ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ ಪರವಾಗಿ ಕಾವೇರಿ ತೀರ್ಪು ಬರಲೆಂದು ವಿಶೇಷ ಪ್ರಾರ್ಥನೆ

By Yashaswini
|
Google Oneindia Kannada News

ಮೈಸೂರು, ಜುಲೈ 11: ಜೀವಜಲ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನಲ್ಲಿ ಇಂದಿನಿಂದ (ಜುಲೈ 11) ವಿಚಾರಣೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ತೀರ್ಪು ರಾಜ್ಯದ ಪರವಾಗಿಯೇ ಆಗಲಿ ಎಂದು ಮೈಸೂರು ಕನ್ನಡ ವೇದಿಕೆಯ ಕಾರ್ಯಕರ್ತರು ಅಗ್ರಹಾರದಲ್ಲಿರುವ 101 ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕಾರ್ಯಕರ್ತರು ಮಾತನಾಡಿ ಕಾವೇರಿ ವಿಚಾರದಲ್ಲಿ ತಮಿಳುನಾಡು ಮತ್ತೆ ತಗಾದೆ ತೆಗೆದಿದ್ದು, ಕಾವೇರಿ ನೀರು ಹರಿಸುವಂತೆ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ನ್ಯಾಯಾಲಯದಲ್ಲಿ ಮಂಗಳವಾರ ವಿಚಾರಣೆ ಆರಂಭವಾಗಲಿದ್ದು ರಾಜ್ಯದ ಪರವಾಗಿಯೇ ತೀರ್ಪು ಬರಲಿ ಎಂದು ವಿಘ್ನ ವಿನಾಯಕನನ್ನು ಪೂಜಿಸಿದ್ದೇವೆ.

ಕಾವೇರಿ ಐತೀರ್ಪಿನ ವಿಚಾರಣೆ ಆರಂಭ, ಮಂಡ್ಯದಲ್ಲಿ ಬಿಗಿ ಭದ್ರತೆಕಾವೇರಿ ಐತೀರ್ಪಿನ ವಿಚಾರಣೆ ಆರಂಭ, ಮಂಡ್ಯದಲ್ಲಿ ಬಿಗಿ ಭದ್ರತೆ

Cauvery Supreme Court Background: Special Prayer for Judgment on the State

ರಾಜ್ಯದ ರೈತರು ಅದರಲ್ಲೂ ಮೈಸೂರು, ಮಂಡ್ಯ ಭಾಗದ ರೈತರು ನೀರಿಲ್ಲದೇ ಬೆಳೆ ಬೆಳೆಯಲು ಸಾಧ್ಯವಾಗದೇ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಿಂದ ರಾಜ್ಯದ ಪರವಾಗಿಯೇ ತೀರ್ಪು ಬರಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು.

English summary
The verdict on the Cauvery river water distribution dispute will begin in the Supreme Court and the verdict will be on behalf of the state. The activists of Mysore Kannada stage submitted a special worship to 101 Ganapati at Agrahara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X