ನಾಯಕತ್ವ ಬದಲಾವಣೆ ವರದಿ ತಳ್ಳಿಹಾಕಿದ ಸಿದ್ದರಾಮಯ್ಯ

Posted By:
Subscribe to Oneindia Kannada

ಮೈಸೂರು, ಏಪ್ರಿಲ್ 28 : 'ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲಾಗುತ್ತದೆ ಎಂಬ ವದಂತಿ ಮಾಧ್ಯಮದವರ ಸೃಷ್ಟಿ. ಈ ವರದಿಯ ಹಿಂದೆ ನನ್ನ ರಾಜಕೀಯ ವೈರಿಗಳ ಕೈವಾಡ ಇದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗುರುವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ನಾಯಕತ್ವ ಬದಲಾವಣೆ ವಿಚಾರ ಬರೀ ಗಾಳಿ ಸುದ್ದಿ ಅದನ್ನೆಲ್ಲ ನಂಬಬೇಕಾಗಿಲ್ಲ. ನನ್ನ ಏಳಿಗೆ ಸಹಿಸದ ಕೆಲವರು ಅಪಪ್ರಚಾರ ಮಾಡಿದ್ದಾರೆ. ಇದು ಪ್ರತಿಪಕ್ಷದವರ ಕೆಲಸ' ಎಂದರು. [ಕೃಷ್ಣ ದೆಹಲಿಗೆ, ಸಿದ್ದರಾಮಯ್ಯ ಬದಲಾವಣೆ?]

siddaramaiah

'ಕೆಲವು ಮಾಧ್ಯಮದವರು ಊಹೆಯ ಆಧಾರದಲ್ಲಿ ಸುದ್ದಿ ಮಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಮಾಧ್ಯಮಗಳು ಇಂತಹ ಸುದ್ದಿ ಹಬ್ಬಿಸಿವೆ' ಎಂದು ಹೇಳಿದರು. [ಸಚಿವ ಸ್ಥಾನ ಬೇಕಾದರೆ ಮುಂಗಾರು ಮಳೆ ಬರಬೇಕು!]

ಸುದ್ದಿ ಹಬ್ಬಿದ್ದು ಏಕೆ? : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೈಕಮಾಂಡ್ ನಾಯಕರು ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ಗುರುವಾರ ಹಬ್ಬಿತ್ತು. ಎಸ್‌.ಎಂ.ಕೃಷ್ಣ ಅವರು ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಅವರನ್ನು ಭೇಟಿ ಮಾಡಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿತ್ತು. [ಸಿದ್ದರಾಮಯ್ಯ ಸಂಪುಟ ಪುನಾಚರನೆ, 10ಕ್ಕೂ ಹೆಚ್ಚು ಸಚಿವರ ಬದಲಾವಣೆ]

ಸಿದ್ದರಾಮಯಯ್ಯ ಅವರನ್ನು ಬದಲಾವಣೆ ಮಾಡಲಾಗುತ್ತದೆ. ಈ ಬಗ್ಗೆ ಚರ್ಚೆ ನಡೆಸಲು ಎಸ್‌.ಎಂ.ಕೃಷ್ಣ ಅವರು ದೆಹಲಿಗೆ ತೆರಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ವರದಿಯನ್ನು ತಳ್ಳಿಹಾಕಿದ್ದಾರೆ.

ಬರ ನಿವಾರಣೆಗೆ ಅಗತ್ಯ ಕ್ರಮ : 'ರಾಜ್ಯದಲ್ಲಿ ಬರ ಇರುವುದು ನಿಜ. ಆದರೆ, ಬಿಸಿಲು ಹೆಚ್ಚಾಗಿದ್ದರಿಂದ ಬರ ತೀವ್ರರೂಪದಲ್ಲಿ ಕಾಣಿಸುತ್ತಿದೆ. ಬರಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡು ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಬರ ನಿವಾರಣೆಗೆ ಅಗತ್ಯ ಹಣವನ್ನು ಸರ್ಕಾರ ಖರ್ಚು ಮಾಡಲಿದೆ' ಎಂದು ತಿಳಿಸಿದರು.

siddaramaiah in mysuru

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Replacing the Chief Minister before completion of Congress government's stint in the state of Karnataka is media fabrication, said CM Siddaramaiah.
Please Wait while comments are loading...