ತಮಿಳುನಾಡಿಗೆ ನೀರು ಹರಿಸಿದ ಪ್ರಕರಣ: 80 ಪ್ರತಿಭಟನಾಕಾರರ ಬಿಡುಗಡೆ

Posted By:
Subscribe to Oneindia Kannada

ಮೈಸೂರು, ಜುಲೈ 14: ಕಾವೇರಿ ಕಬಿನಿಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮೈಸೂರಿನ ಕಾಡಾ ಕಚೇರಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ,ಕಬ್ಬು ಬೆಳೆಗಾರರ ಸಂಘ ಮುತ್ತಿಗೆ ಯತ್ನ ನಡೆಸಿದ ಹಿನ್ನೆಲೆ 80ಕ್ಕೂ ಹೆಚ್ಚು ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು ಕುಡಿಯಲು ನೀರಿಲ್ಲದ ಸಮಯದಲ್ಲಿ ಕಾವೇರಿ, ಕಬಿನಿ ನೀರು ಬಿಡುತ್ತಿರುವುದು ಸರಿಯಲ್ಲ. ಸರ್ಕಾರ ಮುಂದೆ ನೀರನ್ನು ಬಿಡಲು ಮುಂದಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಕೇವಲ ರಾಜಕೀಯ ಮಾಡಿ ನೀರು ಹರಿಸಿದಲ್ಲಿ ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

'ಮಲಗ್ತೀವಿ ಮಣ್ಣಾಕಿ' ಮಂಡ್ಯದಲ್ಲೊಂದು ವಿಭಿನ್ನ ಚಳವಳಿ

Cauvery water releasing to Tamil Nadu, Karnataka farmers protesting

ದುರಸ್ತಿಗಾಗಿ ಮನವಿ
ಜಿ.ಎಲ್.ಬಿ.ರಸ್ತೆಯಲ್ಲಿರುವ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ದುರಸ್ತಿ ಹಾಗೂ ಶಿಥಿಲಗೊಂಡು ಕುಸಿದು ಬಿದ್ದಿರುವ ಕಾಂಪೌಂಡ್ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೊಳ್ಳುವಂತೆ ಕೋರಿ ಶಾಸಕ ವಾಸು ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹಾಗೂ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ‍ಅವರಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರ ಮೂಲಕ ಮನವಿ ಪತ್ರ ನೀಡಿದರು.

Cauvery water releasing to Tamil Nadu, Karnataka farmers protesting

ಕಾಲೇಜಿನ ಕಟ್ಟಡಗಳ ಛಾವಣಿ ಮತ್ತು ಗೋಡೆಗಳಲ್ಲಿ ಬಿರುಕು ಬಿಟ್ಟಿರುವುದರಿಂದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸುವುದರ ಜತೆಗೆ ಪಾರಂಪರಿಕ ಕಟ್ಟಡವನ್ನು ಸಂರಕ್ಷಿಸಲು ಅನುವಾಗುವಂತೆ ಕಾಲೇಜು ಕಟ್ಟಡ ಮತ್ತು ಕಾಂಪೌಂಡ್ ದುರಸ್ತಿ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೆಶನ ನೀಡಬೇಕಾಗಿ ಸಚಿವರಿಗೆ ಮನವಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Farmers’ unions laid a siege to CADA office on Friday, opposing release of water to Tamil Nadu from Karnataka. “When the state doesn’t have proper water to drink, the government is releasing water to the neighbouring state which is unacceptable,” said the farmers. They shouted slogans against the state government led by Chief Minister Siddaramaiah.
Please Wait while comments are loading...