ಚಿಕ್ಕಹುಣಸೂರು: ಯೋಗೀಶ್ ಕೊಲೆಗೈದ ಮೂವರು ಹಂತಕರ ಬಂಧನ

By: ಬಿಎಂ ಲವಕುಮಾರ್
Subscribe to Oneindia Kannada

ಹುಣಸೂರು, ಅಕ್ಟೋಬರ್ 12: ಪಟ್ಟಣದ ಹಳೇ ಚಿಕ್ಕಹುಣಸೂರು ಗ್ರಾಮದಲ್ಲಿ ಮೂರು ದಿನಗಳ ಹಿಂದೆ ನಡೆದ ಯೋಗೀಶ್ ಕೊಲೆ ಪ್ರಕರಣವನ್ನು ಗ್ರಾಮಾಂತರ ಭೇದಿಸಿದ್ದಾರೆ.

ಯೋಗಿಶ್ ಕೊಲೆಗೈದಿದ್ದ ಪೊಲೀಸರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಹುಣಸೂರು ಗ್ರಾಮದ ನಾಗಮಣಿ, ಸುರೇಶ್ ಅಲಿಯಾಸ್ ಸುದೇಶ್ ಮತ್ತು ಹರೀಶ್ ಬಂಧಿತ ಆರೋಪಿಗಳಾಗಿದ್ದಾರೆ.

ಮೃತ ಯೋಗೀಶ್ ಕಳೆದ ಹತ್ತು ವರ್ಷಗಳಿಂದ ನಾಗಮಣಿಯೊಂದಿಗೆ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಈ ನಡುವೆ ನಾಗಮಣಿ ಸುರೇಶ್ ಅಲಿಯಾಸ್ ಸುದೇಶ್‍ನೊಂದಿಗೆ ಸಂಬಂಧ ಬೆಳೆಸಿದ್ದು ಯೋಗೀಶ್‍ನ ಗಮನಕ್ಕೆ ಬಂದಿರಲಿಲ್ಲ.

Chikkahunsur: Three assassins arrested in Yogish murder case

ನಾಗಮಣಿ ಮನೆಗೆ ಆಕಸ್ಮಿಕವಾಗಿ ಯೋಗೀಶ್ ತೆರಳಿದ ವೇಳೆ ಅಲ್ಲಿ ಸುರೇಶ್ ಹಾಗೂ ಆತನ ಗೆಳೆಯ ಹರೀಶ್ ಇರುವುದು ಕಂಡು ಬಂದಿತ್ತು. ಇದರಿಂದ ಕೋಪಗೊಂಡ ಆತ ಕುಡಿದು ಬಂದು ನಾಗಮಣಿಯೊಂದಿಗೆ ಜಗಳವಾಡಿದ್ದನು.

ಈ ವೇಳೆ ಗಲಾಟೆಯಾಗಿದ್ದು, ಮೂವರು ಸೇರಿ ಯೋಗೀಶ್‍ನನ್ನು ಹೊಡೆದು ಕೊಲೆಗೈದು ಬಳಿಕ ತಲೆಮರೆಸಿಕೊಂಡಿದ್ದರು.

ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಸಿಐ ಪೂವಯ್ಯ ತನಿಖೆ ಆರಂಭಿಸಿ, ಖಚಿತ ಸುಳಿವಿನ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru: The Hunsur police arrested the assailants of Yogish. Nagamani of Chikkahunsur village, Suresh alias Sudesh and Harish have been arrested.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ