ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರುಕಟ್ಟೆಗೆ ಬರಲಿದೆ ಆನೆ ಲದ್ದಿಯಿಂದ ತಯಾರಾದ ಕಾಗದ!

By Gururaj
|
Google Oneindia Kannada News

ಮೈಸೂರು, ಆಗಸ್ಟ್ 13 : ಆನೆಯ ಲದ್ದಿಯಿಂದ ತಯಾರಾದ ಕಾಗದ ಶೀಘ್ರವೇ ಕರ್ನಾಟಕದ ಮಾರುಕಟ್ಟೆಗೆ ಬರಲಿದೆ. ಕಂದು ಬಣ್ಣದ ಗಟ್ಟಿಯಾದ ಕಾಗದ ರಾಜ್ಯದಲ್ಲಿ ಶೀಘ್ರದಲ್ಲೇ ಉತ್ಪಾದನೆಯಾಗಲಿದೆ.

ಮೈಸೂರಿನಲ್ಲಿ ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಜಯರಾಂ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಕಾಗದ ಉತ್ಪಾದನೆ ಮಾಡುವ ಖಾಸಗಿ ಕಂಪನಿಗೆ ಆನೆ ಲದ್ದಿಯಿಂದ ಕಾಗದ ತಯಾರು ಮಾಡಲು ಅನುಮತಿ ನೀಡಲಾಗಿದೆ.

ಬಸ್‌ಅನ್ನೇ ಅಟ್ಟಿಸಿದ ಆನೆ: ಬಂಡಿಪುರದ ಘಟನೆಯ ವೈರಲ್ ವಿಡಿಯೋಬಸ್‌ಅನ್ನೇ ಅಟ್ಟಿಸಿದ ಆನೆ: ಬಂಡಿಪುರದ ಘಟನೆಯ ವೈರಲ್ ವಿಡಿಯೋ

ಪ್ರಾಯೋಗಿಕವಾಗಿ ದುಬಾರೆ ಆನೆ ಶಿಬಿರದಲ್ಲಿ ಆನೆ ಲದ್ದಿಯನ್ನು ಸಂಗ್ರಹ ಮಾಡಲು ಕಂಪನಿಗೆ ಅನುಮತಿ ನೀಡಲಾಗಿದೆ. ಸರ್ಕಾರದ ಜೊತೆ ಮಾಡಿಕೊಂಡ ಒಪ್ಪಂದದ ಅನ್ವಯ ಶಿಬಿರದಲ್ಲಿ ಹೆಚ್ಚು ಆನೆ ಲದ್ದಿ ಸಿಗಲು ಆರಂಭವಾದರೆ ಕಂಪನಿ ಅದಕ್ಕೆ ತಕ್ಕ ಬೆಲೆ ನೀಡಿ ಕೊಂಡುಕೊಳ್ಳಲಿದೆ.

Brown sheet will manufacture with elephant dung soon

ಸ್ಟೇಷನರಿ ಉತ್ಪನ್ನ, ಕೋರಿಯರ್ ಮುಂತಾದವುಗಳಗೆ ಬಳಸು ಕಾಗದವನ್ನು ಮೊದಲು ತಯಾರು ಮಾಡಲಾಗುತ್ತದೆ. ಆನೆಗಳ ಲದ್ದಿಯನ್ನು ಸಂಗ್ರಹಿಸಿ, ಸಂಸ್ಕರಣೆ ಮಾಡಿ ಕಾಗದ ತಯಾರಿಕೆಗೆ ಬಳಸಲಾಗುತ್ತದೆ.

ಸಕ್ರೆಬೈಲಿನ ಮರಿಯಾನೆ ಬಾಲಾಜಿ ಇನ್ನು ನೆನಪು ಮಾತ್ರಸಕ್ರೆಬೈಲಿನ ಮರಿಯಾನೆ ಬಾಲಾಜಿ ಇನ್ನು ನೆನಪು ಮಾತ್ರ

ಏಷ್ಯಾದ ಆನೆಗಳು ದಿನಕ್ಕೆ 16 ಬಾರಿ, ಆಫ್ರಿಕಾದ ಆನೆಗಳು ದಿನಕ್ಕೆ 18 ಬಾರಿ ಲದ್ದಿಯನ್ನು ಹಾಕುತ್ತವೆ. ಕೆಲವು ಬಾರಿ ಕಾಡಿನಲ್ಲಿ ಅವುಗಳು ಲದ್ದಿ ಹಾಕುತ್ತವೆ. ದಿನಕ್ಕೆ ಎಷ್ಟು ಲದ್ದಿ ಸಂಗ್ರಹವಾಗಲಿದೆ? ಎಂದು ಲೆಕ್ಕಹಾಕಲಾಗುತ್ತಿದೆ.

ಆಗಸ್ಟ್ 12ರಂದು ವಿಶ್ವ ಆನೆಗಳ ದಿನ. ವಿಶ್ವ ಆನೆ ದಿನಾಚರಣೆ ಅಂಗವಾಗಿ ಲದ್ದಿಯಿಂದ ತಯಾರು ಮಾಡಿದ ವಿಶೇಷ ಅಂಚೆ ಲಕೋಟೆಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬಿಡುಗಡೆ ಮಾಡಿದರು.

English summary
A private company will manufacture eco-friendly brown sheet with a thick layer with processed elephant dung. Company has been permitted to lift the dung produced at Dubare elephant camp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X