ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರೆಯಲ್ಲಿ ಭಾಗವಹಿಸುವ ಮೊದಲ ತಂಡದ ಆನೆಗಳ ಸಂಪೂರ್ಣ ವಿವರ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 03: ನಾಡಹಬ್ಬ ದಸರಾ ಮಹೋತ್ಸವದ ಕೇಂದ್ರಬಿಂದು ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳೇ ಪ್ರಮುಖ ಆಕರ್ಷಣೆ. ಇವು ನಗರಕ್ಕೆ ಆಗಮಿಸುತ್ತಿದ್ದಂತೆ ದಸರಾ ಕಳೆ ಕಟ್ಟುತ್ತದೆ. ಇವು ಸುಮಾರು 1 ತಿಂಗಳ ಕಾಲ ರೋಡ್ ಶೋ ನಡೆಸುವ ಮೂಲಕ ದಸರಾ ಪ್ರಚಾರಕ್ಕೆ ನಾಂದಿ ಹಾಡುತ್ತವೆ.

ಗಜಪಡೆಯ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಮೊದಲ ತಂಡ ವೀರನಹೊಸಹಳ್ಳಿಯಿಂದ ಗಜಪಯಣ' ಕಾರ್ಯಕ್ರಮದ ಮೂಲಕ ನಗರವನ್ನು ಪ್ರವೇಶಿಸಿದೆ. ನಗರಕ್ಕೆ ನಿನ್ನೆ ಸಂಜೆ ವೇಳೆಗೆ ಆಗಮಿಸಿದ 6 ಆನೆಗಳು ನಗರದ ಅಶೋಕಪುರಂನಲ್ಲಿರುವ ಅರಣ್ಯಭವನದಲ್ಲಿ ಬೀಡು ಬಿಟ್ಟಿವೆ.

ಗಜಪಯಣಕ್ಕೆ ಚಾಲನೆ, ಸಂಪ್ರದಾಯದ ಬಗ್ಗೆ ಎಚ್ ವಿಶ್ವನಾಥ್ ಹೇಳಿದ್ದು ಕೇಳಿಗಜಪಯಣಕ್ಕೆ ಚಾಲನೆ, ಸಂಪ್ರದಾಯದ ಬಗ್ಗೆ ಎಚ್ ವಿಶ್ವನಾಥ್ ಹೇಳಿದ್ದು ಕೇಳಿ

ಇದೇ ಮೊದಲ ಬಾರಿಗೆ ಅರ್ಜುನ ತನ್ನ ಎಂದಿನ ಸಂಗಾತಿಗಳನ್ನು ಬಿಟ್ಟು ಹೊಸಬರೊಂದಿಗೆ ಆಗಮಿಸಿದ್ದು, ಇದರಲ್ಲಿ ವರಲಕ್ಷ್ಮಿ ಮಾತ್ರ ಒಂದೆರಡು ಬಾರಿ ಜೊತೆಯಲ್ಲಿ ಆಗಮಿಸಿದೆ. ಅರ್ಜುನನ ಸಂಗಾತಿಗಳಾದ ಅಭಿಮನ್ಯು, ಬಲರಾಮ, ವಿಜಯ, ಕಾವೇರಿ ಆನೆ ಹಿಡಿಯುವ ಕಾರ್ಯಾಚರಣೆಗೆ ತೆರಳಿದ್ದು, ನಂತರ ತಂಡವನ್ನು ಸೇರಿಕೊಳ್ಳಲಿವೆ.

ಭೀಮ ಕೂಡ ಈ ಬಾರಿ ದಸರಾದಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಧನಂಜಯ ಆನೆ ತಂಡಕ್ಕೆ ಸೇರ್ಪಡೆಯಾಗಿದ್ದು, ಮೊದಲ ತಂಡದ ಆನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ...

ಅರ್ಜುನನ ಹೈಲೈಟ್ಸ್

ಅರ್ಜುನನ ಹೈಲೈಟ್ಸ್

ಮಾವುತ - ಸಣ್ಣಪ್ಪ, ಕಾವಾಡಿ : ವಿನು
ಬಲರಾಮನ ಉತ್ತರಾಧಿಕಾರಿಯಾಗಿ 750 ಕೆ.ಜಿ.ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ಅರ್ಜುನ ಕಳೆದ 6 ವರುಷಗಳಿಂದ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ. 58 ವರುಷದ ಅರ್ಜುನ 295 ಮೀ ಎತ್ತರವಿದ್ದು, ಶರೀರದ ಉದ್ದ 375 ಮೀ ಆಗಿದೆ.

5500 ರಿಂದ 5800 ಕೆ. ಜಿ ತೂಕವಿರುವ ಆನೆ ಬಳ್ಳೆ ಆನೆ ಶಿಬಿರಕ್ಕೆ ಸೇರಿದೆ. 5 ಆನೆಯನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗುತ್ತಿತ್ತು. ಈ ಆನೆಯು ಹಿಂದೆ ಒಂದು ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿರುತ್ತದೆ.

ಇದು 18 - 19 ವರುಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, 2012ರಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

 ದಸರೆಗೆ ಮಹತ್ವದ ನಿರ್ಧಾರ: ವೀರನಹೊಸಹಳ್ಳಿಯಿಂದ ಹೊರಡಲಿದೆ ಗಜಪಡೆ ದಸರೆಗೆ ಮಹತ್ವದ ನಿರ್ಧಾರ: ವೀರನಹೊಸಹಳ್ಳಿಯಿಂದ ಹೊರಡಲಿದೆ ಗಜಪಡೆ

 ವರವ ಕೊಡುವ ವರಲಕ್ಷ್ಮೀ

ವರವ ಕೊಡುವ ವರಲಕ್ಷ್ಮೀ

ಮಾವುತ: ಜೆ.ಕೆ.ರವಿ, ಕಾವಾಡಿ: ಮಾದೇಶ
ಈಕೆ ಹೆಸರಿಗೆ ತಕ್ಕಂತೆ ತುಂಬಾ ಸಾಧು ಸ್ವಭಾವದವಳಾಗಿದ್ದು, ಇದನ್ನು 1977ರಲ್ಲಿ ಕಾಕನಕೋಟೆಯಲ್ಲಿ ಖೆಡ್ಡಾ ಮೂಲಕ ಸೆರೆ ಹಿಡಿಯಲಾಗಿದ್ದು, ಗಾಂಭೀರ್ಯಕ್ಕೆ ಹೆಸರಾಗಿದೆ. ನಿಶಾನೆ ಆನೆಯಾಗಿ ದಸರಾ ಮಹೋತ್ಸವದಲ್ಲಿ ಕಳೆದ 9 ವರ್ಷಗಳಿಂದ ಭಾಗವಹಿಸುತ್ತಿದೆ.

ಸುಮಾರು 62 ವರ್ಷ ವಯಸ್ಸಿನ 2.46 ಮೀಟರ್ ಎತ್ತರವಿದ್ದು, ಶರೀರದ ಉದ್ದ 3.34 ಮೀ. ಆಗಿದೆ. ಅಂದಾಜು 3,250 ದಿಂದ 3,325 ಕೆ.ಜಿ.ತೂಕವಿರುವ ಆನೆ ತಿತಿಮತಿ ಆನೆ ಶಿಬಿರಕ್ಕೆ ಸೇರಿದೆ.

 ಚೈತ್ರ ಯಾವಾಗಲೂ ಕೋಮಲೆ

ಚೈತ್ರ ಯಾವಾಗಲೂ ಕೋಮಲೆ

ಮಾವುತ: ಮಹದೇವ, ಕಾವಾಡಿ: ಕಲೀಂ
ಶಾಂತ ಸ್ವಭಾವದ ಚೈತ್ರ, ಬಂಡಿಪುರ ಆನೆ ಶಿಬಿರಕ್ಕೆ ಸೇರಿದೆ. ಇದು ಇಲಾಖಾ ಆನೆ ಕ್ಯಾಂಪ್ ನಲ್ಲಿರುವ ಗಂಗೆ ಆನೆಯ ಪುತ್ರಿಯಾಗಿದೆ. ಈವರೆಗೆ 4 ಬಾರಿಯಷ್ಟೇ ದಸರಾದಲ್ಲಿ ಭಾಗಿಯಾದ ಅನುಭವ ಹೊಂದಿದೆ. 47 ವರ್ಷ ವಯಸ್ಸಿನ ಚೈತ್ರ 2.52 ಅಡಿ ಎತ್ತರ ಇದ್ದು ಇದರ ಶರೀರದ ಉದ್ದ 3.62 ಮೀಟರ್ ಆಗಿದೆ.

ಅಂದಾಜು ತೂಕ 3,600 ಕೆ.ಜಿ ಇದ್ದು, ಕುಮ್ಲಿ ಆನೆಯಾಗಿ ಭಾಗವಹಿಸುವ ಸಾಧ್ಯತೆ ಇದೆ.

 ಪೂಜಾ ವಿಧಾನದಲ್ಲಿ ಭಾಗವಹಿಸುವ ವಿಕ್ರಮ

ಪೂಜಾ ವಿಧಾನದಲ್ಲಿ ಭಾಗವಹಿಸುವ ವಿಕ್ರಮ

ಮಾವುತ: ಪುಟ್ಟ, ಕಾವಾಡಿ: ಹೇಮಂತ್ ಕುಮಾರ್
ಕಳೆದ 3 ವರ್ಷಗಳಿಂದ ಗಜೇಂದ್ರನ ಸ್ಥಾನದಲ್ಲಿ ಅರಮನೆಯ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸುತ್ತಿರುವ ವಿಕ್ರಮ ಕಳೆದ 14 ವರ್ಷಗಳಿಂದ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೆ. 45 ವರ್ಷದ ವಿಕ್ರಮ ದುಬಾರೆ ಆನೆ ಶಿಬಿರಕ್ಕೆ ಸೇರಿದ್ದು, ಇದನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ.

ಶರೀರದ ಎತ್ತರ 2.60 ಮೀಟರ್ ಇದ್ದು, ಉದ್ದ 3.43 ಮೀಟರ್ ಇದೆ. ಅಂದಾಜು ತೂಕ 3,820 ಕೆ.ಜಿ. ಆಗಿದೆ.

 ಧನಂಜಯನಿಗೆ ಫಸ್ಟ್ ಎಕ್ಸ್ ಪೀರಿಯನ್ಸ್

ಧನಂಜಯನಿಗೆ ಫಸ್ಟ್ ಎಕ್ಸ್ ಪೀರಿಯನ್ಸ್

ಮಾವುತ: ಜೆ.ಸಿ.ಭಾಸ್ಕರ, ಕಾವಾಡಿ: ಜೆ.ಬಿ.ಸೂನ್ಯ

ಇದೇ ಮೊದಲ ಬಾರಿಗೆ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಧನಂಜಯ ಬಲಿಷ್ಠವಾಗಿದ್ದು, ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ದುಬಾರೆ ಆನೆ ಶಿಬಿರಕ್ಕೆ ಸೇರಿದ ಈ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆಯ ಯಸಳೂರು ವಲಯದ ವ್ಯಾಪ್ತಿಯಲ್ಲಿ ಸೆರೆಹಿಡಿಯಲಾಗಿದೆ.

ಶರೀರದ ಎತ್ತರ 2.78 ಮೀಟರ್ ಇದ್ದು, ಉದ್ದ 3.84 ಮೀಟರ್ ಇದೆ. ಅಂದಾಜು ತೂಕ 3,900-4,050 ಕೆ.ಜಿ. ಆಗಿದೆ.

English summary
Jamboo Savari is the center attraction of the Dasara festival. This is the first time Dhananjaya elephant has joined the team, Here's the complete information on the first team elephants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X