ಸಿದ್ದರಾಮಯ್ಯ ರಾವಣ,ಪರಮೇಶ್ವರ್ ವಿಭೀಷಣ: ಶ್ರೀನಿವಾಸ್ ಪ್ರಸಾದ್

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಮಾರ್ಚ್ 13 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ನಾನು ಪರಮೇಶ್ವರ್ ಅಣ್ಣ-ತಮ್ಮ' ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಪ್ರಸಾದ್ ಮುಖ್ಯಮಂತ್ರಿ 'ಸಿದ್ದರಾಮಯ್ಯ ರಾವಣ, ಜಿ.ಪರಮೇಶ್ವರ್ ರಾವಣನ ತಮ್ಮ ವಿಭೀಷಣ ಎಂದಿದ್ದಾರೆ.

ಪರಮೇಶ್ವರ್ ನಾನು ಅಣ್ಣ-ತಮ್ಮ, ಈ ಬಾರಿ ಆತ ಗೆಲ್ಲಬೇಕು:ಸಿಎಂ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಪರಮೇಶ್ವರ್‌ಗೆ ರಾಮಲಕ್ಷ್ಮಣ ಸಹೋದರತ್ವದ ಬಗ್ಗೆ ಅಲ್ಲ. ರಾವಣ ಮತ್ತು ವಿಭೀಷಣನ ಸಹೋದರತ್ವದ ಬಗ್ಗೆ ಎಂದು ಅವರು ಹೇಳಿದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ರಾವಣನ ಬುದ್ಧಿ ಏನೆಂದು ಗೊತ್ತಿದ್ದೂ, ಈಗ ಪರಮೇಶ್ವರ್ ಸುಮ್ಮನಿರುವುದು ಇಲ್ಲಿ ಇವರಿಬ್ಬರ ಭಾಂದವ್ಯ ತೋರಿಸುತ್ತದೆ. ಸಿದ್ದರಾಮಯ್ಯ ಓರ್ವ ಹೊಗಳುಭಟ್ಟ. ರಾಹುಲ್ ಗಾಂಧಿಯ ಶೂಟಿಂಗ್ ಕಮಾಂಡಂಟ್ ಎಂದು ಅವರು ಹೇಳಿದರು.

Congress bound to lose in elections : Shrinivas prasad

ಠೇವಣಿ ಕಳೆದುಕೊಂಡ ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿ ಎಂದು ಸಿದ್ದರಾಮಯ್ಯ ಹೊಗಳುತ್ತಾರೆ. ಸಿದ್ದರಾಮಯ್ಯನವರ ಅಹಂಕಾರವೇ ಕಾಂಗ್ರೆಸ್ ಗೆ ಮುಳುವಾಗುವುದು ಖಚಿತ. ಇದು ಆಡಳಿತ ವಿರೋಧಿ ಅಲೆಯನ್ನು ದೊಡ್ಡದಾಗಿ ಸೃಷ್ಟಿಸಿದೆ. ನಾನು ಜಿಲ್ಲಾ ಮಂತ್ರಿಯಾಗಿ ಮಾಡಿದ ಕೆಲಸವನ್ನು ಸಿಎಂ ತಾನೇ ಮಾಡಿದ್ದು ಎಂದು ಹೇಳುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಅವರ ಆಡಳಿತವನ್ನು ರಾಜರಿಗೆ ಹೋಲಿಕೆ ಮಾಡಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು 'ಸಿದ್ದರಾಮಯ್ಯ ಅವರು ತಮ್ಮ ಆಡಳಿತವನ್ನು ರಾಜರಿಗೆ ಹೋಲಿಕೆ ಮಾಡಿಕೊಂಡಿರುವುದು ಕಿಮಚಿತ್ತೂ ಸರಿಯಲ್ಲ' ಎಂದು ವಾಗ್ದಾಳಿ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Responding to chief minister Siddramaiahs claim that he and G Parameshwar are like brother, former minister V Shrinivasprasad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ