ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಆತ್ಮಹತ್ಯೆ ತಡೆಗೆ ಶ್ರಮಿಸುತ್ತಿದ್ದಾನೆ ಈ ವಿದೇಶಿ ಯುವಕ!

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 14 : ರೈತರ ಆತ್ಮಹತ್ಯೆ ರಾಜ್ಯದಲ್ಲಿ ದಿನೇ -ದಿನೇ ಹೆಚ್ಚುತ್ತಿದೆ. ರಾಜ್ಯ ಸರಕಾರಈ ಬಗ್ಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ. ನಮ್ಮವರೇ ನಮ್ಮ ಕಡೇ ಗಮನಕೊಡದಿದ್ದ ಕಾಲದಲ್ಲಿ ರೈತರಿಗೆ ಇಂತಿಷ್ಟು ಪರಿಹಾರ ಬಿಸಾಕುವ ನಮ್ಮ ಜನಗಳ ಮಧ್ಯೆ ಇಲ್ಲೊಬ್ಬ ವ್ಯಕ್ತಿಯಿದ್ದಾರೆ.

ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಿಳಿಹೇಳುವ ಕಾಯಕ ಇವರದ್ದು. ವಿದೇಶಿಗರಾದ ಇವರು ಸದ್ಯ ಹಮ್ಮಿಕೊಂಡಿರುವುದು ಬರೋಬರಿ 6 ಸಾವಿರ ಕಿ.ಮೀ ಪಾದಯಾತ್ರೆ.

ಹೌದು, ಇಂದು ಈ ಪಾದಯಾತ್ರೆ ಮೈಸೂರಿಗೆ ಆಗಮಿಸಿದೆ. ನಮ್ಮ ದೇಶದ ಕೃಷಿ ಪರಿಸ್ಥಿತಿ ಹಾಗೂ ರೈತರ ಸರಣಿ ಆತ್ಮಹತ್ಯೆಯನ್ನ ಮನಗಂಡಿರುವ ಬ್ರಿಟನ್ ನ ಡೇವಿಡ್ ಅತ್ತೊವೆ ಎಂಬ 17 ವರ್ಷದ ಯುವಕ ನಮ್ಮ ದೇಶದ ರೈತರಿಗೆ ಆತ್ಮವಿಶ್ವಾಸ ತುಂಬಲು ಕನ್ಯಾಕುಮಾರಿಯಿಂದ ಅಮೃತಸರ್ ವರೆಗೆ 6 ಸಾವಿರ ಕಿ.ಮೀಗಳನ್ನು ಹತ್ತು ತಿಂಗಳ ಕಾಲ ಪಾದಯಾತ್ರೆಯನ್ನು ಆರಂಭಿಸಿದ್ದಾನೆ.

ನೊಮ್ಯಾಡಿಕೆ ಸಂಸ್ಥೆಯ ಸಂಸ್ಥಾಪಕ, ಬ್ರಿಟಿಷ್ ನಾಗರಿಕ ಡೇವಿಡ್ ಅತ್ತೋವ್ ಪಂಜಾಬ್ ನ ಪಾಟಿಯಾಲದ ಯೂತ್ ಕಲ್ಚರಲ್ ಡೆವಲೆಪ್ ಮೆಂಟ್ ಅಕಾಡೆಮಿಯ ಅಧ್ಯಕ್ಷ ಜಸ್ವೀರ್ ಸಿಂಗ್ ಮತ್ತು ದೇವ್ ರತನ್ ಟ್ರಸ್ಟ್ ನ ಅಧ್ಯಕ್ಷ ಬಹುದ್ದೂರು ಸಿಂಗ್ ಅವರೊಡನೆ ಭಾರತಕ್ಕೆ ಬಂದಿದ್ದಾರೆ.

ಎಲ್ಲಾ ಆಹಾರಪದ್ಧತಿಯೂ ನನಗೆ ಒಗ್ಗಿಕೊಂಡಿದೆ

ಎಲ್ಲಾ ಆಹಾರಪದ್ಧತಿಯೂ ನನಗೆ ಒಗ್ಗಿಕೊಂಡಿದೆ

ಇಂದು ನಗರದ ನ್ಯಾಯಾಲಯದ ಮುಂದೆ ಇರುವ ಗಾಂಧಿ ಪ್ರತಿಮೆ ಬಳಿ ಪಾದಯಾತ್ರೆ ಬಂದು ತಲುಪಿದೆ. ಹೀಗೆ ಪಾದಯಾತ್ರೆ ಹೋಗುವ ವೇಳೆಯಲ್ಲಿ ನೂರಾರು ಜನ ಹಿಂಬಾಲಿಸುತ್ತಾರೆ. ಇದರಿಂದ ನನ್ನ ಉದ್ದೇಶ ಜನರಿಗೆ ಬೇಗ ತಲುಪುತ್ತಿದೆ. ನಾನು ಕೆಲವು ತಾಲೂಕು ಕೇಂದ್ರಗಳ ಐಬಿಗಳಲ್ಲಿ, ಗ್ರಾಮಸ್ಥರ ಮನೆಗಳಲ್ಲಿ ರಾತ್ರಿಯ ವೇಳೆಯಲ್ಲಿ ವಾಸ್ತವ್ಯ ಹೂಡುತ್ತಿದ್ದೇನೆ. ಎನ್ ಜಿಒ ಸದಸ್ಯರಾದ ಕೃಷ್ಣಪ್ರಸಾದ್, ಶ್ರೀಕೃಷ್ಣ ಹೆಗಡೆ ಹಾಗೂ ಕೃಷಿಕರು ಸಹಾಯ ಮಾಡುತ್ತಿದ್ದು, ಇಲ್ಲಿಯ ತನಕ ಉಳಿದುಕೊಳ್ಳುವ ಮತ್ತು ಆಹಾರಕ್ಕೆ ಸಮಸ್ಯೆಯಾಗಿಲ್ಲ. ಅಲೆಮಾರಿಯಾಗಿರುವ ನನಗೆ ಎಲ್ಲಾ ರೀತಿಯ ಆಹಾರವೂ ಒಗ್ಗಿಕೊಂಡಿದೆ ಎನ್ನುತ್ತಾರೆ ಡೇವಿಡ್ ಅತ್ತೊವೆ.

ಜೂನ್ ನಲ್ಲಿ ಆರಂಭವಾಗಿದ್ದ ಯಾತ್ರೆ

ಜೂನ್ ನಲ್ಲಿ ಆರಂಭವಾಗಿದ್ದ ಯಾತ್ರೆ

ನಮ್ಮ ದೇಶದ ರೈತರಿಗೆ ಆತ್ಮವಿಶ್ವಾಸ ತುಂಬಲು ಜೂನ್ 15 ರಂದು ಕನ್ಯಾಕುಮಾರಿಯಿಂದ ಆರಂಭವಾಗಿರುವ ಈ ಪಾದಯಾತ್ರೆ ಜುಲೈ 11 ರಂದು ಕೇರಳ ಮೂಲಕ ಚಾಮಾರಾಜನಗರ, ಗುಂಡ್ಲಪೇಟೆ ಪ್ರವೇಶಿಸಿದ್ದಾರೆ. ಇಂದು ಮೈಸೂರಿಗೆ ಪ್ರವೇಶ ಪಡೆದಿರುವ ಪಾದಯಾತ್ರೆ ಮೈಸೂರಿನಿಂದ ಮಂಡ್ಯ, ರಾಮನಗರ ಮೂಲಕ ಸಾಗಿ ಮುಂದಿನ ಎರಡು ದಿನಗಳಲ್ಲಿ ಬೆಂಗಳೂರು ತಲುಪಲಿದ್ದು, ಬಳಿಕ ತುಮಕೂರು, ತರೀಕೆರೆ, ಭದ್ರಾವತಿ, ಶಿವಮೂಗ್ಗ, ಸಾಗರ, ಶಿರಸಿ, ಕುಮಟಾ, ಕಾರಾವಾರ ಮೂಲಕ ಗೋವಾ ತಲುಪಲಿದ್ದಾರೆ. ಹೀಗೆ 13 ರಾಜ್ಯಗಳ ಮೂಲಕ ಸಾಗಿ 2018ರ ಮೇ ತಿಂಗಳಲ್ಲಿ ಅಮೃತಸರದಲ್ಲಿ ಮುಕ್ತಾಯವಾಗಲಿದೆ.

ಜನರೊಂದಿಗೆ ಬೆರೆಯಲು ಪಾದಯಾತ್ರೆ

ಜನರೊಂದಿಗೆ ಬೆರೆಯಲು ಪಾದಯಾತ್ರೆ

ಕನ್ಯಾಕುಮಾರಿಯಿಂದ ವಾಹನಗಳಲ್ಲಿ ಸಾಗಿದರೆ ಜನರೊಟ್ಟಿಗೆ ಬೆರೆಯಲು ಸಾಧ್ಯವಾಗುವುದಿಲ್ಲ ಎಂದು ಮನಗಂಡಿರುವ ಡೇವಿಡ್, ಅಭಿಯಾನಕ್ಕೆ ಪಾದಯಾತ್ರೆ ಮಾರ್ಗ ಆಯ್ಕೆ ಮಾಡಿಕೊಂಡಿದ್ದು ಮಾರ್ಗದುದ್ದಕ್ಕೂ ಸಿಗುವ ಗ್ರಾಮಗಳ ಜನರೊಂದಿಗೆ ಮಾತನಾಡುತ್ತ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಅವರಿಗೆ ಆತ್ಮವಿಶ್ವಾಶ ತುಂಬುತ್ತ, ಕೃಷಿ ಬಗೆಗಿನ ಅಪಾರವಾದ ವಿಷಯವನ್ನು ಜನರಿಗೆ ತಿಳಿಸುತ್ತಿದ್ದಾರೆ.

ರೈತರ ಉಡುಗೆಯುಟ್ಟ ಯುವಕನಿಂದ ಅನ್ನದಾತರಿಗೆ ತಿಳಿ

ರೈತರ ಉಡುಗೆಯುಟ್ಟ ಯುವಕನಿಂದ ಅನ್ನದಾತರಿಗೆ ತಿಳಿ

ಬಿಳಿ ಬಟ್ಟೆ. ಕುತ್ತಿಗೆಗೆ ಹಸಿರು ಶಾಲು ಬೆನ್ನಿಗೆ ಬ್ಯಾಗು ಹಾಕ್ಕೊಂಡು ವಾಕ್ ಮಾಡ್ತಾರೋ ಈ ಯುವಕನ ಹೆಸರು ಡೇವಿಡ್ ಅತ್ತೊವಾ. ಡೇವಿಡ್ ಅತ್ತೊವಾ ಇಂಗ್ಲೆಂಡ್ ದೇಶದವರು. ಡೇವಿಡ್ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಬೆಳೆ ಕೈಕೊಟ್ಟು ಸಾಲ ಮಾಡಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಧನ ಸಹಾಯ ಮಾಡೋದು ಡೇವಿಡ್ ಉದ್ದೇಶ. ಅದಕ್ಕಾಗಿ ಡೇವಿಡ್ ಭಾರತದ ಹದಿಮೂರು ರಾಜ್ಯಗಳಲ್ಲಿ ಹತ್ತು ತಿಂಗಳ ಕಾಲ ಪಾದಯಾತ್ರೆ ನಡೆಸಲಿದ್ದಾರೆ

ಡೇವಿಡ್ ಅತ್ತೊವೆ ಮೂರನೇ ಅಭಿಯಾನ

ಡೇವಿಡ್ ಅತ್ತೊವೆ ಮೂರನೇ ಅಭಿಯಾನ

ಈಗಾಗಲೇ ಮಲೇಷಿಯಾದಲ್ಲಿ ಕಾಲ್ನಡಿಗೆ ಹಮ್ಮಿಕೊಂಡು ಮಳೆತರುವ ಅರಣ್ಯವನ್ನು ರಕ್ಷಿಸಿ ಎಂಬ ಸಂದೇಶವನ್ನ ಸಾರಿದ ಡೇವಿಡ್ ನಂತರ ಯುನೈಟೆಡ್ ಕಿಂಗ್ ಡಂನಲ್ಲಿ ವಿಕಲ ಸೇವಾ ಮಕ್ಕಳ ತಕ್ಷಣೆ, ಸಂಗೀತ ಮತ್ತು ಕಲೆ ಉಳಿವು ಕುರಿತು ಜಾಗೃತಿ ಮೂಡಿಸಿದ್ದು ಮೂರನೇ ಅಭಿಯಾನವಾಗಿ ಕನ್ಯಾಕುಮಾರಿಯಿಂದ ಪಾದಯಾತ್ರೆ ಮೂಲಕ 3600 ಕಿ.ಮೀ ಕ್ರಮಿಸಲಿದ್ದಾರೆ.

ರೈತರಲ್ಲಿ ಆತ್ಮವಿಶ್ವಾಸ ಬಿತ್ತುವ ಯುವಕ

ರೈತರಲ್ಲಿ ಆತ್ಮವಿಶ್ವಾಸ ಬಿತ್ತುವ ಯುವಕ

ರೈತರಿಗೆ ರಾಸಾಯನಿಕ ವಸ್ತುಗಳಿಂದ ಮುಕ್ತವಾದ ಸಹಜ ಕೃಷಿ ಕೈಗೊಳ್ಳವಂತೆ ಜಾಗೃತಿ ಮೂಡಿಸಬೇಕು, ಸಾರ್ವಜನಿಕರು ತಮಗೆ ಬೇಕಾದ ತರಕಾರಿ, ಆಹಾರ ಧಾನ್ಯಗಳನ್ನು ನೇರವಾಗಿ ರೈತರ ಬಳಿ ಖರೀದಿಸಬೇಕು. ಇದರಿಂದ ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ. ಅಲ್ಲದೆ ಸಾರ್ವಜನಿಕರಿಗೂ ಉತ್ತಮ ಬೆಲೆಗೆ ಉತ್ತಮ ಪದಾರ್ಥ ಸಿಗುತ್ತದೆ. ಹಾಗೆಯೇ ರೈತರಿಗೆಲ್ಲರಿಗೂ ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತರಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದೇನೆ ಎನ್ನುತ್ತಾರೆ ಡೇವಿಡ್ ಅತ್ತೊವೆ. ಒಟ್ಟಾರೆ ನಮ್ಮವರೇ ನಮ್ಮತ್ತ ನೋಡದ ಯುಗದಲ್ಲಿ ವಿದೇಶಿಗರಾದ ಡೇವಿಡ್ ಕಾಯಕ ನಮ್ಮ ಯುವಪೀಳಿಗೆಗೆ ಹಾಗೂ ರಾಜಕಾರಣಿಗಳಿಗೆ ನಾಚಿಸುವಂತಹದ್ದೇ ಸರಿ.

English summary
A Britain citizen who was saddened by the death of farmers in the India has begun to walk across the nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X