ಕಪ್ಪ ನೀಡಲು ಸಿದ್ದರಾಮಯ್ಯನವರಿಂದ ದುಷ್ಟಕೂಟ ರಚನೆ: ಶ್ರೀನಿವಾಸ್ ಪ್ರಸಾದ್ ಕಿಡಿ

By: ಮೈಸೂರು ಪ್ರತಿನಿಧಿ
Subscribe to Oneindia Kannada
ಮೈಸೂರು, ಫೆಬ್ರವರಿ 17 : ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ನೀಡುವ ಸಲುವಾಗಿ ಸಿದ್ದರಾಮಯ್ಯ ದುಷ್ಟಕೂಟ ರಚಿಸಿಕೊಂಡಿದ್ದು, ಅದರ ಮೂಲಕವೇ ಎಲ್ಲರನ್ನು ಸಮಾಧಾನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ವಿ. ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಸಿದ್ದರಾಮಯ್ಯರ ದುಷ್ಟಕೂಟಕ್ಕೆ ದಿಗ್ವಿಜಯಸಿಂಗ್ ಮುಖ್ಯಸ್ಥರಾಗಿದ್ದಾರೆ. ತನ್ನ ಕೂಟದ ಮೂಲಕ ಹೈಕಮಾಂಡ್ ಗೆ ಕಪ್ಪ ನೀಡುತ್ತಾ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ. ಇಲ್ಲದಿದ್ದಲ್ಲಿ ಕಾಂಗ್ರೆಸ್‌ನಲ್ಲಿ ಆದ ಬೆಳವಣಿಗೆಗೆ ಸಿದ್ದರಾಮಯ್ಯ ಯಾವತ್ತೋ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗಿತ್ತು ಎಂದು ಕಿಡಿಕಾರಿದರು.[ಎಸ್ಸೆಂ ಕೃಷ್ಣ ಬಿಜೆಪಿಗೆ ಸೇರಿದರೆ ಪಕ್ಷದ ಶಕ್ತಿ ಹೆಚ್ಚಲಿದೆ: ಶ್ರೀನಿವಾಸ ಪ್ರಸಾದ್]

CM Siddramaiah Govt create a darkest vice ring structure: V Srinivas Prasad

ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಗಳ ಹುದ್ದೆಯ ಗೌರವವೇ ಗೊತ್ತಿಲ್ಲ. ಅಂಥಹವರು ಸಿಎಂ ಆಗಿದ್ದು ರಾಜ್ಯದ ದುರದೃಷ್ಟ. ನಂಜನಗೂಡಿನ ಉಪಚುನಾವಣೆಯಲ್ಲಿ ನಾನು ಸೋತರೆ ರಾಜಕೀಯ ಸನ್ಯಾಸತ್ವ ಪಡೆಯುತ್ತೇನೆ. ನೀವು ಸೋತರೆ ರಾಜಕೀಯ ಬಿಡುತ್ತೀರಾ ಎಂದು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.

ನಂಜನಗೂಡಿನಲ್ಲಿ ಕಾಂಗ್ರೆಸ್ ಗೆಲ್ಲುತ್ತಿತ್ತು ಪ್ರಸಾದ್ ಅಲ್ಲ, ಅಂತಹ ಕಾಂಗ್ರೆಸ್ ಪಕ್ಷಕ್ಕೆ ಇಂದು 30 ಮಂದಿ ಅಭ್ಯರ್ಥಿಗಳಲ್ಲಿ ಒಬ್ಬರೂ ಆಯ್ಕೆಯಾಗುತ್ತಿಲ್ಲ. ಉಪಚುನಾವಣೆಯಲ್ಲಿ ನಿಮ್ಮ ಶಕ್ತಿ ಏನು ಅಂತ ತೋರಿಸಿ ಎಂದು ಜರಿದರು.

ಮಹದೇವಪ್ಪ ಸಿದ್ದರಾಮಯ್ಯರ ಗುಲಾಮರಾಗಿದ್ದು, ಸಿದ್ದರಾಮಯ್ಯನವರಿಂದಲೇ ಮಹದೇವಪ್ಪ ರಾಜಕೀಯದಲ್ಲಿ ಇದ್ದಾರೆ. ಅವರು ನಿಮ್ಮ ಲಾಯಲ್ಟಿಯಾಗಿರಬೇಕಿತ್ತು. ಆದರೆ ಅವರು ಗುಲಾಮರಾಗಿದ್ದಾರೆ. ಅವರಿಗೆ ಓಟು, ಹಣ, ಅಧಿಕಾರ ಎಲ್ಲವನ್ನು ಕೊಟ್ಟಿದ್ದು ಸಿದ್ದರಾಮಯ್ಯನವರೇ. ಇವರೆಲ್ಲರ ಮೂಲಕ ಹೈಕಮಾಂಡ್ ಕಿವಿ ಊದಿ ಇವರಿಲ್ಲದಿದ್ದರೇ ಕಾಂಗ್ರೆಸ್ ಇಲ್ಲ ಅನ್ನೋ ಪರಿಸ್ಥಿತಿಗೆ ತಂದಿಟ್ಟಿದ್ದಾರೆ. ಅದರ ಪರಿಣಾಮವಾಗಿ ಎಐಸಿಸಿ ದುರ್ಬಲವಾಗಿ ಹೋಗಿದೆ ಅಸಮಾಧಾನ ಗೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
V Srinivas Prasad alleged that Chief Minister Siddramaiah Government create a darkest vice ring structure for sending money for High command.
Please Wait while comments are loading...