ನಂಜನಗೂಡು ಉಪಚುನಾವಣೆ: ಗ್ರಾ.ಪಂ. ಹಂತದಲ್ಲೂ ನೀತಿ ಸಂಹಿತೆ

Posted By:
Subscribe to Oneindia Kannada

ಮೈಸೂರು.ಮಾರ್ಚ್ 11: ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದರು.

ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಸರ್ಕಾರಿ ವಾಹನಗಳನ್ನು ಜನಪ್ರತಿನಿಧಿಗಳು ಚುನಾವಣಾ ಕಾರ್ಯಕ್ರಮಕ್ಕೆ ಬಳಸಿದರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ವಾಹನಗಳ ಸಂಚಾರದ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು. ಜಿಲ್ಲೆಯ ಯಾವುದೇ ಸರ್ಕಾರಿ ಅತಿಥಿ ಗೃಹಗಳಲ್ಲಿ ರಾಜಕೀಯ ಚಟುವಟಿಕೆ ನಡೆಸುವಂತಿಲ್ಲ ಎಂದು ಹೇಳಿದರು.

Code of conduct applies to whole disctrict: Randeep mysore DC said

ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಮಾತನಾಡಿ, ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 154 ಹಳ್ಳಿಗಳಿದ್ದು, 236 ಮತಗಟ್ಟೆಗಳಿವೆ. 72 ಅತಿಸೂಕ್ಷ್ಮ, 124 ಸೂಕ್ಷ್ಮ ಹಾಗೂ 40 ಸಾಮಾನ್ಯ ಮತಗಟ್ಟೆಗಳಿವೆ. ಪ್ರತಿ ಹಳ್ಳಿಗೆ 2 ಪೊಲೀಸ್ ಸಿಬ್ಬಂದಿಗಳನ್ನು, ಪ್ರತಿ 10 ಹಳ್ಳಿಗೆ ಒಬ್ಬರು ಉಪ ಆರಕ್ಷಕ ನಿರೀಕ್ಷಕರನ್ನು ಬಂದೋಬಸ್ತ್ ಹಾಗೂ ನಿಗಾವಹಿಸಲು ನಿಯೋಜಿಸಲಾಗುವುದು. ಗುರುವಾರದಿಂದಲೇ 5 ಚೆಕ್ ಪೋಸ್ಟ್ ಗಳು ಕಾರ್ಯಾರಂಭಿಸಿವೆ. ಒಟ್ಟು 15 ಚೆಕ್ ಪೋಸ್ಟ್ ಗಳನ್ನು ರಚಿಸಲಾಗುತ್ತದೆ. ಇಲ್ಲಿ ಕಂದಾಯ ಇಲಾಖೆ, ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ಪಾಳಿಯ ಮೇಲೆ ಕೆಲಸ ನಿರ್ವಹಿಸುವರು ಎಂದರು.

ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಸರ್ಕಾರಿ ಕಾರ್ಯಕ್ರಮ ಅಥವಾ ಹೊಸ ಯೋಜನೆಯನ್ನು ಘೋಷಿಸುವ0ತಿಲ್ಲ. ಸಾರ್ವಜನಿಕ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಭಿತ್ತಿಪತ್ರ, ಕಟೌಟ್, ಪೋಸ್ಟರ್, ಬ್ಯಾನರ್ಸ್ ಇತ್ಯಾದಿಗಳನ್ನು ಅನುಮತಿ ಇಲ್ಲದೆ ಹಾಕುವಂತಿಲ್ಲ. ಮತದಾರರ ಮೇಲೆ ಪ್ರಭಾವ ಬೀರುವುದು ಹಾಗೂ ಆಮಿಷಗಳನ್ನು ನೀಡುವಂತಿಲ್ಲ. ಅಂತಹ ಸಂದರ್ಭದಲ್ಲಿ ಆಮಿಷ ನೀಡಲು ಬಳಸುವ ಎಲ್ಲಾ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಅವರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Code of conduct applies to whole disctrict, Mysuru district commissioner Randeep told. The date for the by election for Nanjangud constituency has already announced.
Please Wait while comments are loading...