ಮೈಸೂರಿನಲ್ಲಿ ಕುಸ್ತಿಯಾಡಿದ ಆಸ್ಟ್ರೇಲಿಯ ಕ್ರಿಕೆಟಿಗ ಬ್ರೇಟ್ ಲೀ!

Posted By:
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 8 : ಕುಸ್ತಿ ಅಂದ್ರೆ ಸಾಕು ಥಟ್ಟೆಂದು ನೆನಪಾಗೋದು ನಮ್ಮ ಪೈಲ್ವಾನ್ ಗಳು. ವಿದೇಶಿಯರೆಲ್ಲಿ ಕುಸ್ತಿ ಅಷ್ಟಕ್ಕಷ್ಟೆ. ಅವರೇನಿದ್ರೂ, ಡಬ್ಲ್ಯೂ ಡಬ್ಲ್ಯೂ ಎಫ್ ಅಷ್ಟೇ. ಆದರೆ ಇದಕ್ಕೆ ಸೆಡ್ಡು ಹೊಡೆಯುವಂತೆ ಇಂದು ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟಿಗ ಬ್ರೆಟ್ ಲೀ ಕುಸ್ತಿ ಅಖಾಡಕ್ಕೆ ಇಳಿದು ತೊಡೆ ತಟ್ಟಿ ನಿಂತಿದ್ರು.

ಮೈಸೂರು ಅರಮನೆ ಸೌಂದರ್ಯಕ್ಕೆ ಬೆರಗಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ

ಮೈಸೂರಿನ ಮಾನಸ ಗಂಗೋತ್ರಿಯ ಗ್ಲೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಕೆಪಿಎಲ್ ಪಂದ್ಯಾವಳಿಯ ವೀಕ್ಷಕ ವಿವರಣೆಗಾರರಾಗಿ ಆಗಮಿಸಿದ ಆಸ್ಟ್ರೇಲಿಯಾದ ಬ್ರೆಟ್ ಲೀ. ಅವರು ಮೈಸೂರಿಗೆ ಬಂದ ದಿನದಿಂದಲೂ ಇಲ್ಲಿನ ಪ್ರತಿಯೊಂದು ವಿಷಯವನ್ನು ಅಚ್ಚರಿಯಿಂದ ಕೇಳಿ ತಿಳಿಯುತ್ತಿರುವುದಲ್ಲದೇ, ಖುದ್ದು ಪರೀಕ್ಷೆ ನಡೆಸುತ್ತಿದ್ದರು.

Brett Lee performs wrestling in Mysuru

ಗುರುವಾರವೂ ಹಾಗೆಯೇ ನಡೆಯಿತು. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ವಿವಿಧೋದ್ದೇಶ ಕ್ರೀಡಾಂಗಣದ ಕುಸ್ತಿ ಅಖಾಡದಲ್ಲಿ ಬ್ರೇಟ್ ಲಿ ಕೆಲವರೊಂದಿಗೆ ಕುಸ್ತಿಗಿಳಿದಿದ್ದರು. ಗುರುವಾರ ಒಂದೇ ಪಂದ್ಯವಿದ್ದ ಕಾರಣ ಸ್ವಲ್ಪ ಫ್ರೀ ಆಗಿದ್ದ ಅವರು ಮೈಸೂರಿನ ಮಲ್ಲಯುದ್ಧ ಕುಸ್ತಿಯ ಕುರಿತು ತಿಳಿದುಕೊಂಡಿದ್ದರು.

ಆದರೆ ಅಷ್ಟಕ್ಕೇ ಕೈಕಟ್ಟಿ ಕೂರದೇ ತಾವೂ ಅಖಾಡಕ್ಕಿಳಿದರು. ಮೊದಲು ಕುಸ್ತಿ ಅಖಾಡಕ್ಕಿಳಿದ ಫೈಲ್ವಾನ್ ರ ಚಲನವಲನವನ್ನು ತದೇಕಚಿತ್ತರಾಗಿ ವೀಕ್ಷಿಸಿದ ಅವರು ನಂತರ ತಾನು ಚಡ್ಡಿ ಬನಿಯನ್ ನೊಂದಿಗೆ ಅಖಾಡಕ್ಕಿಳಿದರು. ಮಟ್ಟಿಗೆ ನಮಸ್ಕರಿಸಿ ಕುಸ್ತಿಗಿಳಿದು ಎದುರಾಳಿಗಳನ್ನು ಮಣ್ಣು ಮುಕ್ಕಿಸಿದರು.

Brett Lee performs wrestling in Mysuru

ಬ್ರೇಟ್ ಲಿ ವಿಜಯಿ ಅಂತ ಅವರ ಕೈ ಮೇಲಕ್ಕೆತ್ತುವ ಮೂಲಕ ಸೂಚಿಸಲಾಯಿತು. ಕೊನೆಗೂ ಗೆಲುವು ಸಾಧಿಸಿ ಪ್ರೇಕ್ಷಕರ ಮನಗೆದ್ದರು. ಬ್ರೇಟ್ ಲೀ ಪರ ಘೋಷಣೆಗಳು ಮೊಳಗಿದವು. ಮೈಸೂರಿಗೆ ಆಗಮಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australian cricketer brett lee performed wrestling in Mysuru on Sep 7th. He has come to mysuru as a commentator for KPL cricket matches.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ