ಪ್ರೇಮಕ್ಕೆ ವಿರೋಧ: ಹಲ್ಲೆ, ಮೈಸೂರಿನಲ್ಲಿ ಮೂವರ ಬಂಧನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 10: ಮೈಸೂರಿನ ಕನಕಗಿರಿಯಲ್ಲಿ ತಂಗಿಯ ಪ್ರೀತಿಯನ್ನು ವಿರೋಧಿಸಿದ ಅಣ್ಣನ ಮೇಲೆ ಆಕೆಯ ಪ್ರಿಯತಮನ ಸ್ನೇಹಿತರ ಹಲ್ಲೆ ಮಾಡಿದ್ದು ಈ ವೇಳೆ ಬಿಡಿಸಲು ಬಂದ ವ್ಯಕ್ತಿ ಗಾಯಗೊಂಡಿದ್ದಾನೆ. ಈ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಮೈಸೂರು ಹಾಗೂ ಬೋಗಾದಿಯ ಮಹೇಶ್, ರಾಮ ಸೇರಿದಂತೆ ಮತ್ತೋಬ್ಬ ಆರೋಪಿ ಬಂಧಿತರು. ಆರೋಪಿಗಳು ಕೃತ್ಯಕ್ಕೆ ಬಳಸಲಾದ ಲಾಂಗು, ಮಚ್ಚು, ಹಾಕಿ ಸ್ಟಿಕ್, ಒಂದು ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ ಕೆಲವು ಆರೋಪಿಗಳು ಇದರಲ್ಲಿ ಭಾಗವಹಿಸಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ.[ಆಸ್ತಿಗಾಗಿ ಅತ್ತಿಗೆಯನ್ನು ಕೊಲೆ ಮಾಡಿದ ನಾದಿನಿಯರು]

brother oppose the sister's love, Onslaught, three arrested in mysuru

ಇನ್ನು ಗಾಯಗೊಂಡಿರುವ ಅವಿನಾಶ್ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ತೀರ್ವನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.

ಗೃಹಿಣಿ ನೇಣಿಗೆ ಶರಣು

ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ಗೃಹಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ಜರುಗಿದೆ.

brother oppose the sister's love, Onslaught, three arrested in mysuru

ಮೃತರನ್ನು ಒಂಟಿಕೊಪ್ಪಲು ಆದಿಪಂಪಾ ರಸ್ತೆ ನಿವಾಸಿ ಗೀತಾ (48) ಎಂದು ಗುರುತಿಸಲಾಗಿದೆ. ಐದು ವರ್ಷಗಳ ಹಿಂದೆ ಅನಂತಪದ್ಮನಾಭ ಎಂಬವರನ್ನು ಗೀತಾ ವಿವಾಹವಾಗಿದ್ದರು. ಅನಂತಪದ್ಮನಾಭ ಅವರ ಮೊದಲ ಪತ್ನಿ ಹೃದಯ ಸಂಬಂಧಿ ಕಾಯಿಲೆಯಿಂದ ಮರಣಹೊಂದಿದ ಹಿನ್ನೆಲೆಯಲ್ಲಿ ಗೀತಾ ಎಂಬವರನ್ನು ಎರಡನೇ ಮದುವೆಯಾಗಿದ್ದರು ಎನ್ನಲಾಗಿದೆ. ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two crime happened in Mysore, one is brother oppese the sister's love. Sister's lover friends are sliced to her brother. but who comer to solve his problem person to join hopital. Police arrested three in this case. Another one is A housewife committed suicide by hanging herself.
Please Wait while comments are loading...