ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಸಭಾಂಗಣದಲ್ಲಿ ಬೀಫ್ ಸೇವನೆ, ಕಪ್ಪು ಪಟ್ಟಿಗೆ ಚಾರ್ವಾಕ ಸಂಸ್ಥೆ

By Sachhidananda Acharya
|
Google Oneindia Kannada News

ಮೈಸೂರು, ಜೂನ್ 26: ಇಲ್ಲಿನ ಸರಕಾರಿ ಕಟ್ಟಡ ಕರ್ನಾಟಕ ಕಲಾಮಂದಿರದಲ್ಲಿ ಬೀಫ್ ಸೇವನೆ ಮಾಡಿದ ಸಾಹಿತಿ ಕೆ.ಎಸ್ ಭಗವಾನ್ ಹಾಗೂ ಇತರರಿಗೆ ನೊಟೀಸ್ ಜಾರಿಯಾಗಿತ್ತು. ಇದೀಗ ಆಯೋಜನೆ ಮಾಡಿದ ಚಾರ್ವಾಕ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ ರಂದೀಪ್ ಹೇಳಿದ್ದಾರೆ

ಕಲಾ ಮಂದಿರದ ಮನೆಯಂಗಳ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ಆಹಾರ ಪದ್ಧತಿ ಮತ್ತು ವ್ಯಕ್ತಿ ಸ್ವಾತಂತ್ರ್ಯ' ವಿಚಾರ ಸಂಕಿರಣದ ಉದ್ಘಾಟನೆಯನ್ನು ದನದ ಮಾಂಸ ತಿನ್ನುವ ಮೂಲಕ ಮಾಡಲಾಗಿತ್ತು. ಇದರಲ್ಲಿ ಕೆ.ಎಸ್ ಭಗವಾನ್, ಮೈಸೂರು ವಿಶ್ವವಿದ್ಯಾಲಯದ ಪ್ರಧ್ಯಾಪಕ ಮಹೇಶ್ ಚಂದ್ರ ಗುರು ಮೊದಲಾದವರು ಭಾಗವಹಿಸಿದ್ದರು.

Controversy around KS Bhagavan and others after eating beef in govt building in Mysuru

ಕರ್ನಾಟಕ ಕಲಾಮಂದಿರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ್ದು ಸರಕಾರಿ ಕಟ್ಟಡದಲ್ಲಿ ಬೀಫ್ ಸೇವನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಇಂದು ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಜಿಲ್ಲಾಧಿಕಾರಿ ಡಿ ರಂದೀಪ್ ಸರಕಾರಿ ಕಟ್ಟಡದಲ್ಲಿ ಮಾಂಸ ಸೇವನೆ ನಿಷಿದ್ಧ. ಹೀಗಾಗಿ ಕಾರಣ ಕೇಳಿ ಆಯೋಜಕರು ಹಾಗೂ ಸಭಾಂಗಣ ಉಸ್ತುವಾರಿಗಳಿಗೆ ನೊಟೀಸ್ ನೀಡಲಾಗುವುದು ಎಂದು ಹೇಳಿದ್ದರು.

ಇನ್ನು ಕಾರ್ಯಕ್ರಮದ ವಿವರಗಳ ಬಗ್ಗೆ ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ, "ಒಟ್ಟು ಮೂರು ದಿನಗಳ ಮಟ್ಟಿಗೆ ಕಲಾಮಂದಿರದ ಮನೆಯಂಗಳ ಸಭಾಭವನವನ್ನು ಚಾರ್ವಾಕ ಸಂಸ್ಥೆಯವರು ಆನ್ಲೈನ್ ಮೂಲಕ ಬುಕ್ ಮಾಡಿದ್ದರು. ವಿಚಾರ ಸಂಕಿರಣದ ಕೊನೆಯ ದಿನ ಗೋಮಾಂಸ ಸೇವಿಸಿದ್ದಾರೆ. ಈ ಸಂಬಂಧ ಆಯೋಜಕರ ಮೇಲೆ ಕ್ರಮ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದರು.

"ಚಾರ್ವಾಕ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಹಾಗೂ ಕಲಾಮಂದಿರದಲ್ಲಿ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಲಾಗುವುದು," ಎಂದು ಚೆನ್ನಪ್ಪ ತಿಳಿಸಿದ್ದರು.

ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, "ಆಯೋಜಕರು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮಹೇಶ್ ಚಂದ್ರ ಗುರು ವಿರುದ್ಧ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು. ಹಾಗೂ ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು," ಎಂದು ಪ್ರತಿಕ್ರಿಯಿಸಿದ್ದರು.

ನೊಟೀಸ್ ಜಾರಿ

ಬೀಫ್ ಸೇವನೆ ಸಂಬಂಧ ಮಧ್ಯಾಹ್ನದ ವೇಳೆಗೆ ಕಾರ್ಯಕ್ರಮ ಆಯೋಜಕರಿಗೆ ಜಿಲ್ಲಾಧಿಕಾರಿ ಡಿ.ರಂದೀಪ್ ನೋಟೀಸ್ ಜಾರಿ ಮಾಡಿದ್ದರು. ಸರ್ಕಾರಿ ಕಟ್ಟಡದಲ್ಲಿ ಹೇಗೆ ಗೋ ಮಾಂಸ ಸೇವಿಸಿದ್ದೀರಿ? ಎಂಬ ಕಾರಣ ಕೇಳಿ ಡಿಸಿ ರಂದೀಪ್ ನೋಟಿಸ್ ಜಾರಿ ಮಾಡಿದ್ದರು.

ಬಿಜೆಪಿ ಯುವಮೋರ್ಚಾದಿಂದ ಗಂಜಲ ಸಿಂಪಡಿಸಿ ಶುದ್ದಿಕಾರ್ಯ

ಗೋಮಾಂಸ ಸೇವಿಸಿ ಸ್ಥಳ ಅಪವಿತ್ರ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮೈಸೂರಿನ ಕಲಾಮಂದಿರದ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಮಾತ್ರವಲ್ಲದೆ ಕಲಾಮಂದಿರದ ಮನೆಯಂಗಳ ಸಭಾಂಗಣದಲ್ಲಿ ಗೋಮೂತ್ರವನ್ನು ಮಾವಿನ ಸೊಪ್ಪಿನಿಂದ ಪ್ರೋಕ್ಷಣೆ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜತೆಗೆ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ವಿರುದ್ದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಬಂದ ಸುದ್ದಿ - ಕಪ್ಪು ಪಟ್ಟಿಗೆ ಚಾರ್ವಾಕ ಸಂಸ್ಥೆ

ಕೇಂದ್ರದ ಗೋ ಮಾರಾಟ ,ವ್ಯಾಪಾರ ನಿರ್ಬಂಧ ಕಾಯ್ದೆ ಜಾರಿ ವಿರೋಧಿಸಿ ಭಾನುವಾರ ಕಾರ್ಯಕ್ರಮದಲ್ಲಿ ಪ್ರಗತಿಪರರಿಂದ ಗೋ ಮಾಂಸ ಸೇವನೆ ಹಿನ್ನೆಲೆಯಲ್ಲಿ ಗೋ ಮಾಂಸ ಸೇವನೆ ಮಾಡಿದ ಸಂಘಟನೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.
ಸಂಘಟನೆಯವರು ಕಟ್ಟಿದ್ದ ಹಣವನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇಂತಹ ಘಟನೆ ಮತ್ತೊಮ್ಮೆ ಮರುಕಳುಹಿಸದಂತೆ ಮುನ್ನಚ್ಚರಿಕೆ ವಹಿಸಲಾಗುವುದು. ಸರ್ಕಾರಿ ಕಟ್ಟಡಗಳಲ್ಲಿ ಗೋ ಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ ಎಂದರು.

ಈ ಕುರಿತು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಪ್ರತಿಕ್ರಿಯೆ ನೀಡಿ "ಕಾರ್ಯಕ್ರಮದಲ್ಲಿ ಗೋ ಮಾಂಸ ಸೇವನೆ ವಿಚಾರ ಅರಿವಿಗೆ ಬಂದಿರಲಿಲ್ಲ. ಈಗಾಗಲೇ ಕಾರ್ಯಕ್ರಮ ಆಯೋಜಿಸಿದ್ದ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಉನ್ನತ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗಿದೆ," ಎಂದರು.

English summary
Once again writer KS Bhagavan and professor Mahesh Chandra Guru in controversy after they eat beef in Karnakata Kalamandir, a government building in Mysuru. Building belongs to Kannada and Culture department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X