ಪ್ರಧಾನಿ ಮೋದಿ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ಆಕ್ಷೇಪ

Posted By:
Subscribe to Oneindia Kannada
   Cm Siddaramaiah Opposed UGC Circular | Oneindia Kannada

   ಮೈಸೂರು, ಸೆ. 11:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆ. 11ರಂದು ಮಾಡುತ್ತಿರುವ ಭಾಷಣವನ್ನು ವಿಶ್ವವಿದ್ಯಾಲಯದ ಎಲ್ಲ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ವೀಕ್ಷಿಸುವಂತೆ ಯುಜಿಸಿ ಹಾಗೂ ಎಐಸಿಟಿಇ ಸುತ್ತೋಲೆ ಹೊರಡಿಸಿದೆ.

   ಯುಜಿಸಿ ಸುತ್ತೋಲೆಗೆ ಸಿಎಂ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಒಂದು ಧರ್ಮಕ್ಕೆ ಸೀಮಿತವಾದ ಭಾಷಣವಾಗಲಿದೆ ಎಂದಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಸಿದ್ದರಾಮಯ್ಯ ಅವರು, 'ನಾನು ಪತ್ರಿಕೆಗಳಲ್ಲಿ ಓದಿದೆ. ಹಿಂದುತ್ವದ ಬಗ್ಗೆ ಮಾತನಾಡಿದ್ರೆ ಹೇಳಿದ್ರೆ ಕೇಳಕೂಡದು. ಯುಜಿಸಿ ಭಾಷಣ ವೀಕ್ಷಣೆ ಕಡ್ಡಾಯಗೊಳಿಸಿರುವುದರ ಬಗ್ಗೆ ಮಾತನಾಡುತ್ತೇನೆ' ಎಂದರು.

   CM Siddaramaiah opposes UGC circular on viewing PM Modi's speech

   ದೀನ್ ದಯಾಳ್ ಉಪಾಧ್ಯಾಯ ಅವರ 100ನೇ ವರ್ಷಾಚರಣೆ ಹಾಗೂ ಸ್ವಾಮಿ ವಿವೇಕಾನಂದ ಅವರು ಶಿಕಾಗೊ ವಿಶ್ವಧರ್ಮ ಸಂಸತ್ತಿನಲ್ಲಿ ಉದ್ದೇಶಿಸಿ ನೀಡಿದ ಭಾಷಣದ 125ನೇ ವರ್ಷದ ಸ್ಮರಣಾರ್ಥ ಪ್ರಧಾನಿ ಮೋದಿ ಅವರು ಭಾಷಣ ಮಾಡುತ್ತಿದ್ದಾರೆ. ಈ ಭಾಷಣ ಬದುಕು ಬದಲಾಯಿಸುವ ಭಾಷಣವಾಗಲಿದೆ ಯುವ ಪೀಳಿಗೆ ಇದನ್ನು ಆಲಿಸಬೇಕು ಎಂದು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಯುಜಿಸಿ ಆದೇಶಿಸಿದೆ.

   ಶಿಕ್ಷಣ ಕ್ಷೇತ್ರವನ್ನು ಕೇಸರಿಕರಣಗೊಳಿಸುವ ನಿಟ್ಟಿನಲ್ಲಿ ಮೋದಿ ಭಾಷಣ ಸಾಗಲಿದೆ. ಯುಜಿಸಿ ಆದೇಶವನ್ನು ನಾವು ಪಾಲಿಸುವುದಿಲ್ಲ ಎಂದು ಪಶ್ಚಿಮ ಬಂಗಾಲ ಸರ್ಕಾರ ಈಗಾಗಲೇ ಪ್ರತಿಕ್ರಿಯಿಸಿದೆ.

   ಇದಾದ ಬಳಿಕ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೀನ್ ದಯಾಳ್ ಉಪಾಧ್ಯಾಯ್ ಅವರ ಬಗ್ಗೆ ಎಂದರೆ ಅದು ಹಿಂದೂ ಧರ್ಮದ ಕುರಿತಾಗಿ ಇರುತ್ತದೆ. ಒಂದು ಧರ್ಮದ ಬಗ್ಗೆ ಮಾತ್ರ ಮೋದಿ ಅವರು ಮಾತನಾಡುವುದಕ್ಕೆ ಆಕ್ಷೇಪವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

   CM Siddaramaiah opposes UGC circular on viewing PM Modi's speech

   'ಯುವ ಭಾರತ' ಮತ್ತು 'ನವ ಭಾರತ' ವಿಷಯಗಳ ಮೇಲೆ ವಿದ್ಯಾರ್ಥಿ ಸಮಾವೇಶ ಉದ್ದೇಶಿಸಿ ಮಾತನಾಡಲು ಕಾತರನಾಗಿದ್ದೇನೆ.'

   1893ರಲ್ಲಿ ಶಿಕಾಗೋ ನಗರದಲ್ಲಿ ಸ್ವಾಮಿ ವಿವೇಕಾನಂದರು ಐತಿಹಾಸಿಕ ಭಾಷಣ ಮಾಡಿದ ದಿನವಾದ ಸೆಪ್ಟೆಂಬರ್ 11ರಂದು ವಿದ್ಯಾರ್ಥಿ ಸಮಾವೇಶ ಆಯೋಜಿಸಲಾಗುತ್ತದೆ.

   ಈ ವರ್ಷ ನಾವು ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ಭಾಷಣ ಮಾಡಿದ 125ನೇ ವಾರ್ಷಿಕೋತ್ಸವ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಶತಮಾನೋತ್ಸವ ಆಚರಿಸುತ್ತಿದ್ದೇವೆ.

   ಸ್ವಾಮಿ ವಿವೇಕಾನಂದರು ಯುವಶಕ್ತಿಯಲ್ಲಿ ಬಲವಾದ ನಂಬಿಕೆ ಇಟ್ಟಿದ್ದರು. ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಸ್ಥಾನದ ಮಹತ್ವವನ್ನು ಅವರು ಕಂಡಿದ್ದರು.

   ಸ್ವಾಮಿ ವಿವೇಕಾನಂದರ ಸಿದ್ಧಾಂತಗಳಿಂದ ಪ್ರೇರಿತರಾಗಿ, ನಾವು ನಮ್ಮ ಯುವಜನರ ಆಶೋತ್ತರಗಳು ಮತ್ತು ಕನಸುಗಳನ್ನು ನನಸು ಮಾಡಲು ಅವಿಶ್ರಾಂತವಾಗಿ ದುಡಿಯುತ್ತಿದ್ದೇವೆ." ಎಂದು ಪ್ರಧಾನಿ ತಿಳಿಸಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The University Grants Commission (UGC) has urged students of colleges and universities to not miss Prime Minister Narendra Modi’s speech on September 11, terming it a “life-changing programme”. But, Siddaramaiahhas opposed UGC circular.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ