ಕಾಂಗ್ರೆಸ್ ಹಣದ ಹೊಳೆ ಹರಿಸಿದೆ - ಶ್ರೀನಿವಾಸ್ ಪ್ರಸಾದ್

By: ಮೈಸೂರು, ಪ್ರತಿನಿಧಿ
Subscribe to Oneindia Kannada

ನಂಜನಗೂಡು, ಏಪ್ರಿಲ್ 9: ಕ್ಷೇತ್ರದಲ್ಲಿ (ನಂಜನಗೂಡು) ಕಾಂಗ್ರೆಸ್ ಮಂದಿ ಹಣದ ಹೊಳೆ ಹರಿಸಿದ್ದು ನನಗೆ ಬೇಸರ ತಂದಿದೆ. ಆದರೆ ಜನರು ಹಣಕ್ಕೆ ಬೆಲೆ ಕೊಡಲ್ಲ ಎಂದು ನಂಜನಗೂಡು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[LIVE ಗುಂಡ್ಲುಪೇಟೆ: ಮತದಾರರಲ್ಲಿ ಉತ್ಸಾಹ, ಶೇಕಡಾ 17 ಮತದಾನ]

ನಂಜನಗೂಡಿನಲ್ಲಿ ಇಂದು ಮಾತನಾಡಿದ ಶ್ರೀನಿವಾಸ್ ಪ್ರಸಾದ್, "ನಂಜನಗೂಡಿನಲ್ಲಿ ನೇರ ಹಣಾಹಣಿ ಇದೆ. ಇದು ದುರಹಂಕಾರ- ಸ್ವಾಭಿಮಾನದ ನಡುವಿನ ಹೋರಾಟವಾಗಿದೆ. ಕಾಂಗ್ರೆಸ್ ನವರು ಹಣದ ಹೊಳೆ ಹರಿಸುತ್ತಿದ್ದಾರೆ. ಇದರಿಂದ ಗೆಲುವಿನ ಅಂತರ ಕಡಿಮೆಯಾಗುತ್ತದೆ ಅದರೇ ಗೆಲುವು ನನ್ನದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.[ಕೊರಳಲ್ಲಿ ಕಾಂಗ್ರೆಸ್ ಶಾಲು, ನೀತಿ ಸಂಹಿತೆ ಉಲ್ಲಂಘಿಸಿದ ಕಳಲೆ]

Congress spent huge money – V Srinivasa Prasad

"ಹಣದ ಹೊಳೆಯಲ್ಲಿ ಚಾಮುಂಡೇಶ್ವರಿ ಬೈ ಎಲಕ್ಷನ್ ಅನ್ನೇ ಮೀರಿಸುತ್ತಿದ್ದು, ಹಣ ಹಂಚುವುದರಲ್ಲಿ ಕೆಳ ಮಟ್ಟದ ಪೊಲೀಸರು ಶಾಮೀಲಾಗಿದ್ದಾರೆ," ಎಂದು ಆರೋಪಿಸಿದ ಶ್ರೀನಿವಾಸ್ ಪ್ರಸಾದ್, ರಾಜ್ಯದಲ್ಲಿ ಇಂತಹ ಭ್ರಷ್ಟನೆ ನೋಡಿರಲಿಲ್ಲ. ಚುನಾವಣೆಗೆ ಮುಖ್ಯಮಂತ್ರಿಗಳು ಈ ಮಟ್ಟಕ್ಕೆ ಇಳಿದಿದ್ದಾರೆ ಎಂದು ಕಿಡಿ ಕಾರಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
“Congress spent floods of money in the Nanjangud by-election,” said BJP candidate V Srinivasa Prasad here in Nanjangud.
Please Wait while comments are loading...