ಮೋದಿ ಸ್ವಂತ ಹಣದಲ್ಲಿ ವಿದೇಶಕ್ಕೆ ಹೋಗ್ತಾರಾ: ಸಿಎಂ ಪ್ರಶ್ನೆ

Posted By:
Subscribe to Oneindia Kannada

ಮೈಸೂರು, ಜನವರಿ 11: ಸರ್ಕಾರದ ಹಣದಲ್ಲಿ 'ಸಾಧನಾ ಸಮಾವೇಶ' ಮಾಡುತ್ತಿದ್ದಾರೆ ಎಂಬ ಟೀಕೆಗೆ ಸಿದ್ದರಾಮಯ್ಯ ಅವರು ಇಂದು ಎಚ್.ಡಿ.ಕೋಟೆಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಉತ್ತರ ನೀಡಿದರು.

ಇದು ಸರ್ಕಾರಿ ಕಾರ್ಯಕ್ರಮ ಹಾಗಾಗಿ ಸರ್ಕಾರದ ಹಣ ಖರ್ಚು ಮಾಡುತ್ತಿದ್ದೇವೆ, ಇನ್ನೇನು ನನ್ನ ಹಣ ಖರ್ಚು ಮಾಡಬೇಕಿತ್ತಾ ಎಂದು ವ್ಯಂಗ್ಯವಾಗಿ ಕೇಳಿದರು.

ಅಮಿತ್ ಶಾ ಗೆ ಸಂವಿಧಾನ ಗೊತ್ತಿಲ್ಲ: ಸಿದ್ದರಾಮಯ್ಯ

ಜೆಡಿಎಸ್, ಬಿಜೆಪಿ ಅವರು ಸಿದ್ದರಾಮಯ್ಯ ಸರ್ಕಾರದ ಹಣ ಖರ್ಚು ಮಾಡಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ, ಅವರಿಗೆ ಕೇಳುತ್ತೇನೆ, ಬಿಜೆಪಿಯ ಪ್ರಧಾನಿ ಮೋದಿ ವಿದೇಶಕ್ಕೆ ಹೋಗುತ್ತಾರಲ್ಲ ಏನು ತಮ್ಮ ಸ್ವಂತ ಹಣ ಖರ್ಚು ಮಾಡಿಕೊಂಡು ಹೋಗುತ್ತಾರಾ, ಅದು ಸರ್ಕಾರದ ಹಣ ಅಲ್ಲವಾ? ಎಂದು ಮರು ಪ್ರಶ್ನೆ ಹಾಕಿ ಟೀಕಾಕಾರರ ಬಾಯಿ ಮುಚ್ಚಿಸಿದರು.

CM Siddaramaiah says which money Modi using to fly abroad

ಸಂಕ್ರಾಂತಿ ವಿಶೇಷ ಪುಟ

ರಾಜ್ಯದಲ್ಲಿ ಚುನಾವಣೆಗೆ ಐದು ತಿಂಗಳಿದೆ, ಚುನಾವಣಾ ಸಂಹಿತೆ ಜಾರಿ ಆಗಲು ಮೂರು ತಿಂಗಳಿದೆ, ಆಗ ಕೇಳುವ ಪ್ರಶ್ನೆಗಳನ್ನು ಪ್ರತಿ ಪಕ್ಷಗಳು ಈಗಲೇ ಕೇಳುತ್ತಿದ್ದಾರೆ ಇವರಿಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ನಕ್ಕರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddaramaiah answers to critics who lambasted him for using government money for 'Sadana Samavesha'. He said its govt program so we using govt money. Modi also using govt money to go abroad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ