ಮಕ್ಕಳ ಕಲರವದಲ್ಲಿ ನಲಿದ ಬೈಲಕುಪ್ಪೆ ಟಿಬೆಟ್ ಕ್ಯಾಂಪ್

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಮಾರ್ಚ್,14: ಒಂದೆಡೆ ವ್ಯಾಪಾರದ ಭರಾಟೆ..ಮತ್ತೊಂದೆಡೆ ಮನರಂಜನೆಯ ರಸದೂಟ..ತಮಗೆ ಬೇಕಾದ ತಿಂಡಿ ತಿನಿಸು ತಿಂದು ಬಾಯಿ ಚಪ್ಪರಿಸುವ ಸದಾವಕಾಶ..ಎಲ್ಲೆಡೆ ಸಡಗರ ಸಂಭ್ರಮ..ಇದೆಲ್ಲಾ ಕಂಡು ಬಂದಿದ್ದು ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಒಂದನೇ ಟಿಬೆಟ್ ಕ್ಯಾಂಪಿನಲ್ಲಿ.

ಬೈಲಕುಪ್ಪೆಯ ಒಂದನೇ ಕ್ಯಾಂಪಿನ ಎಸ್.ಓ.ಎಸ್ ವಿದ್ಯಾಕೇಂದ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮನೋರಂಜನಾ ಜಾತ್ರೆ ನಡೆಯಿತು. ಈ ಜಾತ್ರೆಯಲ್ಲಿ ಮಕ್ಕಳೇ ವ್ಯಾಪಾರಸ್ಥರು, ಖರೀದಿದಾರರಾಗಿ ವ್ಯಾಪಾರ ಜ್ಞಾನದ ಜೊತೆಯಲಿ ನಕ್ಕು ನಲಿದರು.[ಇವರು ಬಡವರಿರಬಹುದು, ಇವರ ಜೀವನ ಪ್ರೀತಿಗೆ ಬಡತನವಿಲ್ಲ!]

Children Jaatre held in Bylakuppe tibetan camp, Mysuru

ಎಸ್.ಓ.ಎಸ್ ವಿದ್ಯಾಕೇಂದ್ರದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪಿಯುಸಿ ಓದುತ್ತಿರುವ ಮಕ್ಕಳು ಇಲ್ಲಿದ್ದಾರೆ. ಅಲ್ಲದೇ ಹೊರಗಿನಿಂದ ಸುಮಾರು 1300 ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿಯೇ ಬಂದಿದ್ದಾರೆ. ಇಲ್ಲಿ ವರ್ಷಕ್ಕೊಮ್ಮೆ ಮನೋರಂಜನಾ ಜಾತ್ರೆ ಏರ್ಪಡಿಸಲಾಗುತ್ತದೆ. ಈ ಸಂದರ್ಭ ದಾನಿಗಳಿಂದ ಹಣ ಸಂಗ್ರಹಿಸಿ ಕಡಿಮೆ ದರದಲ್ಲಿ ಬಟ್ಟೆ, ಚಪ್ಪಲಿ, ಹೀಗೆ ವಿವಿಧ ವಸ್ತುಗಳನ್ನು ತಂದು ಮಾರಾಟ ಮಾಡಲಾಗುತ್ತದೆ.

ಎಲ್ಲರೂ ಒಂದೆಡೆ ಕಲೆತು ಅಲ್ಲಲ್ಲಿ ಟೆಂಟ್ ಹಾಕಿ ಬಟ್ಟೆ, ಚಪ್ಪಲಿ ಹೀಗೆ ನಾನಾ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ವಿದ್ಯಾಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲದೆ, ಸುತ್ತಮುತ್ತಲಿನ ಟಿಬೆಟ್ ಕ್ಯಾಂಪಿನ ಜನರೂ ಇಲ್ಲಿ ಮಾರಾಟಕ್ಕೆ ಬರುತ್ತಾರೆ.[ನೀರಿನಲ್ಲಿ ಆಡುವ ಮೈಸೂರು ಮಕ್ಕಳಿಗೆ ಬುದ್ಧಿ ಹೇಳುವವರು ಯಾರು?]

Children Jaatre held in Bylakuppe tibetan camp, Mysuru

ಜೊತೆಗೆ ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುತ್ತಾರೆ. ಇದರಿಂದ ಕಡಿಮೆ ದರದಲ್ಲಿ ಮಕ್ಕಳಿಗೆ ವಸ್ತುಗಳು ದೊರೆಯುವುದಲ್ಲದೆ, ಸಂಸ್ಥೆಗೂ ಒಂದಷ್ಟು ಆದಾಯ ಬರುತ್ತದೆ ಎಂದು ಎಸ್.ಓ.ಎಸ್ ಮುಖ್ಯ ಶಿಕ್ಷಕರಾದ ಲೊಬ್ ಸಂಗ್ ಶರೀಫ್ ಹೇಳುತ್ತಾರೆ.[ಇಬ್ಬರು ಮಕ್ಕಳ ಬಾಳಿಗೆ ಬೆಳಕಾದ ವಿಜಯಪುರದ 'ಜ್ಯೋತಿ']

ಜಾತ್ರೆಯು ಬಟ್ಟೆ ಪ್ರಿಯರ ಮನತಣಿಸುವುದಲ್ಲದೇ ತಿಂಡಿ ಪ್ರಿಯರಿಗೂ ಇಲ್ಲಿ ಅವಕಾಶವಿದೆ. ಇಲ್ಲಿ ಟಿಬೆಟಿಯನ್ನರ ವಿಶೇಷ ತಿಂಡಿ ತಿನಿಸುಗಳನ್ನು ಕೂಡ ಮಾರಾಟ ಮಾಡಲಾಗುತ್ತದೆ. ತಮಗೆ ಬೇಕಾದ ಖಾದ್ಯಗಳನ್ನು ಸ್ಥಳದಲ್ಲೇ ಅಥವಾ ಮನೆಗೂ ಕೊಂಡೊಯ್ಯಬಹುದಾಗಿರುತ್ತದೆ.
ಒಟ್ಟಾರೆ ಬೈಲಕುಪ್ಪೆಯ ಒಂದನೇ ಟಿಬೆಟ್ ಕ್ಯಾಂಪಿನಲ್ಲಿ ನಡೆದ ಮಕ್ಕಳ ಮನೋರಂಜನಾ ಜಾತ್ರೆ ತುಂಬಾ ವಿಶಿಷ್ಟವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Children Jaatre held at SOS Vidyakendra, Bylakuppe tibetan camp. Chidren were center point of this event.
Please Wait while comments are loading...