ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಫ್ ​​​ಟಿಆರ್​ಐನಿಂದ ನೆರೆ ಸಂತ್ರಸ್ತರಿಗೆ ರುಚಿಯಾದ ಪೌಷ್ಟಿಕಾಂಶ ಆಹಾರ ಪೂರೈಕೆ

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 21: ಜಲಪ್ರಳಯಕ್ಕೆ ತುತ್ತಾಗಿರುವ ಕೇರಳ ಮತ್ತು ಕೊಡಗು ಜನರ ನೆರವಿಗೆ ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ ಮುಂದಾಗಿದ್ದು, ಸಂತ್ರಸ್ತರಿಗೆ ಹೈಪ್ರೋಟಿನ್ ಆಹಾರ ತಯಾರಿಕೆ ಮಾಡಿದೆ.

5 ಸಾವಿರ ಕೇರಳದವರಿಗೆ ಹಾಗೂ ಕೊಡಗಿನ 5 ಸಾವಿರ ಮಂದಿಗೆ ಊಟ ರವಾನೆ ಮಾಡಲಾಗಿದೆ. ಉಪ್ಪಿಟ್ಟು, ಅವಲಕ್ಕಿ, ಹೈಪ್ರೊಟಿನ್ ಬಿಸ್ಕೇಟ್ ಮತ್ತು ರಸ್ಕ್ ಗಳು ಜಾಮ್, ಉಪ್ಪಿನಕಾಯಿ ಪ್ಯಾಕೆಟ್ ಗಳನ್ನು ನೀರಿನ ಸಮೇತ ಪ್ಯಾಕ್ ಮಾಡಿ ರವಾನಿಸಲಾಗಿದೆ.

ವೈರಲ್ ವಿಡಿಯೋ:ಕೊಡಗಿನ ಕಣ್ಣೀರಿಗೆ ಮಿಡಿದ ಇನ್ಫೋಸಿಸ್ ಸುಧಾಮೂರ್ತಿವೈರಲ್ ವಿಡಿಯೋ:ಕೊಡಗಿನ ಕಣ್ಣೀರಿಗೆ ಮಿಡಿದ ಇನ್ಫೋಸಿಸ್ ಸುಧಾಮೂರ್ತಿ

ಅಷ್ಟೇ ಅಲ್ಲ, ಪ್ರತಿನಿತ್ಯ 10 ಸಾವಿರ ಮಂದಿ ಸಂತ್ರಸ್ತರಿಗೆ ಆಹಾರ ತಯಾರಿಸಿ ಪೂರೈಸಲು ಸಿದ್ಧವಿದ್ದೇವೆ ಎಂದು ಸಿ.ಎಫ್.ಟಿ.ಆರ್.ಐ ವಿಜ್ಞಾನಿಗಳು ತಿಳಿಸಿದ್ದಾರೆ.

CFTRI has transported cleaned food for flood affected victims.

"ಕೇರಳ ಮತ್ತು ಕೊಡಗಿನ ನೆರೆ ಸಂತ್ರಸ್ತರಿಗೆ ಸಿಎಫ್​​​ಟಿಆರ್​ಐನಿಂದ ಆಹಾರ ಪೂರೈಸುವ ಸಣ್ಣ ಕೆಲಸ ಮಾಡುತ್ತಿದ್ದೇವೆ. ಸುಮಾರು 10 ಸಾವಿರ ಜನರಿಗೆ ದಿಢೀರ್ ತಯಾರು ಮಾಡುವ ಉಪ್ಪಿಟ್ಟು ಮಿಶ್ರಣ ಕೊಡುತ್ತಿದ್ದೇವೆ. ಬಿಸಿ ನೀರು ಹಾಕಿ ಈ ಉಪ್ಪಿಟ್ಟನ್ನು ತಿನ್ನಬಹುದಾಗಿದೆ.

ಬಿಸ್ಕೆಟ್ ಗಿಂತ ಬದುಕು ಕಟ್ಟಿಕೊಳ್ಳಬೇಕು, ಕೊಡಗು ಸಂತ್ರಸ್ತರ ಮನವಿಬಿಸ್ಕೆಟ್ ಗಿಂತ ಬದುಕು ಕಟ್ಟಿಕೊಳ್ಳಬೇಕು, ಕೊಡಗು ಸಂತ್ರಸ್ತರ ಮನವಿ

1 ಕೆಜಿ ಪ್ಯಾಕೆಟ್​ಗಳಲ್ಲಿ ಈ ಎಲ್ಲ ಸಿದ್ಧಪಡಿಸಿದ ಆಹಾರವನ್ನು ಗಂಜಿ ಕೇಂದ್ರಗಳಿಗೆ ಕೊಡುತ್ತಿದ್ದೇವೆ. ಇದರ ಜೊತೆಗೆ ಹುಳಿ ಅವಲಕ್ಕಿ ಮಿಶ್ರಣ, ಚಪಾತಿ, ಉಪ್ಪಿನ ಕಾಯಿ, ರಸ್ಕ್ ಮತ್ತು ಬಿಸ್ಕೆಟ್​​ಗಳನ್ನು ಸಿದ್ಧಪಡಿಸಲಾಗುತ್ತಿದೆ. ನಮ್ಮಲ್ಲಿರುವ ತಂತ್ರಜ್ಞಾನವನ್ನು ಬಳಸಿ ರುಚಿಯಾಗಿ ಶುಚಿಯಾದ ಆಹಾರ ಸಿದ್ಧಪಡಿಸಲಾಗುತ್ತಿದೆ.

CFTRI has transported cleaned food for flood affected victims.

ಸುಮಾರು 15 ದಿನಗಳ ಕಾಲ ಈ ಆಹಾರ ಕೆಡದಂತೆ ತಯಾರು ಮಾಡಲಾಗುತ್ತಿದೆ" ಎನ್ನುತ್ತಾರೆ ವಿಜ್ಞಾನಿ ಸತ್ಯಂದ್ರ.

ಸಿಎಫ್ ಟಿಆರ್ ಐನ 250 ಮಂದಿಯ ತಂಡ ಎರಡು ದಿನಗಳಿಂದ ಆಹಾರ ತಯಾರಿಕೆಯಲ್ಲಿ ತೊಡಗಿದೆ. ಈಗಾಗಲೇ ಸಂಸ್ಕರಿಸಿದ ರವೆ ಉಪ್ಪಿಟ್ಟಿನ ಮಿಕ್ಸಿ ಪುಡಿಯನ್ನು ನಿತ್ಯ 250ರಿಂದ 300 ಕೆಜಿವರೆಗೆ ತಯಾರು ಮಾಡುತ್ತಿದ್ದೇವೆ.

CFTRI has transported cleaned food for flood affected victims.

15 ದಿನಗಳವರೆಗೂ ಶೇಖರಿಸಿ ಇದರ ಪುಡಿ ಬಳಸಬಹುದಾಗಿದ್ದು, ತಣ್ಣೀರಿನಲ್ಲಿ 25 ನಿಮಿಷ ಅಥವಾ ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ ಉಪ್ಪಿಟ್ಟನ್ನು ಸವಿಯಬಹುದಾಗಿದೆ. ಇಲ್ಲವಾದರೆ ಹಾಗೆಯೂ ಸಹ ಸೇವಿಸಿ ನೀರು ಕುಡಿಯುವಂತೆಯೂ ಸಂಸ್ಕರಿಸಲಾಗಿದೆ. ಅಂತೆಯೇ ಅವಲಕ್ಕಿ ಉಪ್ಪಿಟ್ಟನ್ನು ಸಹ ತಯಾರು ಮಾಡಲಾಗುತ್ತಿದೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ನಿತ್ಯ 200 ಕೆ.ಜಿ. ರಸ್ಕ್ ತಯಾರಿಸಲಾಗುತ್ತಿದೆ. ಗಂಟೆಗೆ 75 ಕೆ.ಜಿ. ಬಿಸ್ಕೆಟ್ ತಯಾರಿಸುತ್ತಿದ್ದು, ದಿನಕ್ಕೆ 150ರಿಂದ 200 ಕೆ.ಜಿ ಪ್ರೊಟಿನ್ ಯುಕ್ತ ಬಿಸ್ಕೆಟ್ ಗಳನ್ನು ತಯಾರು ಮಾಡಲಾಗುತ್ತಿದೆ.

CFTRI has transported cleaned food for flood affected victims.

20 ಸಾವಿರ ಮಂದಿಗೆ ನೀಡುವಷ್ಟು ಆಹಾರ ನಿತ್ಯ ತಯಾರು ಮಾಡಲಾಗುತ್ತಿದ್ದು, ಒಂದು ವಾರ ಆಹಾರವನ್ನು ಕಳುಹಿಸಿಕೊಡಲಾಗುವುದು. ಆನಂತರವೂ ಇದೇ ಪರಿಸ್ಥಿತಿ ಮುಂದುವರಿದರೆ ಸಿಎಫ್ಆರ್ ಐ ನಿರ್ವಹಣೆ ಮಾಡಲಿದೆ" ಎಂದು ನಿರ್ದೇಶಕ ಡಾ.ಆರ್‌.ಸುಬ್ರಹ್ಮಣ್ಯನ್ ತಿಳಿಸಿದ್ದಾರೆ.

English summary
Mysuru CFTRI has transported cleaned food for flood affected victims. Rich protein food prepared to Overall 10,000 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X