ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಈಶ್ವರಪ್ಪ ಹಳ್ಳಿ ಹೆಂಗಸರಂತೆ ಮಾತಾಡುತ್ತಾರೆ'

|
Google Oneindia Kannada News

ಮೈಸೂರು, ಸೆ.15 : 'ಈಶ್ವರಪ್ಪ ಹಳ್ಳಿ ಹೆಂಗಸರಂತೆ ಮಾತಾಡುತ್ತಾರೆ, ಜೈಲಿಗೆ ಹೋಗಿ ಬಂದ ಗಿರಾಕಿಯಿಂದ ಪಾಠ ಕಲಿಯಬೇಕಿಲ್ಲ, ಬಿಜೆಪಿಯವರು ನೀರಿನಿಂದ ಹೊರಬಂದ ಮೀನುಗಳಂತೆ ವಿಲವಿಲನೇ ಒದ್ದಾಡುತ್ತಿದ್ದಾರೆ' ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಂಜನಗೂಡು ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆದ 'ಪೋಡಿಮುಕ್ತ ಗ್ರಾಮ ಅಭಿಯಾನ' ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ವಿಧಾನಪರಿಷರಿತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್ ಅವರನ್ನು ಟೀಕಿಸಿದರು. ['ಸಿದ್ದರಾಮಯ್ಯ ಮಕ್ಕಳಿಗೆ ಲಕ್ವ ಹೋಡೀಲಿ']

'ಮುಂದಿನ ಚುನಾವಣೆಗೆ ನಿಲ್ಲಬಾರದು ಎಂದು ನಿರ್ಧರಿಸಿದ್ದೆ. ಬಿಜೆಪಿಯವರ ಆಟಾಟೋಪ ಅಡಗಿಸಲು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ, ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ. ಬಿಜೆಪಿ ಅವರು ತಿಪ್ಪರಲಾಗ ಹಾಕಿದರು ಮುಂದಿನ ಚುನಾವಣೆಯಲ್ಲಿ ಗೆಲುವು ನಮ್ಮದೇ' ಎಂದು ಹೇಳಿದರು. [ಈಶ್ವರಪ್ಪಗೆ ತಿರುಗೇಟು ಕೊಟ್ಟ ಸಿದ್ದು]

'ವಿಧಾನಪರಿಷತ್ ಪ್ರತಿಪಕ್ಷ ನಾಯಕ ಸ್ಥಾನದಲ್ಲಿರುವ ಈಶ್ವರಪ್ಪ ಅವರು ಹಳ್ಳಿಗಳಲ್ಲಿ ಹೆಂಗಸರು ಬೈದಂತೆ ಬೈತಾರೆ. ಅವರಿಗೆ ಜವಾಬ್ದಾರಿ ಇಲ್ಲವೇ?. ಸಿಎಂ ಪುತ್ರ, ಮಹಾದೇವಪ್ಪ ಪುತ್ರನಿಗೆ ಲಕ್ವಾ ಹೊಡೆಯಲಿ ಎಂದು ಹೇಳುತ್ತಾರೆ. ಇದೇನು ಆಡುವಂತಾ ಮಾತಾ?, ಗಂಭೀರವಾಗಿ ಮಾತನಾಡಲಿ' ಎಂದು ಸಿಎಂ ತಿರುಗೇಟು ಕೊಟ್ಟರು. ಮುಖ್ಯಮಂತ್ರಿಗಳು ಹೇಳಿದ್ದೇನು ಚಿತ್ರಗಳಲ್ಲಿ ನೋಡಿ.....

'ಮುಂದಿನ ಚುನಾವಣೆಗೆ ನಿಲ್ಲುತ್ತೇನೆ'

'ಮುಂದಿನ ಚುನಾವಣೆಗೆ ನಿಲ್ಲುತ್ತೇನೆ'

'ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದೆ.ಆದರೆ, ಬಿಜೆಪಿಯನ್ನು ಬಗ್ಗು ಬಡಿಯಲು ನಿಲ್ಲಲೇಬೇಕಾಗಿದೆ. ಅವರು ತಿಪ್ಪರಲಾಗ ಹಾಕಿದರೂ ಗೆಲುವು ನಮ್ಮದೇ' ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. 'ನಾನು ಚುನಾವಣೆಗೆ ನಿಲ್ಲಬೇಕಾ?' ಎಂದು ಜನರನ್ನು ಸಿದ್ದರಾಮಯ್ಯ ಅವರು ಕೇಳಿದಾಗ ಜನರು ನಿಲ್ಲಬೇಕು ಎಂದು ಕೂಗಿದರು.

'2 ವರ್ಷ 8 ತಿಂಗಳು ನಾನೇ ಮುಖ್ಯಮಂತ್ರಿ'

'2 ವರ್ಷ 8 ತಿಂಗಳು ನಾನೇ ಮುಖ್ಯಮಂತ್ರಿ'

'ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ 4 ತಿಂಗಳಾಗಿವೆ. ಇನ್ನೂ 2 ವರ್ಷ 8 ತಿಂಗಳು ನಾನೇ ಅಧಿಕಾರದಲ್ಲಿರುತ್ತೇನೆ. ಮುಂದಿನ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯಿಂದ ಏನೂ ಮಾಡಲಾಗದು' ಎಂದು ಸಿದ್ದರಾಮಯ್ಯ ಕುಟುಕಿದರು.

'ಈಶ್ವರಪ್ಪ ಹಳ್ಳಿ ಹೆಂಗಸರಂತೆ ಮಾತಾಡುತ್ತಾರೆ'

'ಈಶ್ವರಪ್ಪ ಹಳ್ಳಿ ಹೆಂಗಸರಂತೆ ಮಾತಾಡುತ್ತಾರೆ'

'ಸಿಎಂ ಪುತ್ರ, ಮಹಾದೇವಪ್ಪ ಪುತ್ರನಿಗೆ ಲಕ್ವಾ ಹೊಡೆಯಲಿ ಎಂದು ಈಶ್ವರಪ್ಪ ಅವರು ಮಾತನಾಡುತ್ತಾರೆ. ಇದೇನು ಆಡುವಂತಾ ಮಾತಾ?, ಗಂಭೀರವಾಗಿ ಮಾತನಾಡಲಿ' ಎಂದು ಹೇಳಿದ ಸಿದ್ದರಾಮಯ್ಯ ಅವರು, 'ವಿಧಾನಪರಿಷತ್ ಪ್ರತಿಪಕ್ಷ ನಾಯಕ ಸ್ಥಾನದಲ್ಲಿರುವ ಈಶ್ವರಪ್ಪ ಅವರು ಹಳ್ಳಿಗಳಲ್ಲಿ ಹೆಂಗಸರು ಬೈದಂತೆ ಬೈತಾರೆ. ಅವರಿಗೆ ಜವಾಬ್ದಾರಿ ಇಲ್ಲವೇ?' ಎಂದು ಪ್ರಶ್ನಿಸಿದರು.

'ನೀರಿನಿಂದ ಹೊರಬಂದ ಮೀನುಗಳಂತೆ ಆಗಿದ್ದಾರೆ'

'ನೀರಿನಿಂದ ಹೊರಬಂದ ಮೀನುಗಳಂತೆ ಆಗಿದ್ದಾರೆ'

'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನ ಕೈತಪ್ಪಿದ್ದಕ್ಕೆ ಬಿಜೆಪಿ ನಾಯಕರು ಹತಾಶೆಗೊಂಡಿದ್ದಾರೆ. ಹೆಚ್ಚು ಸ್ಥಾನ ಪಡೆದಿದ್ದೇವೆ ಎಂದು ಬೀಗುತ್ತಿದ್ದರು. ಮಾಧ್ಯಮದವರೂ 'ಸಾಮ್ರಾಟ ಅಶೋಕ' ಎಂದೆಲ್ಲಾ ಬಿಂಬಿಸಿದ್ದರು. ಆದರೆ, ಮೇಯರ್ ಚುನಾವಣೆಯಲ್ಲಿ ಮುಗ್ಗರಿಸಿಬಿಟ್ಟರು. ಇದರಿಂದಾಗಿ ಬಿಜೆಪಿಗೆ ಹತಾಶೆಯಾಗಿದೆ. ನೀರಿನಿಂದ ಹೊರಬಂದ ಮೀನುಗಳಂತೆ ವಿಲವಿಲನೇ ಒದ್ದಾಡುತ್ತಿದ್ದಾರೆ' ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

'ಪಾಠ ಕಲಿಯಬೇಕಿಲ್ಲ'

'ಪಾಠ ಕಲಿಯಬೇಕಿಲ್ಲ'

'ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, 'ಜೈಲಿಗೆ ಹೋಗಿ ಬಂದ ಗಿರಾಕಿಯಿಂದ ಪಾಠ ಕಲಿಯಬೇಕಿಲ್ಲ' ಎಂದು ಕುಟುಕಿದರು.

English summary
Karnataka Chief Minister Siddaramaiah on Monday announced that he would fight the 2018 Vidhana Sabha election to teach lesson to BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X