ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೇಯರ್ ಗಾದಿ ಬಹುತೇಕ ಕಾಂಗ್ರೆಸ್‌ ವಶ

|
Google Oneindia Kannada News

Recommended Video

ಮೈಸೂರು ಮೇಯರ್ ಗಾದಿ ಬಹುತೇಕ ಕಾಂಗ್ರೆಸ್‌ ವಶ | Oneindia Kannada

ಮೈಸೂರು, ನವೆಂಬರ್ 17 : ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಮೈತ್ರಿ ಆಡಳಿತ ಮೈಸೂರಿಗೂ ವಿಸ್ತರಣೆಯಾಗಿದ್ದು, ಮೈಸೂರು ಮಹಾನಗರ ಪಾಲಿಕೆ ಗದ್ದುಗೆ ಮೈತ್ರಿ ಪಕ್ಷಗಳ ನಡುವೆ ಹಂಚಿಕೆಯಾಗಿದ್ದು, ಮೇಯರ್ ಸ್ಥಾನ ಕಾಂಗ್ರೆಸ್‌ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.

ರಾಜಧಾನಿ ಬೆಂಗಳೂರು ನಂತರ ಎರಡನೇ ಅತಿ ದೊಡ್ಡ ನಗರವಾಗಿರುವ ಮೈಸೂರು ಮಹಾನಗರದ ಪ್ರಥಮ ಪ್ರಜೆ ಪಟ್ಟ ಮೊದಲ ವರ್ಷ ಕಾಂಗೆಸ್‌ಗೆ ಬಿಟ್ಟುಕೊಡಲಾಗಿದೆ. ಇದರಿಂದ ಕಾಂಗ್ರೆಸ್ ಕೈ ಮೇಲಾಗಿದ್ದು, ಸರದಿಯಂತೆ 2 ಬಾರಿ ಮಹಾ ಪೌರರ ಸ್ಥಾನವನ್ನು ಅಲಂಕರಿಸಲಿದೆ.

ಮೈಸೂರು ಮೇಯರ್ ಸ್ಥಾನ: ಕುಮಾರಸ್ವಾಮಿ vs ಸಿದ್ದರಾಮಯ್ಯಮೈಸೂರು ಮೇಯರ್ ಸ್ಥಾನ: ಕುಮಾರಸ್ವಾಮಿ vs ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಮಾಜಿ ಪಧಾನಿ ಹಾಗೂ ರಾಷ್ಟ್ರೀಯ ಜಾ.ದಳ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ನಡುವಿನ ಮಾತುಕತೆ ಯಶಸ್ವಿಯಾಗಿದ್ದು, ಸಿದ್ದರಾಮಯ್ಯ ಅವರ ಮನವಿ ಯಂತೆ ಮಹಾಪೌರರ ಸ್ಥಾನ ಬಿಟ್ಟುಕೊಡಲು ದೇವೇಗೌಡರು ಒಪ್ಪಿಗೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಮೇಯರ್ ಚುನಾವಣೆ ಆಯ್ಕೆ ಪ್ರಕ್ರಿಯೆಯಿಂದ ಸಿದ್ದರಾಮಯ್ಯ ಹಿಂದೆ ಸರಿದರೇ? ಮೇಯರ್ ಚುನಾವಣೆ ಆಯ್ಕೆ ಪ್ರಕ್ರಿಯೆಯಿಂದ ಸಿದ್ದರಾಮಯ್ಯ ಹಿಂದೆ ಸರಿದರೇ?

ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಚುನಾವಣಾ ಉಸ್ತುವಾರಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಅವರು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಬೆಳಿಗ್ಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ, ಅವರ ಅಸಮಾಧಾನ ಶಮನ ಮಾಡಿದ್ದಾರೆ.

Congress member will be Mysuru mayor


ಕಾಂಗ್ರೆಸ್ ನಿಂದ ಮಾಜಿ ಉಪಮಹಾಪೌರರಾದ ಶಾಂತಕುಮಾರಿ, ಪುಷ್ಪಲತಾ ಜಗನ್ನಾಥ್ ಆಕಾಂಕ್ಷಿಗಳಾಗಿದ್ದಾರೆ. ಶೋಭಾ ಸುನಿಲ್ ಕೂಡ ರೇಸ್‌ಲ್ಲಿದ್ದರು. ಇವರ ಪೈಕಿ ಹಿರಿತನದ ಆಧಾರದ ಮೇಲೆ ಪುಷ್ಪಲತಾ ಜಗನ್ನಾಥ್‌ ಅವರು ಮಹಾಪೌರರಾಗಲಿದ್ದಾರೆ ಎಂದು ಹೇಳಲಾಗಿದೆ.

18 ಸ್ಥಾನ ಗಳಿಸಿರುವ ಜಾ.ದಳ ಮಿತ್ರ ಪಕ್ಷ ಬಿಎಎಸ್‌ಪಿ ಜತೆ ಸೇರಿ 19 ಸದಸ್ಯ ಬಲ ಹೊಂದಿದೆ. ಓರ್ವ ಶಾಸಕ ಹಾಗೂ ಮೂವರು ವಿಧಾನ ಪರಿಷತ್ ಸದಸ್ಯರ ಬೆಂಬಲದೊಂದಿಗೆ 23 ಸ್ಥಾನಗಳನ್ನು ಹೊಂದಿದೆ. 19 ಸ್ಥಾನ ಗಳಿಸಿರುವ ಕಾಂಗ್ರೆಸ್ ಮೂವರು ಪಕ್ಷೇತರರು, ಓರ್ವ ವಿಧಾನಪರಿಷತ್ ಸದಸ್ಯ, ಓರ್ವ ಶಾಸಕರ ನೆರವಿನಿಂದ 24 ಸದಸ್ಯ ಬಲ ಹೊಂದಿದೆ.

ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಇಬ್ಬರು ಶಾಸಕರು, ಓರ್ವ ಸಂಸದರ ಬೆಂಬಲದಿಂದ 25 ಸ್ಥಾನ ಹೊಂದಿದೆ. ಮೈಸೂರು ಮಹಾನಗರಪಾಲಿಕೆ ಸದಸ್ಯರು ಹಾಗೂ ಚುನಾಯಿತ ಸದಸ್ಯರು ಸೇರಿ 74 ಮಂದಿ ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಬಹುಮತಕ್ಕೆ 38 ಸಂಖ್ಯಾಬಲ ಅಗತ್ಯವಿದೆ.

ಮೈಸೂರು ಮೇಯರ್ ಗಾದಿಗಾಗಿ ಸಿದ್ದು-ಜಿಟಿಡಿ ನಡುವೆ ಮತ್ತೆ ಶುರುವಾಯ್ತು ಮುಸುಕಿನ ಗುದ್ದಾಟ ಮೈಸೂರು ಮೇಯರ್ ಗಾದಿಗಾಗಿ ಸಿದ್ದು-ಜಿಟಿಡಿ ನಡುವೆ ಮತ್ತೆ ಶುರುವಾಯ್ತು ಮುಸುಕಿನ ಗುದ್ದಾಟ

ಕಾಂಗ್ರೆಸ್ ಮತ್ತು ಜಾ.ದಳ 47 ಸದಸ್ಯರ ಬಲವಿದ್ದು, ಮೈತ್ರಿ ಪಕ್ಷಗಳು ಅಧಿಕಾರ ಹಿಡಿಯಲಿದೆ. ಎರಡೂ ಪಕ್ಷಗಳ ನಡುವೆ ಅಧಿಕಾರ ಹಂಚಿಕೆ ಒಪ್ಪಂದವೂ ಅಂತಿಮಗೊಂಡಿದೆ.

ಮಹಾಪೌರ ಸ್ಥಾನ ಸಾಮಾನ್ಯ ಮಹಿಳೆ, ಉಪ ಮಹಾಪೌರರ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾ ಗಿದೆ. ಇಂದು ಬೆಳಿಗ್ಗೆ 11.30ಕ್ಕೆ ಚುನಾವಣಾ ವಿಶೇಷ ಸಭೆ ಆರಂಭವಾಗಲಿದೆ. ನಗರಪಾಲಿಕೆಯ ಉಪ ಮಹಾಪೌರರ ಸ್ಥಾನ ಜಾ.ದಳ ಸದಸ್ಯರಾದ ಶಫೀ ಅಹಮ್ಮದ್ ಅವರಿಗೆ ಬಹು ತೇಕ ಖಚಿತವಾದಂತಾಗಿದೆ. ಜಾ.ದಳ ಸದಸ್ಯರಾದ ಸವೂದ್ ಖಾನ್, ಮಹಮದ್ ರಫೀಕ್ ಉಪ ಮಹಾಪೌರ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

English summary
Congress corporater Pushpalatha Jagannath may be Mysuru mayor. Siddaramaiah and Deve Gowda talked about adminitration distrubution. JDS member will be mayor in the second half.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X