83 ನೇ ಸಾಹಿತ್ಯ ಸಮ್ಮೇಳನ ನಿಮಿತ್ತ ನಗರಕ್ಕೆ ಮತ್ತೆ ದೀಪಾಲಂಕಾರ !

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ನವೆಂಬರ್ 10: ದಸರಾ ವೇಳೆಯಲ್ಲಿ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಅರಮನೆ ನಗರಿ, ಇದೀಗ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮತ್ತೊಮ್ಮೆ ದೀಪಗಳಿಂದ ಶೃಂಗರಿಸಿಕೊಂಡಿದೆ.

ಸಾಹಿತ್ಯ ಸಮ್ಮೇಳನದಲ್ಲಿ ಅಕ್ಷರದ ಘಮಲಿನೊಂದಿಗೆ ನಾಲಿಗೆಗೆ ಭೂರಿಭೋಜನ

ನ.24ರಿಂದ 26ರವರೆಗೆ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಮೈಸೂರಿನ ಪ್ರಮುಖ ವೃತ್ತಗಳನ್ನು, ಪ್ರಮುಖ ರಸ್ತೆಗಳನ್ನು ದೀಪಗಳಿಂದ ಅಲಂಕರಿಸಲು ಅಲಂಕಾರ ಸಮಿತಿ ನಿರ್ಧರಿಸಿದೆ. 27 ವರ್ಷದ ಬಳಿಕ ಸಮ್ಮೇಳನ ಮೈಸೂರಿನಲ್ಲಿ ನಡೆಯುತ್ತಿರುವ ಕಾರಣ ಸಮ್ಮೇಳನವನ್ನು ಅದ್ಧೂರಿಯಾಗಿ ಮಾಡಲು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿರ್ಧರಿಸಿದೆ.

Colourful lights will increase attraction of Mysuru in 83rd Kannada Sahitya Sammelana on Nov 24 to 26

ದೀಪಾಲಂಕಾರದ ಮೂಲಕ ಪಾರಂಪರಿಕ ನಗರಿ ಮೈಸೂರಿನ ಸೌಂದರ್ಯವನ್ನು ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ನೋಡಬೇಕು ಎನ್ನುವ ನಿಟ್ಟಿನಲ್ಲಿ ಯತ್ನ ಸಾಗಿದೆ. ದೀಪಾಲಂಕಾರದ ಮೂಲಕ ಸಾಂಸ್ಕೃತಿಕ ನಗರಕ್ಕೆ ಆಗಮಿಸುವ ಪ್ರವಾಸಿಗರು, ಸಾಹಿತ್ಯಾಸಕ್ತರಿಗೆ 3 ದಿನಗಳ ಕಾಲ ಜಗಮಗಿಸುವ ಮೈಸೂರನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಲಂಕಾರ ಸಮಿತಿಯ ಕಾರ್ಯಾಧ್ಯಕ್ಷ ನರಸಿಂಹೇಗೌಡ ತಿಳಿಸಿದ್ದಾರೆ.

ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸಜ್ಜಾಗುತ್ತಿದೆ ಮಲ್ಲಿಗೆ ಸಾರೋಟು!

20 ಲಕ್ಷ ರೂ. ಬಜೆಟ್ ನಲ್ಲಿ ದೀಪಾಲಂಕಾರ:
ಮೂರು ದಿನಗಳ ದೀಪಾಲಂಕಾರಕ್ಕೆ ಅಂದಾಜು 20 ಲಕ್ಷ ರೂ. ವೆಚ್ಚವಾಗುವ ನಿರೀಕ್ಷೆಯಿದೆ. ಈ ಸಂಬಂಧ ಇನ್ನೂ ಅಲಂಕಾರ ಸಮಿತಿ ಅಂತಿಮ ಯೋಜನೆ ರೂಪಿಸಿಲ್ಲ. ಮೈಸೂರಿನಲ್ಲಿರುವ ಪ್ರಮುಖ 14 ವೃತ್ತಗಳನ್ನು ಅಲಂಕಾರ ಮಾಡಲು ಯೋಜನೆ ರೂಪಿಸಲಾಗಿದೆ. ಕೆ.ಆರ್‌.ವೃತ್ತ, ಜಯಚಾಮರಾಜ ಒಡೆಯರ್‌ ವೃತ್ತ, ರೈಲ್ವೆ ವೃತ್ತ, ಜಗನ್ಮೋಹನ ಅರಮನೆ ವೃತ್ತ, ಸಮ್ಮೇಳನ ನಡೆಯುವ ಸ್ಥಳದ ಬಳಿ ಇರುವ ರಾಮಸ್ವಾಮಿ ವೃತ್ತ, ಏಕಲವ್ಯ ವೃತ್ತ ಸೇರಿದಂತೆ ನಗರದ 14 ವೃತ್ತಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡುವ ಬಗ್ಗೆ ಚಿಂತನೆ ನಡೆದಿದೆ.

ದಸರಾ ಪ್ರಮಾಣದಂತೆ ಸಮ್ಮೇಳನದ ಸಂದರ್ಭ ದೀಪಾಲಂಕಾರ ಇಲ್ಲದೆ ಹೋದರೂ ಸಮ್ಮೇಳನದಲ್ಲಿ ಭಾಗವಹಿಸುವ ಸಾಹಿತ್ಯಾಸಕ್ತರಿಗೆ, ಪ್ರವಾಸಿಗರಿಗೆ ವಿದ್ಯುತ್‌ ಅಲಂಕಾರ ಕಣ್ಣಿಗೆ ಹಬ್ಬ ಉಂಟುಮಾಡುವುದು ಖಂಡಿತ.

ಉಳಿದಂತೆ ಸಮ್ಮೇಳನಾಸಕ್ತರು ಬಂದಿಳಿಯುವ ಕೇಂದ್ರೀಯ ಬಸ್‌ ನಿಲ್ದಾಣದಿಂದ ಸಮ್ಮೇಳನ ನಡೆಯುವ ಮಹಾರಾಜ ಕಾಲೇಜು ಮೈದಾನದ ರಸ್ತೆಗೆ ವಿದ್ಯುತ್‌ ಅಲಂಕಾರ ಮಾಡಲು ಚಿಂತಿಸಲಾಗಿದೆ. ಇದರ ಜೊತೆಗೆ ರೈಲಿನ ಮೂಲಕ ಸಾಹಿತ್ಯಾಸಕ್ತರು ಆಗಮಿಸುವುದರಿಂದ ರೈಲು ನಿಲ್ದಾಣದ ವೃತ್ತದ ರಸ್ತೆಯಿಂದ ಸಮ್ಮೇಳನದ ಮೈದಾನದ ರಸ್ತೆಯಲ್ಲಿ ದೀಪಾಲಂಕಾರ ಮಾಡಲು ಚಿಂತನೆ ಮಾಡಲಾಗುತ್ತಿದೆ ಎನ್ನುತ್ತಾರೆ.

ಒಟ್ಟಾರೆ ಸಾಹಿತ್ಯ ಸಮ್ಮೇಳನದ ಮೆರುಗು ಹೆಚ್ಚಿಸುವಲ್ಲಿ ಹಾಗೂ ಎಲ್ಲರಲ್ಲೂ ಅಚ್ಚಳಿಯದಂತೆ ಮೂಡಿಸುವಲ್ಲಿ ದೀಪಾಲಂಕಾರದ ಸೊಬಗು ಸಾಕ್ಷಿಯಾಗಲಿದೆ.

ಜಿಲ್ಲಾಧಿಕಾರಿಗೆ ಕರೆ

ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್ ಎಲ್ಲ ಉಪ ಸಮಿತಿಗಳಿಗೂ ಸೂಚಿಸಿದರು.

ಈ ಕುರಿತಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ದಿನಾಂಕ ಹತ್ತಿರದಲ್ಲಿದೆ. ಹಾಗಾಗಿ ಎಲ್ಲಾ ಉಪ ಸಮಿತಿಗಳೂ ತಮ್ಮ ಕೆಲಸ ಕಾರ್ಯಗಳನ್ನು ಚುರುಕಿನಿಂದ ಕೈಗೊಳ್ಳಬೇಕು. ಮೂರೂ ದಿನ ಸಂಜೆ 6 ರಿಂದ 10 ಗಂಟೆವರೆಗೆ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಕಲಾವಿದರನ್ನು ಬೇಗ ಅಂತಿಮಗೊಳಿಸಲು ತಿಳಿಸಿದರು.

Colourful lights will increase attraction of Mysuru in 83rd Kannada Sahitya Sammelana on Nov 24 to 26

ಸಾಂಸ್ಕೃತಿಕ ಸಮಿತಿ ಅಧ್ಯಕ್ಷರೂ ಆದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಹೆಸರಾಂತ ಗಾಯಕರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಲಕ್ಷಾಂತರ ರೂ. ನೀಡುವ ಬದಲಿಗೆ, ದಸರಾ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡುವುದು ಸೂಕ್ತ. ಮುಖ್ಯಮಂತಿಯವರ ತವರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕಮದಲ್ಲಿಯೂ ಲೋಪವಾಗಬಾರದು. ಹೆಚ್ಚಿನ ಜಾಗತೆ ವಹಿಸಬೇಕು ಎಂದು ಹೇಳಿದರು.

ಶಾಸಕ ವಾಸು ಮಾತನಾಡಿ, ಕಲಾವಿದರಾದ ರಘು ದೀಕ್ಷಿತ್, ವಸುಂಧರಾ ದೊರೆಸ್ವಾಮಿ ಮುಂತಾದ ಹಲವರು ಮೈಸೂರಿನವರಿದ್ದಾರೆ. ಅವರನ್ನು ಕನ್ನಡ ಹಬ್ಬದ ಕಾರಣದಿಂದ ಕಡಿಮೆ ಸಂಭಾವನೆಯಲ್ಲಿ ಕಾರ್ಯಕ್ರಮ ನೀಡುವಂತೆ ಕೇಳಬಹುದು ಎಂದು ಸಲಹೆ ನೀಡಿದರು. ಸಾಹಿತ್ಯ ಸಮ್ಮೇಳನದ ಮುಖ್ಯವೇದಿಕೆ ಮಹಾರಾಜ ಕಾಲೇಜು ಮೈದಾನದಲ್ಲಿರಲಿದ್ದು, ಮಹಾರಾಜ ಕಾಲೇಜು ಶತಮಾನೋತ್ಸವ ಭವನ, ಕರ್ನಾಟಕ ಕಲಾಮಂದಿರ, ಕಲಾಮಂದಿರದ ಆವರಣದ ಕಿರು ರಂಗಮಂದಿರ, ಚಿಕ್ಕ ಗಡಿಯಾರ ವೃತ್ತ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣ, ಸಿ.ರಂಗಾಚಾರ್ಲು ಪುರಭವನ ದಲ್ಲಿ ಉಪ ವೇದಿಕೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಈ ಸಮ್ಮೇಳನದ ಅಂಗವಾಗಿ ಭುವನೇಶ್ವರಿ ದೇವಿಯನ್ನು ಆನೆ ಮೇಲೆ ಮೆರವಣಿಗೆ ಮಾಡಲಾಗುವುದು. ಹಾಗೂ ಸಮ್ಮೇಳನಾಧ್ಯಕ್ಷರಾದ ಪ್ರೊ.ಚಂದ್ರಶೇಖರ ಪಾಟೀಲ ಅವರನ್ನು ಅಲಂಕೃತ ಸಾರೋಟಿ ನಲ್ಲಿ ಬರಮಾಡಿ ಕೊಳ್ಳಲಾಗುವುದು ಎಂದು ಸಭೆಗೆ ತಿಳಿಸಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Palace City Mysuru's roads will be filled with colourful lights in 83rd Kannada Sahitya Sammelana which will be taking place in the city from Nov 24th to 26th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ