ಸಿಗ್ನಲ್ ಜಂಪ್ ಮಾಡಲು ಹೋಗಿ ಸಾವನ್ನಪ್ಪಿದ ದಂಪತಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಫೆಬ್ರವರಿ,01: ಸಿಗ್ನಲ್ ಜಂಪ್ ಮಾಡ್ಬೇಡಿ, ಸಿಗ್ನಲ್ ಬಂದ ಕಡೆ ನಿಂತು ಸಾವಧಾನವಾಗಿ ನಿಂತು ಚಲಿಸಿ ಎಂದು ಹೇಳಿದರೂ ಜನ ಮಾತು ಕೇಳುವುದಿಲ್ಲ. ಸಿಗ್ನಲ್ ಜಂಪ್ ಮಾಡ್ತಾರೆ, ತಮ್ಮ ಪ್ರಾಣ ತೆಗೆದುಕೊಂಡು ಹೋಗಲು ಯಮನಿಗೆ ತಾವೇ ಆಹ್ವಾನ ಕೊಡ್ತಾರೆ.

ಹೌದು ಸಿಗ್ನಲ್ ಬಂದರೂ ನಿಲ್ಲದೆ ಗಾಡಿ ಚಲಾಯಿಸಿದ ಪರಿಣಾಮ ಬೈಕ್ ಮೇಲೆ ಟಿಪ್ಪರ್ ಹರಿದು ದಂಪತಿ ಕೋದಂಡರಾಮು (45), ಹೇಮಾವತಿ (35) ಸ್ಥಳದಲ್ಲೇ ಭೀಕರವಾಗಿ ಸಾವನ್ನಪ್ಪಿದ ಘಟನೆ ನಗರದ ಬೋಗಾದಿ ಬಳಿಯ ರಿಂಗ್ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದ್ದು, ಹೆಂಡತಿಯ ದೇಹ ನುಜ್ಜುಗುಜ್ಜಾಗಿದೆ.[ಮೈಸೂರಿಗರೇ,, ನೀವು ಹುಡುಕುತ್ತಿದ್ದ ದಂಪತಿ ಇವರೇನಾ..?]

Mysuru

ನಗರದ ಬೋಗಾದಿ ಸಿಗ್ನಲ್ ಯಮಸ್ವರೂಪಿಯಾಗಿದೆ. ಇಲ್ಲಿಗೆ ಬೈಕ್ ನಲ್ಲಿ ಬಂದ ಹೆಚ್.ಡಿ. ಕೋಟೆ ತಾಲೂಕಿನ ಕೊತ್ತೇಗಾಲದ ಕೋದಂಡರಾಮು ದಂಪತಿ ವಾಹನ ಚಲಾಯಿಸುವ ಸಂದರ್ಭ ಸಿಗ್ನಲ್ ಬಂದಿದೆ. ಈ ಸಂದರ್ಭ ಕೋದಂಡರಾಮು ತಬ್ಬಿಬ್ಬಾಗಿ ಬೈಕನ್ನು ಮುಂದೆ ಚಲಾಯಿಸಿ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ.

ಈ ಸಂದರ್ಭ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ ಅವರ ಮೇಲೆಯೇ ಹರಿದಿದೆ. ಪರಿಣಾಮ ಬೈಕ್ ನಲ್ಲಿದ್ದ ಕೋದಂಡರಾಮ ರಸ್ತೆಗೆ ಬಿದ್ದಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದ ಹೇಮಾವತಿ ಅವರು ಟಿಪ್ಪರ್ ಚಕ್ರದಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ.[ಪುನಃ ಜೈಲಿಗೆ ಹಾಕಿ ಎನ್ನುವ ಮೈಸೂರು ಮಹಿಳೆ ಗೋಳು ಏನು?]

ತಕ್ಷಣ ಸ್ಥಳಕ್ಕೆ ಬಂದ ಸಾರ್ವಜನಿಕರು ಗಾಯಗೊಂಡಿದ್ದ ಕೋದಂಡರಾಮು ಅವರನ್ನು ಚಿಕಿತ್ಸೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಚಾಲಕ ಟಿಪ್ಪರ್ ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಕುವೆಂಪುನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Brutally road accident, two people Kodandaramu (45), Hemavathi (35) died in Ring road, near Bogadi, Mysuru, on Monday February 01st.
Please Wait while comments are loading...