ರಸ್ತೆ ಹೊಂಡದಲ್ಲಿ ಪೇಪರ್ ದೋಣಿ ತೇಲಿ ಬಿಟ್ಟ ಮಕ್ಕಳು!

Posted By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ನವೆಂಬರ್ 14: ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ರಸ್ತೆಯಲ್ಲಿದ್ದ ಹೊಂಡದ ನೀರಿನಲ್ಲಿಯೇ ಮಕ್ಕಳು ದೋಣಿ ಬಿಟ್ಟು ಪ್ರತಿಭಟನೆ ಮಾಡಿ, ಮಕ್ಕಳ ದಿನಾಚರಣೆ ಆಚರಿಸಿದ ಘಟನೆ ನಗರದ ಮಹಾರಾಜ ಮೈದಾನದ ಬಳಿ ನಡೆದಿದೆ.

ಮಕ್ಕಳ ದಿನಾಚರಣೆ : ಮಕ್ಕಳೊಂದಿಗೆ ಮಗುವಾದ ಯದುವೀರ್ ಒಡೆಯರ್

ಇದು ಒಂದು ಕಡೆ ಮಕ್ಕಳ ದಿನಾಚರಣೆ, ಮತ್ತೊಂದು ಕಡೆ ಪ್ರತಿಭಟನೆ ಎರಡನ್ನೂ ಒಂದೇ ಕಡೆ ನಡೆಸುವ ಮೂಲಕ ಸರಕಾರದ ಗಮನ ಸೆಳೆಯಲಾಯಿತು. ಈಗಾಗಲೇ ರಸ್ತೆಗಳ ಗುಂಡಿಗಳನ್ನು ಮುಚ್ಚಿಸುವ ಬಗ್ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ನಗರದ ಮಹಾರಾಜ ಮೈದಾನದ ಪಕ್ಕದ ಅಂಡರ್ ಬ್ರಿಡ್ಜ್ ಪಕ್ಕದ ರಸ್ತೆಯಲ್ಲಿನ ಗುಂಡಿಗಳಿಗೆ ನೀರು ತುಂಬಿ ಮಕ್ಕಳಿಂದ ದೋಣಿ ಆಡಿಸುವ ಆಟ ನಡೆಸಲಾಯಿತು.

Children's flew paper boat in pot holes near Maharaja stadium Mysuru

ಈ ವೇಳೆ ಮಾತನಾಡಿದ ಸಮಾಜ ಸೇವಕ ಜೋಗಿ ಮಂಜು, ಇವತ್ತು ಮಕ್ಕಳು ಹೋರಾಟದ ರೂಪದಲ್ಲಿ ಸರಕಾರದ ಗಮನ ಸೆಳೆಯಬೇಕು. ಏಕೆಂದರೆ ಮೈಸೂರು ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ಮೈಸೂರು ಗುಂಡಿಯ ನಗರವಾಗುತ್ತಿದೆ. ಭಾರತದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತವಾಗುತ್ತಿರುವ ನಂಬರ್ ಒನ್ ರಾಜ್ಯ ಕರ್ನಾಟಕವಾಗಿದೆ ಎಂದರು.

ಈ ಮಕ್ಕಳಿಗೆ ತಮ್ಮ ದಿನಾಚರಣೆಯ ಅರಿವೇ ಇಲ್ಲ

ಹೊರ ರಾಜ್ಯದಿಂದ ಬರುವ ಪ್ರವಾಸಿಗರು ಎಚ್ಚರ ತಪ್ಪಿದರೆ ಅಪಘಾತ ತಪ್ಪಿದಲ್ಲ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಬೇಕು ಎಂದು ಆಗ್ರಹಿಸಿದ್ದರು. ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಜಗದೀಶ್ ಕಡಕೊಳ, ಕೆಎಂಪಿಕೆ ಚಾರಿಟಬಲ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ರಾಜೇಶ್, ಶ್ರೀಕಾಂತ್ ಕಶ್ಯಪ್, ಮೋಹನ್, ರಾಜಶೇಖರ, ಮಕ್ಕಳಾದ ಶೀತಲ್, ಸಂಜನಾ, ರಮ್ಯಾ, ರಾಜೇಶ್, ಗಗನ್ ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Children's flew paper boat in pot holes, where water deposited near Maharaja stadium, Mysuru on Tuesday. Children's day celebration in a different way by Mysuru children's.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ