ನಂಜನಗೂಡು ಉಪ ಚುನಾವಣೆ ಪ್ರಚಾರಕ್ಕಿಳಿದ ಯಡಿಯೂರಪ್ಪ

Posted By:
Subscribe to Oneindia Kannada

ನಂಜನಗೂಡು, ಮಾರ್ಚ್. 12 : ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಷ್ಠೆಯ ಕಣವಾಗಿರುವ ನಂಜನಗೂಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾನುವಾರ ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕಿಳಿದರು.

ಬದನವಾಳು ಗ್ರಾಮದಿಂದಲೇ ಮೊದಲ ಪ್ರಚಾರವನ್ನು ಆರಂಭಿಸಿದ ಯಡಿಯೂರಪ್ಪ, ವೀರಶೈವ ಮುಖಂಡರನ್ನು ಭೇಟಿ ಮಾಡಿ ಶ್ರೀನಿವಾಸ್ ಪ್ರಸಾದ್ ರನ್ನು ಈ ಬಾರಿ ಉಪ ಚುನಾವಣೆ ಚುನಾವಣೆಯಲ್ಲಿ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.[ನಂಜನಗೂಡು ಉಪಚುನಾವಣೆ: ಗ್ರಾ.ಪಂ. ಹಂತದಲ್ಲೂ ನೀತಿ ಸಂಹಿತೆ]

BS Yeddyurappa starts Nanjangud by-election campaign for BJP

ದೇವನೂರು, ಬದನವಾಳು, ಹೆಡತಲೆ, ಗಟ್ಟವಾಡಿ, ಕಳಲೆ, ಕಸುವಿನಹಳ್ಳಿ, ಸಿಂಧುವಳ್ಳಿ, ಹಾಗೂ ಹೊರಳವಾಡಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ತಂಡ ನಂಜನಗೂಡು ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಪಾದಯಾತ್ರೆ ನಡೆಸಿ ಬಿಜೆಪಿ ಅಭ್ಯರ್ಥಿ ವಿ ಶ್ರೀನಿವಾಸ್ ಪ್ರಸಾದ್ ಪರ ಭರ್ಜರಿ ಪ್ರಚಾರ ನಡೆಸಲಿದೆ.

ಮಾಜಿ ಸಚಿವರಾದ ಶೋಭಾ ಕರಂದಾಜ್ಲೆ, ವಿ ಸೋಮಣ್ಷ, ಶ್ರೀರಾಮುಲು, ಬಿಎಸ್ ವೈಗೆ ಸಾಥ್ ನೀಡಲಿದ್ದಾರೆ. ಒಟ್ಟಿನಲ್ಲಿ ಏಪ್ರಿಲ್ ನಲ್ಲಿ ನಡೆಯಲಿರುವ ನಂಜನಗೂಡು ಚುನಾವಣಾ ಕಣ ರಂಗೇರಿದ್ದು, ಮೈಸೂರಿನಲ್ಲಿ ರಾಷ್ಟ್ರೀಯ ಪಕ್ಷಗಳ ಘಟಾನುಘಟಿ ನಾಯಕರುಗಳು ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka state BJP president BS Yeddyurappa starts Nanjangud by election campaign for BJP candidate V Srinivas Prasad on March 12.
Please Wait while comments are loading...