವಜನಿಕನೋರ್ವ ಪ್ರಶ್ನಿಸಿದ್ದ. ಈ ಹಿನ್ನೆಲೆಯಲ್ಲಿ ಇನ್ನುಮುಂದೆ ಪೊಲೀಸರೂ ಕೂಡ ದ್ವಿಚಕ್ರ ವಾಹನ ಸವಾರಿ ಮಾಡುವಾಗ ಕಡ್ಡಾಯವಾಗಿ ಬಿಐಎಸ್/ಐಎಸ್‍ಐ ಮಾರ್ಕ್ ಉಳ್ಳ ಹೆಲ್ಮೆಟ್ ಧರಿಸಬೇಕೆಂದು ಸೂಚನೆ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Following a huge outrage and mocked by the citizens over the usage of sub – standard and non ISI marked helmets by the police personnel in the city. Dr Rao has issued an order appealing all the cops to wear only ISI marked helmets.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ