ಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶಿಸಿದ ಸೃಜನ್, ದರ್ಶನ್

Posted By:
Subscribe to Oneindia Kannada

ಮೈಸೂರು, ಜುಲೈ 14 : ಮಾಜಿ ಸಚಿವ ಸುರೇಶ್ ಕುಮಾರ್, ಶಾಸಕ ಜಿ.ಟಿ.ದೇವೇಗೌಡ ಶುಕ್ರವಾರ ಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾಡ ಶಶಿಧರ್ ದೀಕ್ಷಿತ್ ಸುದ್ದಿಗಾರರೊಂದಿಗೆ ಮಾತನಾಡಿ, ಇವತ್ತು ತಾಯಿಗೆ ಮೂರನೇ ಆಷಾಢ ಶುಕ್ರವಾರ. ಇದೇ ಭಾನುವಾರ ತಾಯಿಗೆ ವರ್ಧಂತಿ ಇದೆ ಎಂದರು.

ಅಂದು ಬೆಳಗ್ಗೆ 8 ಗಂಟೆಗೆ ವಿಶೇಷ ಪೂಜೆ ಇದೆ. ರಾಜಮಾತೆ ಪ್ರಮೋದಾದೇವಿ, ಕುಟುಂಬದ ಸದಸ್ಯರು ಹಾಗೂ ಗಣ್ಯರು ಚಿನ್ನದ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಮೈಸೂರು ದಸರಾ ವೈಭವ ಸವಿಯಲು ಚಾಮುಂಡಿಬೆಟ್ಟದಲ್ಲಿ ಟೆಲಿಸ್ಕೋಪ್

Challenging star Darshan, Srujan Lokesh visits Chamundeshwari hills

ಇನ್ನು ಮೂರನೇ ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜಾ ಕೈಕಂರ್ಯಗಳು ನಡೆದವು. ತಾಯಿ ಚಾಮುಂಡೇಶ್ವರಿಗೆ ಅಭಿಷೇಕ, ಅರ್ಚನೆ ಸಲ್ಲಿಸಲಾಗಿದ್ದು, ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇವಿಗೆ ನೀಲಿ ಬಣ್ಣದ ಸೀರೆಯನ್ನು ಉಡಿಸಲಾಗಿತ್ತು.

ದೇವಾಲಯಕ್ಕೆ ನಟ ಚಾಲೆಜಿಂಗ್ ಸ್ಟಾರ್ ದರ್ಶನ್, ಸೃಜನ್ ಲೋಕೇಶ್ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಆ ನಂತರ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಸುತ್ತುವರಿದಿದ್ದರು

ಚಾಮುಂಡಿ ಬೆಟ್ಟ ಕಾಲ್ನಡಿಗೆಯಲ್ಲಿ ಹತ್ತಿದ ಕರಂದ್ಲಾಜೆ, ಸಿದ್ದು ವಿರುದ್ಧ ಸಿಟ್ಟು

Challenging star Darshan, Srujan Lokesh visits Chamundeshwari hills

ದೇವಿಯ ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತಿದ್ದು , ದರ್ಶನ ಪಡೆಯಲು ಭಕ್ತರು ಸಾಲಾಗಿ ನಿಂತು ದರ್ಶನ ಪಡೆದರು. ಬೆಂಗಳೂರಿನ ಕೆ.ಆರ್ ಮಾರ್ಕೆಟ್ ನ ವರ್ತಕರು ಪ್ರತಿ ವರ್ಷದಂತೆ ಈ ಬಾರಿಯೂ ದೇವಿಗೆ ಹೂವಿನ ಅಲಂಕಾರ ಮಾಡಿಸಿದ್ದಾರೆ. ದರ್ಶನ ಪಡೆದು ಬಂದ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಸೇರಿದಂತೆ ಮತ್ತಿತರೆ ಸೌಲಭ್ಯ ಒದಗಿಸಲಾಗಿತ್ತು.

ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಹೆಲಿಪ್ಯಾಡ್ ನಿಂದ ಉಚಿತ ಸಾರಿಗೆ ವ್ಯವಸ್ಥೆ ಇತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Challenging star Darshan, 'Maja Talkies' Srujan Lokesh visits Chamundeshwari hills on the occasion of Ashadha Friday.
Please Wait while comments are loading...