ಜ.26ಕ್ಕೆ ಸುತ್ತೂರು ಜಾತ್ರೆಯಲ್ಲಿ ಗಾಳಿಪಟ ಸ್ಪರ್ಧೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 25 : ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಶನಿವಾರ ಪ್ರಾರಂಭವಾಗಿದ್ದು 29ರ ವರೆಗೆ ಇದರ ಅಂಗವಾಗಿ ಮಕ್ಕಳಿಗೆ ಗಾಳಿಪಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಒಟ್ಟು ನಾಲ್ಕು ವಿಭಾಗದಲ್ಲಿ ಗಾಳಿಪಟ ಸ್ಪರ್ಧೆಯನ್ನು ಜನವರಿ 26ರ ಗುರುವಾರ ಏರ್ಪಡಿಸಲಾಗಿದೆ. ವಿಶೇಷವಾಗಿ ಬೆಂಗಳೂರಿನ ಕೈಟ್ ಕ್ಲಬ್ ಸದಸ್ಯರಿಂದ ವಿವಿಧ ವಿನ್ಯಾಸದ ಸುಂದರ ಗಾಳಿಪಟ ಪ್ರದರ್ಶನವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕ್ಲಬ್ ವತಿಯಿಂದ ಗಾಳಿಪಟ ಸ್ಫರ್ಧೆ ಸಂಬಂಧ ತಯಾರಿಯನ್ನು ಮಾಡಲಾಗಿದ್ದು ಮಕ್ಕಳ ನೋಂದಣಿ ಕಾರ್ಯ ನಡೆಯುತ್ತಿದೆ ಎಂದು ಕೈಟ್ ಕ್ಲಬ್ ನ ಕಾರ್ಯಕಾರಿ ಸಮಿತಿ ತಿಳಿಸಿದೆ.[ಮಂಗಳೂರು ಜನತೆಯ ಮನಸೆಳೆದ ಗಾಳಿಪಟ ಉತ್ಸವ]

celebration of kite contest in sutturu fair

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ, ನಗದು ಬಹುಮಾನ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತ ಮಕ್ಕಳು ಹಾಗೂ ಸಾರ್ವಜನಿಕರು ವಿನೋದ್ ಕುಮಾರ್ ಮತ್ತು ಎಂ. ಗೋಪಾಲ್ ಅವರನ್ನು 8884932916, 7676644449, 9343777797 ಸಂಖ್ಯೆಯ ಮೊಬೈಲ್ ಕರೆಯ ಮೂಲಕ ಅಥವಾ ಜಾತ್ರಾ ಮಹೋತ್ಸವ ಕಾರ್ಯಾಲಯವನ್ನು ನೇರವಾಗಿ ಅಥವಾ 0821-2548212 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On January 26, as part of the Fair nanjanagudu taluk sutturu shivaratrishwara sivayogi sri. the celebration of kite contest for school childrens.
Please Wait while comments are loading...