ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಚ್ಚಿಬೀಳಿಸಿದ ಮಕ್ಕಳ ಮಾರಾಟ ಜಾಲ: 6 ಆರೋಪಿಗಳಿಗೆ ಜಾಮೀನು

ಆರೋಪಿಗಳ ಅರ್ಜಿಯನ್ನು ಪುರಸ್ಕರಿಸಿದ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ರೇಣುಕಾ, ಮೋಹನ್‌, ರವಿಚಂದ್ರ ಹಾಗೂ ಮದನ್‌ಲಾಲ್‌ಗೆ ಜಾಮೀನು ನೀಡಿದೆ. ಇನ್ನು 11 ಆರೋಪಿಗಳಲ್ಲಿ ಐವರಿಗೆ ನ್ಯಾಯಾಂಗ ಬಂಧನ ಮುಂದುವರಿದಿದೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 7 : ಕಳೆದ ವರ್ಷ ಇಡೀ ಮೈಸೂರನ್ನೇ ಬೆಚ್ಚಿ ಬೀಳಿಸಿದ ಮಕ್ಕಳ ಮಾರಾಟ ಜಾಲ ಪ್ರಕರಣದಲ್ಲಿ ಕಿಂಗ್ ಪಿನ್ ಉಷಾ, ಪ್ರಾನ್ಸಿಸ್ ಸೇರಿದಂತೆ 6 ಮಂದಿ ಆರೋಪಿಗಳಿಗೆ ಜಾಮೀನು ದೊರಕಿದೆ.

ಆರೋಪಿಗಳ ಅರ್ಜಿಯನ್ನು ಪುರಸ್ಕರಿಸಿದ ಜಿಲ್ಲಾ ಸೆಷನ್ಸ್‌ ನ್ಯಾಯಾಲಯವು ರೇಣುಕಾ, ಮೋಹನ್‌, ರವಿಚಂದ್ರ ಹಾಗೂ ಮದನ್‌ಲಾಲ್‌ಗೆ ಜಾಮೀನು ನೀಡಿದೆ. ಇನ್ನು 11 ಆರೋಪಿಗಳಲ್ಲಿ ಅನುಷಾ ಅಲಿಯಾಸ್‌ ಶ್ರೀಮತಿ, ಅಶೋಕ್‌ ಸೇರಿದಂತೆ ಇತರ ಐವರಿಗೆ ನ್ಯಾಯಾಂಗ ಬಂಧನ ಮುಂದುವರಿದಿದೆ.

Child trafficking case in Mysuru; six gets bail

ಪ್ರಕರಣದ ಹಿನ್ನೆಲೆ

ನವೆಂಬರ್ ನಲ್ಲಿ ಮಕ್ಕಳ ಮಾರಾಟ ಆರೋಪದಲ್ಲಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ನಂಜನಗೂಡಿನ ಪಾರ್ವತಿ ಎಂಬುವರ ಪುತ್ರನ ಅಪಹರಣ ಪ್ರಕರಣವನ್ನು ಪೊಲೀಸರು ಬೆನ್ನತ್ತಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.

ತೀವ್ರ ವಿಚಾರಣೆಯ ಬಳಿಕ ಉಷಾ, ಫ್ರಾನ್ಸಿಸ್‌ಗೆ ಸೇರಿದ ಮಂಡಿ ಮೊಹಲ್ಲಾದ ನಸೀಮಾ ಆಸ್ಪತ್ರೆಯಿಂದ ಮಕ್ಕಳ ಮಾರಾಟ ನಡೆಸುತ್ತಿರುವ ಮಾಹಿತಿ ಹೊರಬಂದಿತ್ತು. ತನಿಖೆಯ ಬಳಿಕ ಜಿಲ್ಲಾ ಪೊಲೀಸರು ಮಂಡಿ ಠಾಣೆಗೆ ಈ ಪ್ರಕರಣವನ್ನು ವರ್ಗಾಯಿಸಿದ್ದರು.

English summary
Six members, including the king pin of the child trafficking racket in Mysuru, Usha Francis is given bail by the court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X