ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನರೇಂದ್ರ ಮೋದಿಗೆ ಪ್ರತಿಸ್ಪರ್ಧಿ ಯಾರೂ ಇಲ್ಲ: ಬಿ.ಎಸ್.ಯಡಿಯೂರಪ್ಪ

By Yashaswini
|
Google Oneindia Kannada News

ಮೈಸೂರು, ಆಗಸ್ಟ್.05: ಮುಂದಿನ ಲೋಕಸಭಾ ಚುನಾವಣೆಯಲ್ಲಿ‌ 22 ಸ್ಥಾನಗಳಲ್ಲಿ ಗೆಲ್ಲುತ್ತೇವೆ. ನರೇಂದ್ರ ಮೋದಿಗೆ ಪ್ರತಿಸ್ಪರ್ಧಿ ಯಾರೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮೈಸೂರಿನಲ್ಲಿ ಇಂದು ಭಾನುವಾರ ನಡೆಯುತ್ತಿರುವ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ. ಮುಂದಿನ‌ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಬಹುಮತ ಬರಲಿದ್ದು, ಲೋಕಸಭಾ ಚುನಾವಣೆಗೆ ಸ್ಥಳಿಯ ಸಂಸ್ಥೆ ಚುನಾವಣೆ ಜೊತೆ ಜೊತೆ ಸಂಘಟನೆ ಮಾಡಲಾಗುತ್ತಿದೆ.ಇದೇ ತಿಂಗಳು 9 ರಂದು ಎಲ್ಲಾ ಎಂಎಲ್ ಎ ಗಳ ಜೊತೆ ಸಭೆ ನಡೆಸುತ್ತೇವೆ ಎಂದು ಬಿಎಸ್ ವೈ ತಿಳಿಸಿದರು.

ಅಮಿತ್ ಶಾ ರಾಜ್ಯ ಭೇಟಿ ರದ್ದು, ಯಡಿಯೂರಪ್ಪಗೆ ಹೆಚ್ಚಿನ ಪವರ್!ಅಮಿತ್ ಶಾ ರಾಜ್ಯ ಭೇಟಿ ರದ್ದು, ಯಡಿಯೂರಪ್ಪಗೆ ಹೆಚ್ಚಿನ ಪವರ್!

ಮುಖ್ಯಮಂತ್ರಿ ಕುಮಾರಸ್ವಾಮಿ‌ ರೈತರ ಸಾಲ ಮನ್ನಾ ಮಾಡಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲಮನ್ನಾ ಮಾಡಿರುವ ಯಾವ ಸ್ಪಷ್ಟತೆ ಇಲ್ಲ. ಇದರ ಜೊತೆ ರೈತರಿಗೆ ಹೊಸ ಸಾಲ ದೊರೆಯುತ್ತಿಲ್ಲ. ಕೋ ಆಪರೇಟಿವ್ ಸೊಸೈಟಿಗಳು ಮುಳಗುತ್ತಿವೆ ಎಂದು ದೂರಿದರು.

BS Yeddyurappa says Narendra Modi has no rival

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ ಕುರಿತು ಮಾತನಾಡಿದ ಅವರು, ಇವತ್ತು ಮೈಸೂರಿನಲ್ಲಿ ಮುಖಂಡರ ಜೊತೆ ಸಭೆ ನಡೆಸುತ್ತಿದ್ದೇನೆ. ಚಾಮರಾಜನಗರ ಚುನಾವಣೆ ದೃಷ್ಟಿಯಿಂದ ಆ ಜಿಲ್ಲೆಯ ಮುಖಂಡರನ್ನು ಸಭೆಗೆ ಕರೆದಿದ್ದೇನೆ.

ದೇವೇಗೌಡರ ಆರೋಪಕ್ಕೆ ಟ್ವೀಟ್‌ ಮೂಲಕ ಉತ್ತರಿಸಿದ ಯಡಿಯೂರಪ್ಪದೇವೇಗೌಡರ ಆರೋಪಕ್ಕೆ ಟ್ವೀಟ್‌ ಮೂಲಕ ಉತ್ತರಿಸಿದ ಯಡಿಯೂರಪ್ಪ

ಸಂಘಟನೆ ಮಾಡುವ ದೃಷ್ಟಿಯಿಂದ ಮೂರು ತಂಡಗಳ ರಚನೆ ಮಾಡಿ ರಾಜ್ಯ ಪ್ರವಾಸ ಕೈಗೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಯಲ್ಲಿ ಕಾಂಗ್ರೆಸ್ ಜೆ.ಡಿ.ಎಸ್ ಮೈತ್ರಿ ಮಾಡಿಕೊಂಡರೆ ನಾವೂ ತಲೆಕೆಡಿಸಿಕೊಳ್ಳುವುದಿಲ್ಲ.

BS Yeddyurappa says Narendra Modi has no rival

ನನ್ನನ್ನು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಲಿಂಗಾಯತ ಪ್ರತ್ಯೇಕ ಹೋರಾಟ ಪ್ರಾರಂಭ ಮಾಡಿದರು. ಈಗ ಪ್ರತ್ಯೇಕ ಧರ್ಮದ ಕೂಗು ಕಡಿಮೆಯಾಗಿದೆ. ಎಲ್ಲರು ಒಟ್ಟಾಗಿ ಹೋಗಬೇಕು ಎಂದು ತೀರ್ಮಾನ‌ ಮಾಡಿದ್ದಾರೆ. ಮುಂದೆ ಆ ರೀತಿ ಗೊಂದಲ ಮುಂದುವರೆಯುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

English summary
Former Chief Minister BS Yeddyurappa Said In the next Lok Sabha election, we will win 22 seats. Prime Minister Narendra Modi has no rival. BJP is likely to win a majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X