ಇಂದಿರಾ ಕ್ಯಾಂಟೀನ್ ಕುರಿತು ಟ್ವೀಟ್: ವಿವಾದ ಸೃಷ್ಟಿಸಿದ ಪ್ರತಾಪ್ ಸಿಂಹ!

Posted By:
Subscribe to Oneindia Kannada

ಮೈಸೂರು, ಆಗಸ್ಟ್ 21 : ಟ್ವಿಟ್ಟರ್ ಹೀರೋ ಎಂದೇ ಹೆಸರು ಮಾಡಿರುವ ಮೈಸೂರು - ಕೊಡಗು ಸಂಸದ ಮತ್ತೆ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.

ಹೌದು, ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿರುವುದನ್ನು ಕುರಿತು ಸಂಸದ ಪ್ರತಾಪಸಿಂಹ ಮಾಡಿರುವ ಟ್ವೀಟ್ ಇದೀಗ ಎಲ್ಲರ ಟೀಕೆಗೆ ಒಳಗಾಗಿದೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿವಾದಾತ್ಮಕವಾಗಿ ಇಂದಿರಾ ಕ್ಯಾಂಟೀನ್ ಬಗ್ಗೆ ಟ್ವಿಟ್ ಮಾಡಿರುವ ಸಂಸದರು ಟ್ವಿಟ್ಟಿಗರ ಆಕ್ರೋಶಕ್ಕೆ ಒಳಗಾಗಿದ್ದಾರೆ.

ಪ್ರತಿಭಟನಾನಿರತ ಬಿಜೆಪಿ ಸಂಸದ ಪ್ರಾಮಾಣಿಕತೆ ಪ್ರಶ್ನಿಸಿದ ಟ್ವಿಟ್ಟಿಗರು

''ಚಹಾ ಮಾರುತ್ತಿದ್ದ ಮೋದಿ ಪ್ರಧಾನಿಯಾದ್ರು, ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಕ್ಯಾಂಟೀನ್ ಮಾಡಿದ್ರು'' ಎಂದು ತಮ್ಮ ಟ್ವಿಟ್ಟರ್ ಖಾತೆಯ ಮುಖಪುಟದಲ್ಲಿ ಪ್ರತಾಪ್ ಸಿಂಹ ಬರೆದುಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಟ್ವಿಟ್ಟಿಗರು, ಮೊದಲು ಪ್ರಧಾನಿ ಮೋದಿಗೆ ಹೇಳಿ ರೈತರ ಸಾಲ ಮನ್ನಾ ಮಾಡಿಸಿ. ನಂತರ ರಾಜ್ಯದ ಬಗ್ಗೆ ಮಾತನಾಡಿ ಎಂದು ಹರಿಹಾಯ್ದಿದ್ದಾರೆ.

ಇಂದಿರಾ ಕ್ಯಾಂಟೀನ್ ಕುರಿತು ಟ್ವಿಟ್ಟಿಗರು ಏನಂತಾರೆ?

ಪ್ರತಾಪಸಿಂಹ ಅವರ ಟ್ವೀಟ್ ಗೆ 287 ಕ್ಕೂ ಅಧಿಕ ಲೈಕ್ಸ್ ಬಂದಿದ್ದು, 62 ಕ್ಕೂ ಹೆಚ್ಚು ರೀಟ್ವಿಟ್ಸ್ ಬಂದಿದೆ.

ಸಂಸದರನ್ನಾಗಿ ಆಯ್ಕೆ ಮಾಡಿ ತಪ್ಪು ಮಾಡಿದ್ದಾರೆ!

ಮತ್ತೊಬ್ಬ ತಿನ್ನುವ ಅನ್ನದಲ್ಲೂ ರಾಜಕೀಯ ಮಾಡುವ ಸಿಂಹ, ಮೊದಲು ನಿಮ್ಮ ಕ್ಷೇತ್ರಕ್ಕೆ ಕೊಡುಗೆ ಏನು, ಮೈಸೂರು-ಕೊಡುಗು ಜನ ನಿಮ್ಮನ್ನು ಸಂಸದರಾಗಿ ಆಯ್ಕೆ ಮಾಡಿ ತಪ್ಪು ಮಾಡಿದ್ದಾರೆ. ಪ್ರಧಾನಿಗೆ ಬಕೆಟ್ ಹಿಡಿಯುವುದನ್ನು ನಿಲ್ಲಿಸಿ ಕೆಲಸದಲ್ಲಿ ತೊಡಗಿ ಎಂದು ರೀ-ಟ್ವೀಟ್ ಮಾಡಿರುವ ಅನೇಕ ಟ್ವಿಟಿಗರು ಸಿಂಹನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

ಪೂರ್ವಗ್ರಹ ಪೀಡಿತರಾಗಿದ್ದೀರಿ

ಕಾಂಗ್ರೆಸ್ ಮಾಡಿದ್ದೆಲ್ಲವು ತಪ್ಪು. ಬಿಜೆಪಿ ಮಾಡುತ್ತಿರುವುದೆಲ್ಲ ಸರಿ ಎಂಬ ನಿಮ್ಮ ಮನಸ್ಥಿತಿ ನೀವು ಪೂರ್ವಾಗ್ರಹ ಪೀಡಿತರಾಗಿದ್ದೀರಿ ಎಂಬುದನ್ನು ಧೃಢಪಡಿಸುತ್ತದೆ. ಮತ್ತೆ ನೀವು ಹಾನಿಕಾರಕ ಹೇಳಿಕೆಯನ್ನು ನೀಡಿದ್ದೀರಿ ಪ್ರತಾಪಸಿಂಹ ಸರ್, ನೀವು ಮೋದಿ ಹೆಸರು ಹೇಳ್ಕೋತ್ತಾ ಅಧಿಕಾರ ಹಿಡಿಯಬಹುದು ಅಂತ ತಿಳಕೊಂಡಿದ್ದರೆ ಅದಕ್ಕಿಂತ ದೊಡ್ಡ ಮೂರ್ಖತನ ಇನ್ನಿಲ್ಲ. ಅದನ್ನೇ ತಾನೆ ಮೊನ್ನೆ ಅಮಿತ್ ಷಾ ಅವರು ಉಗಿದು ಹೋಗಿದ್ದು ಎಂದು ಹೆಮಂತ್ ಹೆಗಡೆ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಅಪ್ರಬುದ್ಧತೆ ಸಾಬೀತು ಪಡಿಸಿದ್ದೀರಿ

ಹಸಿದವನಿಗೆ ಅನ್ನ ನೀಡುವುದನ್ನು ಟೀಕಿಸುವ ನೀವು... ಮತ್ತೊಮ್ಮೆ ನಿಮ್ಮ ಅಪ್ರಬುದ್ಧತೆ ಸಾಬೀತು ಮಾಡಿಕೊಂಡಿದ್ದೀರಿ, ಮೊದಲು ರೈತರ ಸಾಲ ಮನ್ನಾ ಮಾಡಿಸಿ ಆಮೇಲೆ ಮೋದಿ ಬಗ್ಗೆ ಮಾತನಾಡಿ ಎಂದು ಅನೇಕರು ಪ್ರತಾಪಸಿಂಹರ ಹೇಳಿಕೆಗೆ ರೀಟ್ವಿಟ್ ಮಾಡಿದ್ದಾರೆ.

ತಕರಾರು ಕ್ಯಾಂಟೀನ್ ಗೋ ಇಂದಿರಾ ಹೆಸರಿಗೋ?

ನಿಮ್ಮ ತಕರಾರು ಕ್ಯಾಂಟೀನ್ ಗೋ ಇಂದಿರಾ ಹೆಸರಿಗೋ? ನಿಮಗೆ ಹಸಿವಿನ ಬೆಲೆ ಗೊತ್ತಿಲ್ಲಾ ಎಂದು ಜನರು ಸಂಸದರನ್ನು ಟ್ವಿಟ್ಟರ್ ನಲ್ಲೇ ತರಾಟೆಗೆ ತೆಗೆದುಕೂಂಡಿದ್ದಾರೆ. ನಿಮ್ಮವರು ಬಿಜೆಪಿ ಮೋದಿ ಹೆಸರು ವೈಭವೀಕರಿಸಬಹುದು. ಆದರೆ ಕಾಂಗ್ರೆಸ್ ಇಂದಿರಾ ಹೆಸರು ಬಳಸುವಂತಿಲ್ಲವೇ? ಈ ಟ್ವೀಟ್ ನಿಮ್ಮ ಮನಸ್ಥಿತಿ ಹೇಗಿದೆ ಎಂಬುವುದನ್ನು ಎತ್ತಿ ತೋರಿಸುತ್ತದೆ ಎಂದು ಹರಿಹಾಯ್ದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru anf Kodagu MP, BJP's Pratap Simha has been criticised by the Twitterians for his controversial tweet on Indira Canteen.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ