ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿವಿಂಗ್ ಟುಗೆದರ್ ನಲ್ಲಿದ್ದ ಅರುಣಾಚಲ ವಿದ್ಯಾರ್ಥಿನಿ ಮೈಸೂರಿನಲ್ಲಿ ಆತ್ಮಹತ್ಯೆ

|
Google Oneindia Kannada News

ಮೈಸೂರು, ಜನವರಿ 4: ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಅರುಣಾಚಲ ಪ್ರದೇಶ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಐಐಟಿ ಮದ್ರಾಸ್ ಮಹಿಳಾ ಸಂಶೋಧಕಿ ನೇಣಿಗೆ ಶರಣುಐಐಟಿ ಮದ್ರಾಸ್ ಮಹಿಳಾ ಸಂಶೋಧಕಿ ನೇಣಿಗೆ ಶರಣು

ಮೈಸೂರಿನ ಬನ್ನಿಮಂಟಪದ ಶ್ರೀಶಿವರಾತ್ರೀಶ್ವರ ನಗರದಲ್ಲಿ ರೂಮೊಂದನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದ ಅರುಣಾಚಲ ಪ್ರದೇಶ ನಿವಾಸಿ ಲೂಮಾ ಡ್ರೀಮಾ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಬನ್ನಿಮಂಟಪದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ಲೂಮಾ, ಸ್ನೇಹಿತರೊಂದಿಗೆ ನೆಲೆಸಿದ್ದರು.

 ಅಪಾರ್ಟ್‌ಮೆಂಟ್‌ ಬಾಲ್ಕನಿಯಿಂದ ಜಿಗಿದು ಏಮ್ಸ್ ವೈದ್ಯ ಆತ್ಮಹತ್ಯೆ ಅಪಾರ್ಟ್‌ಮೆಂಟ್‌ ಬಾಲ್ಕನಿಯಿಂದ ಜಿಗಿದು ಏಮ್ಸ್ ವೈದ್ಯ ಆತ್ಮಹತ್ಯೆ

ಬುಧವಾರ ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

College student committed suicide in Mysuru

ಲೂಮಾ ಡ್ರೀಮಾ ಟಿಬೆಟಿಯನ್ ಬಾಯ್ ಫ್ರೆಂಡ್ ಜೊತೆ ಲಿವಿಂಗ್ ಟುಗೆದರ್ ನಲ್ಲಿ ಇದ್ದಳು. ಆಗಾಗ ಪಿಜಿಗೂ ಬರುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ತನ್ನ ರೂಮಿನಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಾಹಿತಿ ತಿಳಿದು ಎನ್.ಆರ್ ಪೊಲೀಸ್ ಠಾಣೆಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರವಾರ ಕಾರಣ ತಿಳಿದು ಬಂದಿಲ್ಲ.

English summary
College student committed suicide in Mysuru. She is from arunchal Pradesh and living together with her boyfriend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X