ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗರಿಗೇದರಿದ ನಂಜನಗೂಡು ಉಪಚುನಾವಣಾ ರಣಕಣ

By ಯಶಸ್ವಿನಿ ಎಂಕೆ.
|
Google Oneindia Kannada News

ಮೈಸೂರು, ಜನವರಿ 5 : ನಂಜನಗೂಡು ಉಪಚುನಾವಣೆಗೆ ತೀವ್ರ ಕಸರತ್ತು ಪ್ರಾರಂಭವಾಗಿದ್ದು ಇ ನಿಟ್ಟಿನಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಅಯ್ಕೆಗೆ ಜನಾಭಿಪ್ರಾಯ ಸಂಗ್ರಹಿಸೋಕೆ ಮುಂದಾಗಿದ್ದಾರೆ.

ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಮೈಸೂರಿನಲ್ಲಿರುವ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಭೆ ಸೇರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ರಣತಂತ್ರ ರೂಪಿಸಿರೋ ಮಾಹಿತಿ ಲಭ್ಯವಾಗಿದೆ. ನಂಜನಗೂಡು ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರನ್ನು ಬಗ್ಗು ಬಡಿಯಲು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಅವರ ನಡೆ ಕುತೂಹಲ ಮೂಡಿಸಿದೆ.[ನಂಜನಗೂಡಿನಲ್ಲಿ ಗೆಲ್ಲದಿದ್ದರೆ ಸಿದ್ದರಾಮಯ್ಯ ಮನೆಗೆ ಹೋಗಲಿ: ಪೂಜಾರಿ]

ಅಲ್ಲದೆ ಬಿಜೆಪಿಯು ಸಿದ್ದರಾಮಯ್ಯ ಮಾಡುತ್ತಿರುವ ಕಸರತ್ತು ನೋಡಿ ಬಳಗೊಳಗೇ ಖುಷಿ ಪಡುತ್ತಿದೆ.ಏಕೆಂದರೆ ಬಿಜೆಪಿಕೆ ಶ್ರೀನಿವಾಸ ಪ್ರಸಾದ್ ದೊರೆತ ಮೇಲೆ ಅವರ ಮುಂದೆ ಗಟ್ಟಿಯಾಗಿ ನಿಂತು ಸ್ಪರ್ಧಿಸುವ ಅಭ್ಯರ್ಥಿ ಕಾಂಗ್ರೆಸ್ಸಿನಲ್ಲಿ ಯಾರಿದ್ದಾರೆ ಎನ್ನುವ ಪ್ರಶ್ನೆ ಇದೆ. ಇನ್ನು ಜೆಡಿಎಸ್ ನಲ್ಲಿ ಇರುವ ಕಳಲೆ ಕೇಶವಮೂರ್ತಿಗಳು ಕಳೆದ ಬಾರಿ ಶ್ರೀನಿವಾಸ್ ಪ್ರಸಾದ್ ಎದಿರು ನಿಂತು ಸೋತಿದ್ದು ಅವರನ್ನು ಸೆಳೆಯಲು ಕಾಂಗ್ರೆಸ್ ಹರಸಾಹಸ ಮಾಡುತ್ತಿದೆ.

ಸಿದ್ದರಾಮಯ್ಯನವರಿಗೆ ಚಿಂತೆ

ಸಿದ್ದರಾಮಯ್ಯನವರಿಗೆ ಚಿಂತೆ

ನಂಜನಗೂಡು ಉಪಚುನಾವಣೆಗಾಗಿ ಸಿಎಂ ಸಿದ್ದರಾಮಯ್ಯ ಭಾರಿ ಪರಿತಪಿಸುವಂತಿದೆ. ಕಾಂಗ್ರೆಸ್ಸಿನಿಂದ ಶ್ರೀನಿವಾಸ್ ಪ್ರಸಾದ್ ಬಿಜೆಪಿಗೆ ಸೇರಿದ್ದಾರೆ. ಬಲಗೈಯಂತಿದ್ದ ಮಹದೇವ ಪ್ರಸಾದ್ ವಿಧಿವಶರಾಗಿದ್ದಾರೆ. ಇನ್ನು ಪಕ್ಷದಲ್ಲಿಯೇ ವೈಮನಸ್ಯ ಉಂಟಾಗಿದೆ. ಮುಖ್ಯಮಂತ್ರಿಗಳು ಉಪ ಚುನಾವಣೆಗೆ ಅಭ್ಯರ್ಥಿಯನ್ನು ಹುಡುಕುತ್ತಿದ್ದು ಸಮರ್ಥರು ಯಾರು ಎಂಬುದೇ ಪ್ರಶ್ನೆ

ನಾ ಒಲ್ಲೆ ಎಂದ ಧ್ರುವನಾರಾಯಣ್..!

ನಾ ಒಲ್ಲೆ ಎಂದ ಧ್ರುವನಾರಾಯಣ್..!

ಇನ್ನು ಇದೇ ವೇಳೆ ಕಾಂಗ್ರೆಸ್ ನಿಂದ ಕಣಕ್ಕಿಳಿಯೋ ಹೆಸರು ಕೇಳಿಬಂದ ಸಂಸದ ಆರ್. ಧ್ರುವನಾರಾಯಣ್ 'ನಾನು ಯಾವುದೇ ಕಾರಣಕ್ಕೂ ನಂಜನಗೂಡು ಉಪಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರಲ್ಲದೇ, ಮಹದೇವಪ್ರಸಾದ್ ಅವರ ನಿಧನದಿಂದಾಗಿ ತೆರವಾಗಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅವರ ಕುಟುಂಬ ಸದಸ್ಯರೊಬ್ಬರನ್ನು ಕಣಕ್ಕಿಳಿಸಬೇಕು ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.

ಕೇಶವ ಮೂರ್ತಿ ಸೆಳೆಯಲು ವಿಫಲ ಯತ್ನ?

ಕೇಶವ ಮೂರ್ತಿ ಸೆಳೆಯಲು ವಿಫಲ ಯತ್ನ?

ಇನ್ನು ನಂಜನಗೂಡು ಕ್ಷೇತ್ರದಲ್ಲಿ ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದಿರುವ ಜೆಡಿಎಸ್ ನ ಕಳಲೆ ಕೇಶವಮೂರ್ತಿಯನ್ನು ಪಕ್ಷದಿಂದ ಅಭ್ಯರ್ಥಿಯಾಗಿ ಮಾಡಿ ಜೆಡಿಎಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಜೆಡಿಎಸ್ ಸ್ಫರ್ಧೆ ಮಾಡದಂತೆ ಮನವೊಲಿಸುವ ಕೆಲಸವನ್ನ ಸಚಿವ ಡಾ. ಹೆಚ್. ಸಿ ಮಹದೇವಪ್ಪ ಅವರಿಗೆ ವಹಿಸಲಾಗಿದೆ ಎಂಬ ಮಾತು ಸಹ ಕೈ ಪಾಳಯದಿಂದ ಕೇಳಿಬರುತ್ತಿದೆ.

ಹಠಾತ್ ಏರಿಕೆಯಾಗುತ್ತಿದೆ ಮತದಾರರ ಸಂಖ್ಯೆ…!

ಹಠಾತ್ ಏರಿಕೆಯಾಗುತ್ತಿದೆ ಮತದಾರರ ಸಂಖ್ಯೆ…!

ಇನ್ನು ಕಾಂಗ್ರೆಸ್ ತೊರೆದು ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರಿದ ಬಳಿಕೆ ನಂಜನಗೂಡು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕೇವಲ 1 ತಿಂಗಳಿನಲ್ಲಿಯೇ ಹೆಚ್ಚುವಾರಿಯಾಗಿ 7,081 ಮಂದಿ ಹೊಸ ಮತದಾರರ ಸೇರ್ಪಡೆಯಾಗಿದೆ. ಇದರಿಂದಾಗಿ ಕಾಂಗ್ರೆಸ್ ಹಾಗೂ ವಿ.ಶ್ರೀನಿವಾಸ್ ಪ್ರಸಾದ್‌ಗೆ ಪ್ರತಿಷ್ಠೆಯೆ ಕಣವಾಗಿರುವ ನಂಜನಗೂಡುಮೀಸಲು ಕ್ಷೇತ್ರದಲ್ಲಿ ಹೊಸ ಮತದಾರರ ಒಲವೇನು ಎಂಬುವುದೇ ನಿಗೂಢವಾಗಿದೆ.

ಹಳೇ ಚುನಾವಣೆಯ ಇಣುಕು ನೋಟ

ಹಳೇ ಚುನಾವಣೆಯ ಇಣುಕು ನೋಟ

2013ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ನಂಜನಗೂಡು ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಫರ್ಧಿಸಿದ ವಿ.ಶ್ರೀನಿವಾಸ್ ಪ್ರಸಾದ್ 50,784 ಮತಗಳನ್ನು ಪಡೆದಿದ್ದರು. ಜೆಡಿಎಸ್ ನ ಕಳಲೆ ಎನ್. ಕೇಶವಮೂರ್ತಿ 41,843 ಮತಗಳನ್ನು ಪಡೆದು 8941 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಅಂದು ಚುನಾವಣೆಗೆ 97,871 ಪುರುಷರು, 93,913 ಮಹಿಳೆಯರು, 10 ಮಂದಿ ಇತರೆ ಸೇರಿಸಿ ಒಟ್ಟು 1,91,594 ಮಂದಿ ಮತ ಚಲಾವಣೆ ಮಾಡಿದ್ದರು.

ಮತದಾರ ಸಂಖ್ಯೆ ಎಷ್ಟು?

ಮತದಾರ ಸಂಖ್ಯೆ ಎಷ್ಟು?

ಮೂರೂವರೆ ವರ್ಷಗಳ ನಂತರ ನಂಜನಗೂಡು ಕ್ಷೇತ್ರದಲ್ಲಿ 98,196 ಮಹಿಳೆಯರು, 1,00,475 ಪುರುಷರು, 8ಮಂದಿ ಇತರರು ಸೇರಿದಂತೆ ಒಟ್ಟು 1,98,679 ಮಂದಿ ಮತದಾರರಿದ್ದು, ಕಳೆದ ಬಾರಿಗಿಂತ ಉಪ ಚುನಾವಣೆಯಲ್ಲಿ 7,085 ಮತದಾರರು ಹೊಸ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ವರ್ಸಸ್ ಶ್ರೀನಿವಾಸ್ ಪ್ರಸಾದ್ ನಡುವೆ ನಡೆಯುತ್ತಿರುವ ಜಿದ್ದಾಜಿದ್ದಿನ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಹುಡುಕುವುದರಲ್ಲಿಯೇ ಇರುವುದರಿಂದ ಬಿಜೆಪಿಗೆ ಒಳಗೊಳಗೆ ಸಂತೋಷವಾಗುತ್ತಿದೆ.

English summary
CM siddaramaiah candidate search for Nanjangud by-election in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X