ಮೈಸೂರಿನ ಕೆ.ಆರ್.ನಗರ: ಯಾರಿಗೆ ಒಲಿಯಲಿದ್ದಾನೆ ಮತದಾರ?

Posted By:
Subscribe to Oneindia Kannada

ಮೈಸೂರು, ಏಪ್ರಿಲ್ 10 : ಭತ್ತದ ಕಣಜವೆಂದೇ ಪ್ರಸಿದ್ಧಿ ಹೊಂದಿರುವ ಮೈಸೂರು ಜಿಲ್ಲೆಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ಮಹತ್ವ ಹೊಂದಿದೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳು ನಾ ಮುಂದು ತಾ ಮುಂದು ಎಂದು ಟಿಕೇಟ್ ಗಾಗಿ ಜಿದ್ದಾ - ಜಿದ್ದಿನ ಹೋರಾಟಕ್ಕೆ ಇಳಿದಂತಿದೆ. ಕ್ಷೇತ್ರದಲ್ಲಿ ಈ ಹಿಂದೆ ಯಾರು ಅತೀ ಹೆಚ್ಚು ಮುಂಚೂಣಿಲ್ಲಿದ್ದರು, ಯಾರು ಯಾವ ಕ್ಷೇತ್ರದಿಂದ ಗೆದ್ದರು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕುತೂಹಲದ ಕೇಂದ್ರಬಿಂದು 'ವರುಣಾ'ದಲ್ಲಿ ಗೆಲ್ಲುವವರ್ಯಾರು..?

ಕೆ.ಆರ್ ನಗರ ವಿಧಾನಸಭಾ ಕ್ಷೇತ್ರ ರಚನೆಯಾದಾಗಿನಿಂದ ನಡೆದ 13 ಚುನಾವಣೆಗಳಲ್ಲಿ 6 ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕಾಂಗ್ರೆಸ್ 5 ಬಾರಿ ಜಯಗಳಿಸಿದ್ದರೆ , 2 ಬಾರಿ ಪಕ್ಷೇತರರು ಗೆಲುವಿನ ನಗೆ ಬೀರಿದರು. ಇನ್ನು ಮೂವರು ಸಚಿವರನ್ನು ರಾಜ್ಯಕ್ಕೆ ನೀಡಿದ ಕ್ಷೇತ್ರ ಇದು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ತಾಲ್ಲೂಕಿನಲ್ಲಿ ಪುರುಷ ಮತದಾರರು 97794 ಮತ್ತು ಮಹಿಳಾ ಮತದಾರರರು 96749 ಸೇರಿದಂತೆ ಒಟ್ಟು 201189 ಮತದಾರರಿದ್ದಾರೆ. ವಿಶೇಷವೇನೆಂದರೆ ಈ ಬಾರಿ 16442 ಮತಗಳು ಹೊಸದಾಗಿ ಸೇರ್ಪಡೆಯಾಗಿವೆ.

ಎರಡು ಬಾರಿ ಜಯ ದಾಖಲಿಸಿದ್ದ ಸಾ.ರಾ.ಮಹೇಶ್

ಎರಡು ಬಾರಿ ಜಯ ದಾಖಲಿಸಿದ್ದ ಸಾ.ರಾ.ಮಹೇಶ್

ಈ ಕ್ಷೇತ್ರದಿಂದ ಈ ಹಿಂದೆ ಗೆಲುವು ಸಾಧಿಸಿದ್ದ ಜನತಾ ಪರಿವಾರದ ಎಸ್.ನಂಜಪ್ಪ, ಕಾಂಗ್ರೆಸ್ ನಿಂದ ಗೆದ್ದಿದ್ದ ಎಚ್.ಎಂ.ಚನ್ನಬಸಪ್ಪ ಮತ್ತು ಎಚ್.ವಿಶ್ವನಾಥ್ ಅವರುಗಳು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿಯೂ ಸಫಲರಾಗಿದ್ದರು. ಆದರೆ ಅಡಗೂರು ಎಚ್.ವಿಶ್ವನಾಥ್ ಈಗ ರಾಜಕೀಯ ಕ್ಷೇತ್ರದ ಏರುಪೇರುಗಳಿಂದ ಕಾಂಗ್ರೆಸ್ ತೊರೆದು ಜಾ.ದಳ ಸೇರಿದ್ದಾರೆ. ಹಾಲಿ ಶಾಸಕ ಸಾ.ರಾ.ಮಹೇಶ್ ಅವರು ಜಾ.ದಳ ಅಭ್ಯರ್ಥಿಯಾಗಿ ಸತತ 2 ಬಾರಿ ಜಯ ಗಳಿಸಿದ್ದಾರೆ.

ಬಿಜೆಪಿ ಸದ್ದು ಮಾಡಿಲ್ಲ

ಬಿಜೆಪಿ ಸದ್ದು ಮಾಡಿಲ್ಲ

1962ರಲ್ಲಿ ಕೆ.ಎಸ್.ಗೌಡಯ್ಯ ಮತ್ತು 1967ರಲ್ಲಿ ಎಂ.ಬಸವರಾಜು ಪಕ್ಷೇತರರಾಗಿ ಜಯ ಗಳಿಸಿರುವುದನ್ನು ಬಿಟ್ಟರೆ, ಈ ಕ್ಷೇತ್ರದಲ್ಲಿ ಇದುವರೆಗೆ ನಡೆದಿರುವ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಮತ್ತು ಜನತಾ ಪರಿವಾರದ ನಡುವೆಯೇ ಜಿದ್ದಾಜಿದ್ದಿ ಹೋರಾಟ ನಡೆದಿದೆ. 1999ರ ನಂತರ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಲು ಸಾಧ್ಯವಾಗಿಲ್ಲ. 2004ರಲ್ಲಿ ಜಾ.ದಳದಿಂದ ಮಂಚನಹಳ್ಳಿ ಮಹದೇವ ಅವರು ಆಯ್ಕೆಯಾಗಿದ್ದರು. 2008 ಮತ್ತು 2013ರಲ್ಲಿ ಜನತಾ ದಳದಿಂದ ಸಾ.ರಾ.ಮಹೇಶ್ ಅವರು ಆಯ್ಕೆಯಾಗಿದ್ದಾರೆ. 2004ರಲ್ಲಿ ಸಾ.ರಾ.ಮಹೇಶ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರಿ ಪೈಪೋಟಿ ನೀಡಿದ್ದರು.

ಚಾಮುಂಡೇಶ್ವರಿ ಚಕ್ರವ್ಯೂಹ: ಮಹತ್ವದ ಕ್ಷೇತ್ರದ ಹಿನ್ನೋಟ

ಅಭ್ಯರ್ಥಿಗಳು ಯಾರು?

ಅಭ್ಯರ್ಥಿಗಳು ಯಾರು?

ಕೆ.ಆರ್.ನಗರ ಕ್ಷೇತ್ರದಲ್ಲಿ ಒಕ್ಕಲಿಗ, ಕುರುಬರು ಪ್ರಬಲವಾಗಿರುವುದರಿಂದ ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜೆಡಿಎಸ್ ಗೆಲ್ಲುತ್ತಾ ಬಂದಿತ್ತು. ಎಚ್.ಡಿ. ರೇವಣ್ಣ ಪತ್ನಿ ಭವಾನಿ ಸಾಲಿಗ್ರಾಮದವರಾದ್ದರಿಂದ ಈ ಭಾಗದಲ್ಲಿ ಅವರ ಹಿಡಿತವಿದೆ. ಬಿಜೆಪಿಯಿಂದ ರಾಜಕೀಯ ಆರಂಭಿಸಿ ಜೆಡಿಎಸ್ ಸೇರ್ಪಡೆಗೊಂಡಿರುವ ಸಾ.ರಾ.ಮಹೇಶ್ ಸತತ ಎರಡು ಬಾರಿ ಗೆಲ್ಲುವ ಮೂಲಕ ಒಮ್ಮೆ ಗೆದ್ದವರು ಮತೊಮ್ಮೆ ಗೆಲ್ಲಲಾರರು ಎನ್ನುವ ಮಾತನ್ನು ಸುಳ್ಳಾಗಿಸಿದ್ದರು. ಸದ್ಯ ಜೆಡಿಎಸ್​ನಿಂದ ಈಗ ಮೂರನೇ ಬಾರಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಕಾಂಗ್ರೆಸ್ ನಿಂದ ಅಧಿಕೃತವಾಗಿ ಅಭ್ಯರ್ಥಿ ಪ್ರಕಟವಾಗಿಲ್ಲವಾದರೂ, ಕೆಲ ದಿನಗಳ ಹಿಂದೆ ಕೆ.ಆರ್.ನಗರದಲ್ಲಿ ನಡೆದ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಅವರ ಪುತ್ರ, ಜಿಪಂ ವಿರೋಧ ಪಕ್ಷದ ನಾಯಕ ಡಿ.ರವಿಶಂಕರ್ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ

ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ

ಬಿಜೆಪಿಯಲ್ಲಿ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಬಿಜೆಪಿ ಯಿಂದ ಸಂಭವನೀಯ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ಹೊಸಹಳ್ಳಿ ವೆಂಕಟೇಶ್, ಮತ್ತೊಂದೆಡೆ ಜಿಲ್ಲಾ ಉಪಾಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮತ್ತು ಬಿಜೆಪಿ ಜಿಲ್ಲಾ ವಕ್ತಾರ ಗೋಪಾಲ್ ಅವರ ಪತ್ನಿ ಎಚ್.ಜಿ.ಶ್ವೇತಾ ಗೋಪಾಲ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜಾ.ದಳದಿಂದ ಬಿಜೆಪಿಗೆ ಸೇರ್ಪಡೆಗೊಂಡಿರುವ ಹೊಸಹಳ್ಳಿ ವೆಂಕಟೇಶ್ ಅವರಿಗೆ, ಬಿ.ಎಸ್.ಯಡಿಯೂರಪ್ಪ ಅವರು ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ ಎಂದು ಕ್ಷೇತ್ರದಾದ್ಯಂತ ಮತದಾರರನ್ನು ಭೇಟಿ ಮಾಡುತ್ತಿದ್ದಾರೆ. ಆದರೆ ಬಿಜೆಪಿ ವರಿಷ್ಠರು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ

ಈ ಹಿಂದೆ ಗೆದ್ದವರು

ಈ ಹಿಂದೆ ಗೆದ್ದವರು

1957 - ಹೆಚ್. ಎಂ ಚನ್ನಬಸಪ್ಪ್ - ಕಾಂಗ್ರೆಸ್ - 18615 ಮತಗಳು
1962 - ಕೆ.ಎಸ್ ಗೌಡಯ್ಯ - ಪಕ್ಷೇತರ = 20976 ಮತಗಳು
1967 - ಬಿ. ಬಸವರಾಜು - ಪಕ್ಷೇತರ - 10418 ಮತಗಳು
1972 - ಹೆಚ್. ಬಿ ಕೆಂಚೇಗೌಡ - ಕಾಂಗ್ರೆಸ್ - 33571 ಮತಗಳು
1978- ಹೆಚ್ ವಿಶ್ವನಾಥ್ - ಕಾಂಗ್ರೆಸ್ - 335713 ಮತಗಳು
1983 - ಎಸ್ . ನಂಜಪ್ಪ - ಜನತಾ ಪಕ್ಷ - 35896 ಮತಗಳು
1985 - ಎಸ್. ನಂಜಪ್ಪ - ಜನತಾಪಕ್ಷ- 33170 ಮತಗಳು
1989 - ಹೆಚ್. ವಿಶ್ವನಾಥ್ - ಕಾಂಗ್ರೆಸ್ -61509 ಮತಗಳು
1994 - ಎಸ್ ನಂಜಪ್ಪ - ಜಾ.ದಳ- 51104 ಮತಗಳು
1999 - ಹೆಚ್. ವಿಶ್ವನಾಥ್ - ಕಾಂಗ್ರೆಸ್ - 58161 ಮತಗಳು
2004 - ಮಹದೇವ -ಜಾ.ದಳ - 40341 ಮತಗಳು
2008 - ಸಾ ರಾ ಮಹೇಶ್ - ಜಾ. ದಳ - 77322 ಮತಗಳು
2013 - ಸಾ ರಾ ಮಹೇಶ್ - ಜಾ.ದಳ - 81457 ಮತಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
K R Nagar is of the most important constituencies in Karnataka assembly elections 2018. There will be tough fight between Congress and JDS in this elections. Here is a brief history and importance of KR Nagar constituency

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ