ಮೈಸೂರು: ಹಾಸ್ಯ ನಟ ಚಿಕ್ಕಣ್ಣಗೆ ಪಿತೃ ವಿಯೋಗ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 13 : ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಅವರ ತಂದೆ ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಹಾಸ್ಯ ನಟ ಚಿಕ್ಕಣ್ಣ ಅವರ ತಂದೆ ಭೈರೇಗೌಡ ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದು,. ಮೈಸೂರು ತಾಲೂಕಿನ ಬಲ್ಲಹಳ್ಳಿ ಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ಮೃತರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಮಗ ಚಿಕ್ಕಣ್ಣ ಅವರನ್ನು ಬಿಟ್ಟು ಅಗಲಿದ್ದಾರೆ.

Comedy actor chikanna's father passes away in mysuru.

ರಸ್ತೆ ಅಪಘಾತದಲ್ಲಿ ಯೋಧ ಸಾವು

ಮೈಸೂರು: ರಸ್ತೆ ಅಪಘಾತದಲ್ಲಿ ಯೋಧ ಒಬ್ಬ ಮೃತಪಟ್ಟ ಘಟನೆ ಮೈಸೂರಿನಲ್ಲಿ ಜರುಗಿದೆ.

ಮೃತರನ್ನು ಬಿಎಂಶ್ರೀ ನಗರದ ನಿವಾಸಿ ಮಹದೇವು ಎಂಬವರು ಪುತ್ರ ಮಹೇಶ್(26) ಎನ್ನಲಾಗಿದೆ. ರಾತ್ರಿ ಸ್ನೇಹಿತರನ್ನು ನೋಡಲು ಬೈಕ್ ನಲ್ಲಿ ಬಂದಿದ್ದು, ಆರ್.ಬಿ.ಐ.ಸಮೀಪದ ರಿಂಗ್ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಹೇಶ್ ರನ್ನು
ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಸಾವನ್ನಪ್ಪಿದ್ದಾರೆ.

Comedy actor chikanna's father passes away in mysuru.

ಮಹೇಶ್ ರಾಜಸ್ಥಾನದ ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಒಂದು ತಿಂಗಳು ರಜೆ ಹಾಕಿ ಜನವರಿ 15ರಂದು ಮೈಸೂರಿಗೆ ಬಂದಿದ್ದರು. ಫೆ.15ರಂದು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಕೆಲ ತಿಂಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಇವರು,
ಮೊನ್ನೆಯಷ್ಟೆ ವಿವಾಹ ನೋಂದಣಿ ಮಾಡಿಸಿದ್ದರು ಎನ್ನಲಾಗಿದೆ.

ಅರವಳಿಕೆ ಚುಚ್ಚುಮದ್ದು: ಯುವಕ ಸಾವು

ಮೈಸೂರು: ವೈದ್ಯರೊಬ್ಬರು ಅಗತ್ಯಕ್ಕಿಂತ ಹೆಚ್ಚಿನ ಅರವಳಿಕೆ ಔಷಧಿ ನೀಡಿದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಮೈಸೂರಿನಲ್ಲಿ ಜರುಗಿದೆ.

ಮೃತ ಯುವಕನನ್ನು ಗುಂಡ್ಲುಪೇಟೆ ತಾಲೂಕು ಕೆಲ್ಸೂರು ನಿವಾಸಿ ಮಂಜುಸ್ವಾಮಿ (22) ಎಂದು ಗುರುತಿಸಲಾಗಿದೆ. ಮೂತ್ರಕೋಶದಲ್ಲಿ ಕಲ್ಲಿದೆ ಎಂಬ ಕಾರಣಕ್ಕೆ ಈತನನ್ನು ಮಿಶನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Comedy actor chikanna's father passes away in mysuru.

ಶಸ್ತ್ರ ಚಿಕಿತ್ಸೆ ನಡೆಸಲು ಹೇಳಿದ್ದ ವೈದ್ಯ ಸೋಮಶೇಖರ್ ಅಗತ್ಯಕ್ಕಿಂತ ಹೆಚ್ಚು ಅರವಳಿಕೆ ಔಷಧಿ ನೀಡಿದ್ದು, ಯುವಕ ಕೋಮಾ ಸ್ಥಿತಿಗೆ ಜಾರಿದ್ದ ಎಂದು ಮಂಜುಸ್ವಾಮಿಯ ಪೋಷಕರು ಆರೋಪಿಸಿದ್ದಾರೆ. ಮಂಜುಸ್ವಾಮಿ ಪೊಲೀಸ್ ಆಗಬೇಕೆಂದು ಕನಸು ಕಂಡಿದ್ದ
ಅಷ್ಟರಲ್ಲಾಗಲೇ ವೈದ್ಯರು ಅವನನ್ನು ಸಾಯಿಸಿದ್ದಾರೆ ಎಂದು ಮಂಜುಸ್ವಾಮಿ ಪೋಷಕರು ಮಿಷನ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶವ ವಿಲೇವಾರಿಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು: ಕೃಷ್ಣರಾಜಪೇಟೆ ಪಟ್ಟಣದ ದೇವೀರಮಣ್ಣಿ ಕೆರೆಯಲ್ಲಿ ಕಳೆದ ಐದು ದಿನಗಳ ಹಿಂದೆ ಸಾವನ್ನಪ್ಪಿದ ಅಪರಚಿತ ಮಹಿಳೆಯ ಶವದ ಅಂತ್ಯಕ್ರಿಯೆ ಮಾಡದೇ ಇರುವ ಕಾರಣ ಶವ ಕೊಳೆತು ದುರ್ವಾಸನೆ ಬರುತ್ತಿರುವ ಹಿನ್ನೆಲೆ ಇನ್ನಿನ ರಾಮಯ್ಯ ಕಾಲೋನಿ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.

ಶವ ಕೊಳೆತು ದುರ್ವಾಸವೆ ಬೀರುತ್ತಿವುದಲ್ಲದೇ ಶವದಿಂದ ಹುಳುಗಳು ಉತ್ಪತಿಯಾಗುತ್ತಿದ್ದು ಇದರಿಂದ ಶವಾಗಾರಕ್ಕೆ ಹೊಂದಿಕೊಂಡಂತಿರುವ ರಾಮಯ್ಯ ಕಾಲೋನಿಯ ನಿವಾಸಿಗಳು ದುರ್ವಾಸನೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.

ತಕ್ಷಣ ಶವವನ್ನು ವಿಲೇವಾರಿ ಮಾಡಬೇಕು ಎಂದು ಶವಾಗಾರದ ಮುಂಭಾಗದಲ್ಲಿ ರಾಮಯ್ಯ ಕಾಲೋನಿ ನಿವಾಸಿಗಳು ಪ್ರತಿಭಟಿಸಿ ಪೋಲಿಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Comedy actor Chikanna's father passes away in Mysuru. His father died in heart attack. And other Crime strory.
Please Wait while comments are loading...