ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ಹಾದಿಯಲ್ಲಿ 93 ಅತ್ಯಾಧುನಿಕ ಬಸ್

By Srinath
|
Google Oneindia Kannada News

CCTV Camera-fitted 93 KSRTC buses to join Bangalore Mysore fleet
ಮೈಸೂರು, ಮಾರ್ಚ್ 22: ಇತ್ತೀಚನ ದಿನಗಳಲ್ಲಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಬಸ್ಸುಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಅಳವಿಸುವುದಷ್ಟೇ ಅಲ್ಲ, ತಪ್ಪಿತಸ್ಥ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರಕಾರ ಹೇಳಿತ್ತು.

ಆದರೂ ಇತ್ತೀಚೆಗೆ ಬಿಎಂಟಿಸಿ ಪುಷ್ಪಕ್ ಬಸ್ಸಿನಲ್ಲಿ ಹೆಣ್ಣುಮಗಳೊಬ್ಬಳ ಮೇಲೆ ಚಾಲಕನ ಮನಸೋ ಇಚ್ಛೆ ವರ್ತನೆ ನಡೆದಿದೆ. ಆದರೆ ಬಿಎಂಟಿಸಿ ಅಧಿಕಾರಿಗಳು ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಬಗ್ಗೆ ಇನ್ನೂ ಮೌನವಾಗಿದ್ದಾರೆ.

ಈ ಮಧ್ಯೆ, KSRTC ಸಂಸ್ಥೆಯು ಬೆಂಗಳೂರು-ಮೈಸೂರು ಹಾದಿಯಲ್ಲಿ ಸಂಚರಿಸುವ ತನ್ನ ಬಸ್ಸುಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸತೊಡಗಿದೆ. ಸುಮಾರು ನೂರು ಬಸ್ಸುಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅವಳವಡಿಸುವ ಮೂಲಕ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಆದ್ಯ ಗಮನ ನೀಡಿದೆ.

ಬೆಂಗಳೂರು-ಮೈಸೂರು ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡು JNNURM ಯೋಜನೆಯಡಿ ಈ ಹೊಸ ಬಸ್ಸುಗಳನ್ನು ಮೇ ವೇಳೆಗೆ ಮೈಸೂರು ಸಂಚಾರಕ್ಕೆ ಬಿಡಲಾಗುವುದು. ಬಸ್ ತಯಾರಿಕಾ ಕಂಪನಿಯೇ ಅತ್ಯಾಧುನಿಕ CCTV camera ಗಳನ್ನು ಅಳವಡಿಸಿದೆ ಎಂದು ಕೆಎಸ್ಆರ್ ಟಿಸಿ ವಿಭಾಗೀಯ ಕಂಟ್ರೋಲರ್ ಎಚ್ಎಂ ರಮೇಶ್ ತಿಳಿಸಿದ್ದಾರೆ.

ಜತೆಗೆ ಪ್ರಯಾಣಿಕರ ಸುರಕ್ಷತೆಗಾಗಿ 'ಮಿತ್ರ' ಎಂಬ Mysore Intelligent Transport (Mitra) system ಈಗಾಗಲೇ ಪ್ರಾಯೋಗಿಕವಾಗಿ ಜಾರಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

English summary
CCTV Camera-fitted 93 KSRTC -JNNURM buses to join Bangalore Mysore fleet. “We have been told that 93 buses allotted for expanding operations in Mysore on intra-city routes will be equipped with cameras for passenger safety. Once the camera-fitted buses are added to the existing fleet (expected to arrive in May), we will establish a system for continuous monitoring of camera footage,” said Divisional Controller (Urban) H.M. Ramesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X