ಮೈಸೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 23 ಲಕ್ಷ ನಗದು ವಶಕ್ಕೆ

Posted By:
Subscribe to Oneindia Kannada

ಮೈಸೂರು, ಜನವರಿ 8: ಮೈಸೂರು ನಗರ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಪರಿಚಯಸ್ಥನ ಮನೆಗೆ ಕನ್ನಹಾಕಿದ್ದ ಇಬ್ಬರು ಖದೀಮರನ್ನು ಸೇರಿದಂತೆ 23 ಲಕ್ಷ ನಗದು, 6 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ರಿಯಾಜ್ ಷರೀಫ್ ಹಾಗೂ ಫಯಾಜ್ ಷರೀಫ್ ಬಂಧಿತ ಆರೋಪಿಗಳು. ಬಂಧಿತರಿಂದ 23 ಲಕ್ಷ ನಗದು, 6 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಅಪ್ಪ- ಮಗ ಜೊತೆಗೂಡಿ ಪರಿಚಯಸ್ಥನ ಮನೆಯಲ್ಲಿ ಕೈ ಚಳಕ ತೋರಿಸಿದ್ದರು.

ರಿಯಾಜ್ ಒಂದು ವರ್ಷದಿಂದ ಮನೆ ಮಾಲೀಕನ ಮನೆಗೆ ಬಂದು ಹೋಗುತ್ತಿದ್ದ. ಈ ನಡುವೆ ಆರೋಪಿ ಹಾಗೂ ಮನೆ ಮಾಲೀಕ ಬ್ಯುಸಿನೆಸ್ ನಲ್ಲಿ ಪರಿಚಯಸ್ಥರಾಗಿದ್ದರು.

CCB police have arrested two thieves who had burgled a house at Pattegara street

ಹೀಗಾಗಿ ಮನೆಗೆ ಬಂದು ಹೋಗುವಾಗ ಮನೆ ಮಾಲೀಕನ ಚಲನವಲನದ ಬಗ್ಗೆ ರಿಯಾಜ್ ನಿಗಾ ಇಟ್ಟಿದ್ದ. ಜತೆಗೆ ಮನೆಯಲ್ಲಿ ಸಜ್ಜಾ ಮೇಲೆ ಕೀ ಇಡುವ ಬಗ್ಗೆ ರಿಯಾಜ್ ಮಾಹಿತಿ ಕಲೆ ಹಾಕಿದ್ದ.

ಮನೆಯಲ್ಲಿ ಯಾರು ಇಲ್ಲದ ವೇಳೆ ಪ್ಲಾನ್ ರೂಪಿಸಿ ಡಿ.31ರಂದು ಮನೆಗೆ ನುಗ್ಗಿ ಅಪ್ಪಮಕ್ಕಳಿಬ್ಬರು ಲಾಕರ್ ನಲ್ಲಿದ್ದ 23 ಲಕ್ಷ ಹಾಗೂ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದರು. ಈ ವೇಳೆ ಹಣ ತೆಗೆದುಕೊಂಡು ಲಾಕರ್ ನೀರಿನಲ್ಲಿ ಬಿಸಾಡಿದ್ದರು.

ಪ್ರಕರಣ ದಾಖಲಿಸಿಕೊಂಡು ಮಂಡಿ ಠಾಣೆ ಸಿಸಿಬಿ ಪೊಲೀಸರು, ತಂತ್ರಜ್ಞಾನದಿಂದ ಪ್ರಕರಣ ಭೇದಿಸಿ ಗೂಡ್ಸ್ ಆಟೋ ಮೂಲಕ ಆರೋಪಿಗಳನ್ನ ಬಂಧಿಸಿದ್ದಾರೆ.

CCB police have arrested two thieves who had burgled a house at Pattegara street

ಹೆಲ್ಮೆಟ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ಹೇಳಿಕೆ : ಇದೇ ವೇಳೆ ಐ ಎಸ್ ಐ ಮಾರ್ಕಿನ ಹೆಲ್ಮೆಟ್ ಕಡ್ಡಾಯ ಕುರಿತು ಮಾತನಾಡಿದ ಅವರು, 2017ರಲ್ಲಿ ದ್ವಿಚಕ್ರವಾಹನ ಸವಾರರ 134 ಅಪಘಾತಗಳಲ್ಲಿ 44 ಮಂದಿ ಹೆಲ್ಮೆಟ್ ಧರಿಸದೆ ಇರುವುದರಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಅಪಘಾತದಲ್ಲಿ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಸವಾರ ಸಾಯಬಾರದು.

ಪ್ರಾಣ ಅಮೂಲ್ಯವಾಗಿದ್ದು ಕುಟುಂಬಕ್ಕೆ ಆಧಾರ ಸ್ತಂಭವಾಗಿರುತ್ತಾರೆ. ಕಳೆದು ಹೋದ ಪ್ರಾಣವನ್ನು ಮತ್ತೆ ವಾಪಸ್ ತಂದು ಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಹೆಲ್ಮೆಟ್ ಐಎಸ್ಐ ಮಾರ್ಕನದ್ದೇ ಆಗಬೇಕು ಎಂದು ಹೇಳಿದ್ದೇವೆಯೇ ವಿನಃ ಯಾವುದೇ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ನಾವು ದಂಡ ವಿಧಿಸುತ್ತಿದ್ದೇವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದು ಸುಳ್ಳು. ನಾವು ಯಾರ ಬಳಿಯೂ ದಂಡ ವಿಧಿಸಿಲ್ಲ. ಇಂದಿನವರೆಗೂ ಐಎಸ್ಐ ಮಾರ್ಕಿನ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಇಲ್ಲದಿದ್ದಲ್ಲಿ ಆಪರೇಷನ್ ಸೇಫ್ ರೈಡ್ ಮೂಲಕ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿತ್ತು.

ಐಎಸ್ಐ ಮಾರ್ಕಿನ ಹೆಲ್ಮೆಟ್ ರಾಜ್ಯಾದ್ಯಂತ ಫೆ.1 ರವರೆಗೆ ಕಡ್ಡಾಯವಾಗಿ ಜಾರಿಯಾಗಲಿದ್ದು ಮೈಸೂರಿನಲ್ಲಿಯೂ ಸಹ ಫೆ.1 ಒಂದರಿಂದಲೇ ಜಾರಿಯಾಗಲಿದೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CCB police have arrested two thieves who had burgled a house when nobody was at home at Pattegara street at Mandi Mhalla Mysuru, said commissioner of police Dr. A Subramanyeshwara rao at a pressmeet at his office on Monday

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ