ಸಚಿವ ಸ್ಥಾನ ಬೇಕಾದರೆ ಮುಂಗಾರು ಮಳೆ ಬರಬೇಕು!

Posted By:
Subscribe to Oneindia Kannada

ಮೈಸೂರು, ಏಪ್ರಿಲ್ 22 : ಸಚಿವ ಸ್ಥಾನ ಬೇಕಾದರೆ ಮುಂಗಾರು ಮಳೆ ಬರುವ ತನಕ ಕಾಯಬೇಕು. ಅಚ್ಚರಿಯಾದರೂ ಇದು ಸತ್ಯ. ರಾಜ್ಯದಲ್ಲಿನ ಭೀಕರ ಬರಗಾಲದ ಪರಿಸ್ಥಿತಿ ಹಿನ್ನಲೆಯಲ್ಲಿ ಬಹು ನಿರೀಕ್ಷಿತ ಸಂಪುಟ ಪುನಾರಚನೆಯನ್ನು ಮುಂದೂಡಲಾಗಿದೆ.

ಮೈಸೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಮಾತನಾಡಿದರು, 'ಭೀಕರ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಸಂಪುಟ ಪುನಾರಚನೆ ಪ್ರಸ್ತಾಪವನ್ನು ಕೈಬಿಡಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ಚಿಂತನೆ ನಡೆಸಲಾಗುತ್ತದೆ' ಎಂದು ಹೇಳಿದರು. [ಸಂಪುಟ ಪುನಾರಚನೆಗೆ ಕಾದಿದ್ದ ಆಕಾಂಕ್ಷಿಗಳಿಗೆ ನಿರಾಸೆ]

siddaramaiah

'ರಾಜ್ಯದಲ್ಲಿ ಭೀಕರ ಬರಗಾಲವಿದೆ. ಬರ ಪರಿಹಾರ ಕಾರ್ಯಕ್ಕೆ ಈಗ ಆದ್ಯತೆ ನೀಡಬೇಕಾಗಿದೆ. ತಾವು ಸಂಪುಟ ಸೇರಬೇಕೆಂಬ ಹಿನ್ನಲೆಯಲ್ಲಿ ಶಾಸಕರು ಒತ್ತಡ ಹೇರುತ್ತಿರಬಹುದು. ಆದರೆ, ಸಂಪುಟ ಪುನಾರಚನೆಗೆ ಇದು ಸಕಾಲವಲ್ಲ ಎಂದು' ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. [ಕೃಷ್ಣ ಮನೆಯಂಗಣದಲ್ಲಿ ಹಿರಿಯ ಕಾಂಗ್ರೆಸ್ಸಿಗರ ಅಪಸ್ವರ]

ಕಳೆದ ವಾರದ ಬೆಂಗಳೂರಿನಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಬರ ಅಧ್ಯಯನಕ್ಕೆ ಏ.15ರಿಂದ ರಾಜ್ಯ ಪ್ರವಾಸ ಮಾಡುತ್ತೇನೆ. ನಂತರ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ, ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡುತ್ತೇನೆ' ಎಂದು ಹೇಳಿದ್ದರು. ['ಯುಗಾದಿ ಬಳಿಕ ಹೊಸ ಖುರ್ಚಿ, ಹೊಸ ಮಂತ್ರಿ ನೋಡೋಣ']

ಇಂದು ಈ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, 'ಹಿಂದೆ ಹಾಗೆ ಹೇಳಿದ್ದು ನಿಜ. ಆದರೆ, ಈಗ ಸಂಪುಟ ಪುನಾರಚನೆಗೆ ಸೂಕ್ತ ಕಾಲವಲ್ಲ. ರಾಜ್ಯದಲ್ಲಿ ಮಳೆ ಬಂದ ನಂತರ ಪುನಾರಚನೆ ಬಗ್ಗೆ ಚಿಂತನೆ ನಡೆಸಲಾಗುತ್ತದೆ' ಎಂದರು.

ಕಳೆದ ವಾರ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಬೆಂಗಳೂರಿಗೆ ಬಂದಿದ್ದಾಗ ವಿಧಾನಪರಿಷತ್ ಸದಸ್ಯರು, ಸಮಾನ ಮನಸ್ಕ ಶಾಸಕರ ಗುಂಪು ಕುಮಾರಕೃಪಾ ಅತಿಥಿಗೃಹದಲ್ಲಿ ಅವರನ್ನು ಭೇಟಿ ಮಾಡಿ, ಸಂಪುಟ ಪುನಾರಚನೆ ವೇಳೆ ಆದ್ಯತೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು.

ಶಾಸಕರ ಮನವಿ ಸ್ವೀಕರಿಸಿದ್ದ ಸಿಂಗ್ ಅವರು, 'ಹೈಕಮಾಂಡ್ ನಾಯಕರು ಮೇ 19ರ ತನಕ ಚುನಾವಣಾ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡಿರುತ್ತಾರೆ. ರಾಜ್ಯದಲ್ಲಿಯೂ ಭೀಕರ ಬರಗಾಲವಿದೆ. ಆ ಕಡೆ ಗಮನ ಕೊಡಿ, ಮೇ ತಿಂಗಳಿನಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸೋಣ ಎಂದು ಸೂಚಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The much awaited cabinet reshuffle may delayed. Karnataka Chief Minister Siddaramaiah on Friday said, This not right time to discuss about cabinet reshuffle, We will concentrate on drought situation in state.
Please Wait while comments are loading...