ಮೈಸೂರು: ಇಂದಿರಾ ಕ್ಯಾಂಟಿನ್ ಲೋಕಾರ್ಪಣೆಗೊಳಿಸಿದ ಸಿದ್ದರಾಮಯ್ಯ

Posted By: ಯಶಸ್ವಿನಿ ಎಂ.ಕೆ.
Subscribe to Oneindia Kannada
   ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಸಿದ್ದರಾಮಯ್ಯ | Oneindia Kannada

   ಮೈಸೂರು, ಜನವರಿ 12 : ಬಡವರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟಿನ್ ಯೋಜನೆ ಸಾಂಸ್ಕೃತಿಕ ನಗರಿಗೂ ವಿಸ್ತರಿಸಿದ್ದು, ಇಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಇಂದಿರಾ ಕ್ಯಾಂಟಿನ್ ಗೆ ಚಾಲನೆ ನೀಡಿದರು.

   ಮೈಸೂರಿನ ಕಾಡಾ ಕಚೇರಿಯ ಅವರಣದಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ ಮಾಡಿ ಅಲ್ಲಿ ಉಪ್ಪಿಟ್ಟು ಕೇಸರಿ ಬಾತ್ ಸವಿದರು. ನಗರದ 11 ಕಡೆಗಳಲ್ಲಿ ಇಂದಿರ ಕ್ಯಾಂಟಿನ್ ಸ್ಥಾಪಿಸಲಾಗಿದ್ದು ಇಂದಿನಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗಿದೆ. ಇಂದಿರಾ ಕ್ಯಾಂಟಿನ್ ಉದ್ಘಾಟನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಶಾಸಕರಾದ ವಾಸು, ಎಂ.ಕೆ ಸೋಮಶೇಖರ್ ಮೇಯರ್ ಎಂ.ಜೆ ರವಿಕುಮಾರ್, ಜಿ,.ಪಂ ಸದಸ್ಯೆ ಪುಷ್ಪಾ ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು. ಬೆಳಿಗ್ಗೆ 5ರೂಗೆ ತಿಂಡಿ ಮಧ್ಯಾಹ್ನ ಮತ್ತು ರಾತ್ರಿ 10ರೂಗೆ ಊಟ ದೊರೆಯಲಿದೆ.

   5 ರೂ ತಿಂಡಿ, 10 ರೂ ಊಟ; ಇಂದಿರಾ ಕ್ಯಾಂಟೀನ್ ಮೈಸೂರು ಅಡಿಗೆಮನೆ ರೆಡಿ!

   CM Siddaramaiah inaugurates Indira Canteen in Mysuru

   ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರನ್ನು ಪೊಲೀಸರೇ ಬಂಧಿಸುವ ಅಗತ್ಯವಿಲ್ಲ. ಅವರನ್ನ ರಾಜ್ಯದ ಜನರೇ ಅರೆಸ್ಟ್ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದರು. ಜನರ ಮನಸ್ಸಿನಲ್ಲಿ ಕೋಮು ಭಾವನೆ ಬಿತ್ತುವವರನ್ನ ಹಾಗೂ ಸಮಾಜದಲ್ಲಿ ಬೆಂಕಿ ಹಚ್ಚುವವರನ್ನು ಜನರೇ ಬಂಧಿಸುತ್ತಾರೆ. ಪ್ರಧಾನಿ ಮೋದಿ ಕಾಂಗ್ರೆಸ್ ವೈಪಲ್ಯ ತೋರಿಸುವ ಮೊದಲು ನಾನು ಮೋದಿ ಅವರ ವೈಫಲ್ಯ ಬಿಚ್ಚಿಡುತ್ತೇನೆ ಎಂದು ತಿಳಿಸಿದರು.

   ಸಂಕ್ರಾಂತಿ ವಿಶೇಷ ಪುಟ

   CM Siddaramaiah inaugurates Indira Canteen in Mysuru

   ರಾಜ್ಯಾದ್ಯಂತ ಒಂದು ತಿಂಗಳ ಪ್ರವಾಸ ಚೆನ್ನಾಗಿತ್ತು. ನಾವು ಜಾರಿಗೆ ತಂದಿರುವ ಎಲ್ಲಾ ಯೋಜನೆಗಳು ರಾಜ್ಯದ ಎಲ್ಲಾ ಭಾಗಗಳಿಗೂ ತಲುಪಿದ್ದು, ನಮ್ಮ ಪರ ರಾಜ್ಯದ ಜನರು ಒಲವು ತೋರಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   karnataka chief minsister Siddaramaiah inaguarated Indira canteen in Mysuru on Jan 12th. He had Upma and Kesaribath as part of inaguartion ceremony.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ